ಮೂಲಭೂತ ಸೌಕರ್ಯಕ್ಕಾಗಿ ಬೆಂಗಳೂರು ವಿ.ವಿ ಬಂದ್ : ಬೇಡಿಕೆ ಈಡೇರದೇ ಇದ್ರೆ ರಾಜಭವನ ಮುತ್ತಿಗೆ ಎಚ್ಚರಿಕೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ತಿಂಗಳ ಒಳಗೆ ಸಮಸ್ಯೆ ಬಗೆಹರಿಯಲೇ ಬೇಕು ಅಲ್ಲದೆ, ಪ್ರತಿಭಟನಾ ಸ್ಥಳಕ್ಕೆ ಬಂದು ರೈಟಿಂಗ್ ಮೂಲಕ ನಮಗೆ ಭರವಸೆ ನೀಡದ್ದಿದ್ದರೆ ರಾಜಭವನಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಅಂತ ವಿವಿ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Written by - Manjunath Hosahalli | Edited by - Krishna N K | Last Updated : Jul 11, 2023, 04:31 PM IST
  • ಬೆಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
  • ರೈಟಿಂಗ್ ಮೂಲಕ ಭರವಸೆ ನೀಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
  • ಬೇಡಿಕೆ ಈಡೇರದಿದ್ದರೆ ರಾಜಭವನ ಮುತ್ತಿಗೆ ಎಚ್ಚರಿಕೆ ನೀಡಿದ್ದಾರೆ.
ಮೂಲಭೂತ ಸೌಕರ್ಯಕ್ಕಾಗಿ ಬೆಂಗಳೂರು ವಿ.ವಿ ಬಂದ್ : ಬೇಡಿಕೆ ಈಡೇರದೇ ಇದ್ರೆ ರಾಜಭವನ ಮುತ್ತಿಗೆ ಎಚ್ಚರಿಕೆ title=

ಬೆಂಗಳೂರು : ಸಿಲಿಕಾನ್ ಸಿಟಿಯ ದಿ ಗ್ರೇಟ್ ವಿಶ್ವವಿದ್ಯಾಲಯ ಎಂದನಸಿಕೊಂಡಿರೋ ಬೆಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಇಂದು ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದಿಂದ ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ತರಗತಿಯನ್ನ ಬಹಿಷ್ಕರಿಸಿ ಇಂದು ಪ್ರತಿಭಟನೆ ನಡೆಸಿದ್ರು. ಹಲವು ದಿನಗಳಿಂದ ಮೂಲಭೂತ ಸೌಕರ್ಯಗಳನ್ನ ಈಡೇರಿಸುವಂತೆ ವಿವಿ ಆಡಳಿತ ಮಂಡಳಿಗೆ ಮನವಿಯನ್ನ ಸಲ್ಲಿಸಿದ್ದೇವೆ. ಆದ್ರೆ ಬೆಂಗಳೂರು ವಿವಿ ಆಡಳಿತ ವಿಭಾಗ ಉದ್ದೇಶಪೂರ್ವಕವಾಗಿ ನ್ಯಾಯ ಸಮ್ಮತವಾಗಿ ಸಿಗಬೇಕಿರುವ ಮೂಲಭೂತ ಸೌಕರ್ಯಗಳನ್ನು ತಡೆಹಿಡಿದಿದ್ದಾರೆ. ಈ ಕುರಿತಾಗಿ ಆಡಳಿತ ಅಧಿಕಾರಿಗಳನ್ನ ಪ್ರಶ್ನಿಸಿದ್ರು ತಲೆ ಕೆಡಿಸಿಳ್ಳುತ್ತಿಲ್ಲ ಅಂತ ಸಾವಿರಾರು ಸಂಖ್ಯೆಯಲ್ಲಿ ವಿಧ್ಯಾರ್ಥಿಗಳು ಸೇರಿ ಪ್ರತಿಭಟಟನೆ ನಡೆಸಿದ್ರು.

