ಟೀಂ ಇಂಡಿಯಾದ ವೇಳಾಪಟ್ಟಿ ರಿಲೀಸ್‌..? 8 ತಿಂಗಳಲ್ಲಿ 33 ಪಂದ್ಯಗಳನ್ನು ಆಡಲಿದ್ದಾರೆ ಬ್ಯೂ ಬಾಯ್ಸ್‌..!

Team India: ಜೂನ್ 28 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ದಿನ. 11 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿ, ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ T20 ವಿಶ್ವಕಪ್ 2024 ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಆಟ ಪ್ರದರಶಿಸುವ ಮೂಲಕ ಭಾರತ ತಂಡ ಜಯ ದಾಖಲಿಸಿದೆ.  

Written by - Zee Kannada News Desk | Last Updated : Jul 2, 2024, 11:11 AM IST
  • ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2007ರ ಚೊಚ್ಚಲ T20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ, 17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ ಎತ್ತ ಸಂಭ್ರಮಿಸಿದೆ.
  • ಚಾಂಪಿಯನ್ಸ್ ಟ್ರೋಫಿ ಜತೆಗೆ ಡಬ್ಲ್ಯುಟಿಸಿ ಪ್ರಶಸ್ತಿ ಗೆಲ್ಲುವುದು ಟೀಂ ಇಂಡಿಯಾದ ಮುಂದಿನ ಗುರಿಯಾಗಿದೆ.
  • 8 ವರ್ಷಗಳ ಸುದೀರ್ಘ ಅಂತರದ ಬಳಿಕ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ಟೂರ್ನಿ ಏಕದಿನ ಮಾದರಿಯಲ್ಲಿ ನಡೆಯುವ ಸಾಧ್ಯತೆ ಇದ್ದು, ಈ ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸಲಿದೆ.
ಟೀಂ ಇಂಡಿಯಾದ ವೇಳಾಪಟ್ಟಿ ರಿಲೀಸ್‌..? 8 ತಿಂಗಳಲ್ಲಿ 33 ಪಂದ್ಯಗಳನ್ನು ಆಡಲಿದ್ದಾರೆ ಬ್ಯೂ ಬಾಯ್ಸ್‌..! title=

Team India: ಜೂನ್ 28 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ದಿನ. 11 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿ, ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ T20 ವಿಶ್ವಕಪ್ 2024 ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಆಟ ಪ್ರದರಶಿಸುವ ಮೂಲಕ ಭಾರತ ತಂಡ ಜಯ ದಾಖಲಿಸಿದೆ.

ಈ ಮೂಲಕ  2013ರ ಚಾಂಪಿಯನ್ಸ್ ಟ್ರೋಫಿ ಬಳಿಕ  ಟೀಂ ಇಂಡಿಯಾ ಐಸಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2007ರ ಚೊಚ್ಚಲ T20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ, 17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ ಎತ್ತ ಸಂಭ್ರಮಿಸಿದೆ. 2024ರ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಮತ್ತೊಂದು ವರ್ಷ ಬ್ಯುಸಿಯಾಗಿ ಇರಲಿದೆ. 

ಆಸ್ಟ್ರೇಲಿಯಾ ಪ್ರವಾಸದಿಂದ ಹಿಡಿದು ಚಾಂಪಿಯನ್ಸ್ ಟ್ರೋಫಿ 2025 ನಂತಹ ಪ್ರಮುಖ ಟೂರ್ನಿಗಳಲ್ಲಿ ಭಾರತದ ಆಟಗಾರರು ಭಾಗವಹಿಸಲಿದ್ದಾರೆ. ಜುಲೈ 6 ರಿಂದ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ, ಬಳಿಕ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. 

ಇದನ್ನೂ ಓದಿ: "ಭಾರತ ಸೋತಿದ್ದರೆ ಕೊಹ್ಲಿ ವಿಲನ್‌ ಆಗುತ್ತಿದ್ದರು, ಪ್ರಶಸ್ತಿಗೆ ಆತ ಅನರ್ಹ...": ಸಂಜಯ್ ಮಂಜ್ರೇಕರ್..!

ಟಿ20 ವಿಶ್ವಕಪ್‌ ಗೆಲುವಿನೊಂದಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕೋಚ್‌ ಅವಧಿಯೂ ಕೊನೆಗೊಂಡಿದ್ದು, ರಾಹುಲ್‌ ತಮ್ಮ ಪಟ್ಟಕ್ಕೆ ಗುಡ್‌ ಬೈ ಹೇಳಿದ್ದಾರೆ. ಬಿಸಿಸಿಐ ಈಗಾಗಲೇ ನೂತನ ಕೋಚ್ ಆಯ್ಕೆ ಪ್ರಕ್ರಿಯೆ ಆರಂಭಿಸಿದ್ದು, ಶೀಘ್ರದಲ್ಲೇ ಭಾರತ ತಂಡದ ಮುಂದಿನ ಕೋಚ್‌ ಯಾರು ಎಂದು ಅಧಿಕೃತ ಘೋಷಣೆ ಮಾಡಲಿದೆ. ಜಿಂಬಾಬ್ವೆ ಪ್ರವಾಸಕ್ಕೆ ಎನ್ ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿದ್ದರೆ, ಶ್ರೀಲಂಕಾ ಪ್ರವಾಸಕ್ಕೆ ಹೊಸ ಕೋಚ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಜತೆಗೆ ಡಬ್ಲ್ಯುಟಿಸಿ ಪ್ರಶಸ್ತಿ ಗೆಲ್ಲುವುದು ಟೀಂ ಇಂಡಿಯಾದ ಮುಂದಿನ ಗುರಿಯಾಗಿದೆ. ಚಾಂಪಿಯನ್ಸ್ ಟ್ರೋಫಿ 2025ಕ್ಕೂ ಮುನ್ನ ಟೀಂ ಇಂಡಿಯಾ 20 ಟಿ20, 10 ಟೆಸ್ಟ್ ಹಾಗೂ 6 ಏಕದಿನ ಪಂದ್ಯಗಳನ್ನು ಆಡಲಿದೆ. 

8 ವರ್ಷಗಳ ಸುದೀರ್ಘ ಅಂತರದ ಬಳಿಕ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ಟೂರ್ನಿ ಏಕದಿನ ಮಾದರಿಯಲ್ಲಿ ನಡೆಯುವ ಸಾಧ್ಯತೆ ಇದ್ದು, ಈ ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸಲಿದೆ. ಭಾರತ ಈ ಪಂದ್ಯ ಆಡಲು ಪಾಕಿಸ್ತಾನಕ್ಕೆ ಹೋಗುತ್ತದೆಯೇ? ಅಥವಾ ಪಾಕಿಸ್ತಾನ ಭಾರತಕ್ಕೆ ಬರುತ್ತದೆಯಾ? ಎಂಬ ಸಂದೇಹವಿದೆ.

ಇದನ್ನೂ ಓದಿ:  T20 World Cup 2024: ಭಾರತದ ಗೆಲುವಿಗೆ ವಿಷ ಉಗುಳಿದ ಆಸೀಸ್‌ ಮಾಧ್ಯಮ..!

2025 ರವರೆಗೆ IPL ಭಾರತದ ವೇಳಾಪಟ್ಟಿ

- ಜುಲೈ 6 ರಿಂದ 14 ವರೆಗೂ ಜಿಂಬಾಬ್ವೆ ಪ್ರವಾಸದಲ್ಲಿ ಐದು T20 ಸರಣಿಗಳು ನಡೆಯಲಿದೆ.
- ಶ್ರೀಲಂಕಾ ಪ್ರವಾಸದಲ್ಲಿ 3 ODI ಮತ್ತು 3 T20 ಸರಣಿಗಳು.
- ಬಾಂಗ್ಲಾದೇಶದಿಂದ ಭಾರತಕ್ಕೆ, 2 ಟೆಸ್ಟ್, 3 ಟಿ20
- ನ್ಯೂಜಿಲೆಂಡ್ ಭಾರತಕ್ಕೆ ಬರಲಿದೆ, ಮೂರು ಟೆಸ್ಟ್‌ಗಳು 
- ಭಾರತವು ದಕ್ಷಿಣ ಆಫ್ರಿಕಾ ಪ್ರವಾಸ, 4 ಟಿ20 ಸರಣಿ 
- ಭಾರತ ಆಸ್ಟ್ರೇಲಿಯಾ ಪ್ರವಾಸ, 5 ಟೆಸ್ಟ್‌ಗಳ ಸರಣಿ 
- ಇಂಗ್ಲೆಂಡ್ ಭಾರತ 3 ODI ಗಳು, 5 T20 ಗಳು 
- ಚಾಂಪಿಯನ್ಸ್ ಟ್ರೋಫಿ 2025 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News