ಇದನ್ನೂ ಓದಿ:  ಉಚಿತವಾಗಿ ರಸಗೊಬ್ಬರ ಹಾಗೂ ಕ್ರಿಮಿನಾಶಕ ವಿತರಣೆ: ಬಡ ರೈತಾಪಿ ಜನರಿಗೆ ಅನುಕೂಲ

ವಿದ್ಯಾರ್ಥಿಗಳ ಬೇಡಿಕೆಗಳು ಯಾವುವು ಎಂದು ನೋಡೊದಾದ್ರೆ

  • ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳು ಬೇಕು
  • ಉತ್ತಮ ಹಾಸ್ಟೆಲ್ ವ್ಯವಸ್ಥೆ
  • ಸ್ಮಾರ್ಟ್ ಕ್ಲಾಸ್‌ಗಳು ಬೇಕು 
  • ಗುಣಮಟ್ಟದ ಶೌಚಾಲಯ ಬೇಕು
  • ಇಂಟರ್‌ನೆಟ್ ಸೌಲಭ್ಯ
  • ಸ್ಪೋಕೆನ್ ಇಂಗ್ಲೀಷ್ ಕ್ಲಾಸ್ 
  • ಕಂಪ್ಯೂಟರ್ ಕ್ಲಾಸ್ ಬೇಕು
  • ಸ್ಕಿಲ್ ಡೆವಲಪ್‌ಮೆಂಟ್ ಕ್ಲಾಸ್ 
  • ಕಾಂಪಿಟೇಟಿವ್ ಎಕ್ಸಾಂ ಕ್ಲಾಸ್‌ಗಳು ಬೇಕು 
  • ಉತ್ತಮ ಕ್ಯಾಂಟೀನ್ ವ್ಯವಸ್ಥೆ
  • ಉತ್ತಮ ಲ್ಯಾಬ್‌ಗಳು ಬೇಕು 
  • ಸುಸಜ್ಜಿತ ಕ್ರೀಡಾಂಗಣಗಳು ಬೇಕು
  • ಹೌದು, ಇಷ್ಟು  ಬೇಡಿಗಳನ್ನ ಈಡೇರಿಸವಂತೆ ಕಳೆದ 6 ತಿಂಗಳ ಹಿಂದೆಯಿಂದಲೂ ವಿವಿ ಕುಲಪತಿಗಳು ಹಾಗೂ ವಿವಿ ಕುಲ ಸಚಿವರಿಗೆ ಮನವಿ ಮಾಡಲಾಗಿತ್ತು. ಇದರ ಜೊತೆಗೆ ಹೆಣ್ಣು ಮಕ್ಕಳು ಅನೇಕ ಸಮಸ್ಯೆಗಳನ್ನ ಪ್ರತಿನಿತ್ಯ ಅನುಭವಿಸುತ್ತಿದ್ದಾರೆ. ಈ ಕುರಿತಾಗಿ ಸಂಕ್ಷಿಪ್ತವಾಗಿ ಹೇಳಿದ್ವಿ. ಆದರೂ ಇವರು ಕೇರ್ ಮಾಡ್ತಿಲ್ಲ. ಎಲೆಕ್ಷನ್ ಮುಗಿಲಿ, ನ್ಯಾಕ್ ಸರ್ವೇ ಮುಗಿಲಿ ಅಂತಾ ಸಬೂಬುಗಳನ್ನ ಹೇಳಿಕೊಂಡಿ ಕಾಲಹರಣ ಮಾಡುತ್ತಿದ್ದಾರೆ. ಇನ್ನೊಂದು ತಿಂಗಳ ಒಳಗೆ ಸಮಸ್ಯೆ ಬಗೆಹರಿಯಲೇ ಬೇಕು. ಪ್ರತಿಭಟನಾ ಸ್ಥಳಕ್ಕೆ ಬಂದು ರೈಟಿಂಗ್ ಮೂಲಕ ನಮಗೆ  ಭರವಸೆ ನೀಡದ್ದಿದ್ದರೆ ರಾಜಭವನಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಅಂತ  ವಿವಿ ಆಡಳಿತ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ರು. 

ಇದನ್ನೂ ಓದಿ: ಜೈನ್ ಮುನಿ ಕೊಲೆಗಾರರಿಗೆ ತಕ್ಕ ಶಿಕ್ಷೆ ಆಗಲಿ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹ

ಇತ್ತ ವಿದ್ಯಾರ್ಥಿಗಳ ಪ್ರತಿಭಟನೆ ಜೋರಾಗುತ್ತಿದ್ದಂತೆ ವಿವಿ ಕುಲಪತಿ ಹಾಗೂ ಕುಕಸಚಿವರು ಬಂದು ಪ್ರತಿಭಟನಾನಿರತರ ಬೇಡಿಕೆಯ ಪತ್ರವನ್ನ ಸ್ವೀಕರಿಸಿದ್ರು. ಈ ವೇಳೆ ಮಾತನಾಡಿದ ಕುಲಸಚಿವ ಎಸ್ ಜೈಕಾರ್ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಕೊಡಬೇಕಿತ್ತು. ಆದ್ರೆ ಲ್ಯಾಪ್ ಟಾಪ್ ಕೊಡುವುದಕ್ಕೆ ಟೆಂಡರ್ ಸಮಸ್ಯೆ ಉಂಟಾಯ್ತು. ಈ ಕಾರಣದಿಂದಾಗಿ ಲ್ಯಾಪ್ ಟಾಪ್ ಕೊಡುವುದಕ್ಕೆ ಸಾಧ್ಯ ಆಗಿಲ್ಲ. ಇನ್ನು ಬೇರೆ ಬೇಡಿಕೆಗಳನ್ನ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಈಡೇರುತ್ತೇವೆ ಎಂದು ಭರವಸೆ ನೀಡಿ ತೆರಳಿದ್ರು.

ಒಟ್ನಲ್ಲಿ, ಬೆಂಗಳೂರು ವಿವಿಗೆ ಕಳೆದ ಸಾಲಿನಲ್ಲಿ ನ್ಯಾಕ್ ನಿಂದ ಡಬಲ್ ಎ ಗ್ರೇಡ್ ಬಂದಿದೆ. ಹೀಗಿರುವಾಗ ವಿದ್ಯಾರ್ಥಿಗಳಿಗೆ ಹೇಗೆಲ್ಲ ಸೌಕರ್ಯಗಳನ್ನ ಒದಗಿಸಿ ಕೊಡಬೇಕು ಇಲ್ಲಿನ ಪ್ರಶ್ನೆ. ಆದ್ರೆ ವಿವಿ ಆಡಳಿತ ಅಧಿಕಾರಿಗಳು ಮಾತ್ರ ಭಾರೀ ನಿರ್ಲಕ್ಷ ವಹಿಸಿದ್ದು, ಈ ಕಾರಣ ಪ್ರತಿಭಟನೆ ಮೂಲಕ ವಿಧ್ಯಾರ್ಥಿಗಳ ಮೂಲಭೂತ ಸೌಕರ್ಯಗಳನ್ನ ಪಡೆಯುವ ದುಸ್ಥಿತಿ ಎದುರಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News