ಟ್ರಾಫಿಕ್ ರೂಲ್ಸ್‌ ಉಲ್ಲಂಘಿಸಿದವ್ರಿಗೆ ಟ್ರಾಫಿಕ್‌ ಪೊಲೀಸ್‌ ಶಾಕ್..! 50 ಸಾವಿರ ಫೈನ್‌ ಇದ್ದವರ ವಾಹನ ಸೀಜ್

ಓನ್ ವೇ ನಲ್ಲೇ ಗಾಡಿ ನುಗ್ಗಿಸೋದೇನು. ಕಾರಿನ ಸೀಟ್ ಬೆಲ್ಟ್ ಹಾಕದೆ ಕೆಲವರು ಬಂದ್ರೆ ಸಿಗ್ನಲ್ ಜಂಪ್ ಅಂತು ಕಾಮನ್ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ನಮ್ಮ ಪೊಲೀಸರು ಸುಮ್ಮನೆ ಬಿಡ್ತಾರಾ ಹೇಳಿ. ಫೈನ್ ಮೇಲೆ ಫೈನ್ ಜಡಿದು ಶಾಕ್ ನೀಡಿದ್ದಾರೆ.. ಹೆಚ್ಚಿನ ವಿವರ ಇಲ್ಲಿದ ನೋಡಿ..

Written by - VISHWANATH HARIHARA | Edited by - Krishna N K | Last Updated : Feb 17, 2024, 06:10 PM IST
  • ಸ್ಪಾಟ್ ಫೈನ್ ಹಾಕೋದನ್ನ ಕಡಿಮೆ ಮಾಡಿದ್ದು ಬೈಕ್ ಸವಾರರಿಗೆ ವರದಾನವಾಗಿಬಿಟ್ಟಿದೆ.
  • ಮಗಿಷ್ಟ ಬಂದ ಹಾಗೆ ಓಡಾಡ್ತಿದ್ದಾರೆ. ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡ್ತಿದ್ದಾರೆ.
  • ಇದೀಗ 50 ಸಾವಿರಕ್ಕು ಅಧಿಕ ಫೈನ್ ಇರೊ ವಾಹನ ಚಾಲಕರಿಗೆ ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದಾರೆ.
ಟ್ರಾಫಿಕ್ ರೂಲ್ಸ್‌ ಉಲ್ಲಂಘಿಸಿದವ್ರಿಗೆ ಟ್ರಾಫಿಕ್‌ ಪೊಲೀಸ್‌ ಶಾಕ್..! 50 ಸಾವಿರ ಫೈನ್‌ ಇದ್ದವರ ವಾಹನ ಸೀಜ್ title=

ಬೆಂಗಳೂರು : ಸಂಚಾರಿ ಪೊಲೀಸರು ಯಾವಾಗ ಸ್ಪಾಟ್ ಫೈನ್ ಹಾಕೋದನ್ನ ಕಡಿಮೆ ಮಾಡಿದ್ರೊ ಬೈಕ್ ಸವಾರರಿಗೆ ಅದು ವರದಾನವಾಗಿಬಿಟ್ಟಿದೆ. ತಮಗಿಷ್ಟ ಬಂದ ಹಾಗೆ ಓಡಾಡ್ತಿದ್ದಾರೆ. ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡ್ತಿದ್ದಾರೆ. ಆದರೆ ಅವರ ಅರಿವಿಗೆ ಇಲ್ಲದೇನೆ ಬೈಕ್ ಮೇಲೆ ಹನುಮನ ಬಾಲದ ರೀತಿ ದಂಡದ ಮೊತ್ತ ಏರಿಕೆ ಆಗ್ತಾ ಹೋಗ್ತಿದೆ. ಹೀಗೆ 50 ಸಾವಿರಕ್ಕು ಅಧಿಕ ಫೈನ್ ಇರೊ ವಾಹನ ಚಾಲಕರಿಗೆ ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದಾರೆ.

ಹೆಲ್ಮೆಟ್ ಇಲ್ಲದೇ ಓಡಾಡೋದೇನು, ತ್ರಿಬಲ್ ರೈಡಿಂಗ್ ಹೋಗೋದೇನು. ‌ಸಾಲದಕ್ಕೆ ಓನ್ ವೇ ನಲ್ಲೇ ಗಾಡಿ ನುಗ್ಗಿಸೋದೇನು. ಕಾರಿನ ಸೀಟ್ ಬೆಲ್ಟ್ ಹಾಕದೆ ಕೆಲವರು ಬಂದ್ರೆ ಸಿಗ್ನಲ್ ಜಂಪ್ ಅಂತು ಕಾಮನ್ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ನಮ್ಮ ಪೊಲೀಸರು ಸುಮ್ಮನೆ ಬಿಡ್ತಾರಾ ಹೇಳಿ. ಫೈನ್ ಮೇಲೆ ಫೈನ್ ಜಡಿದು ಶಾಕ್ ನೀಡಿದ್ದಾರೆ..

ಇದನ್ನೂ ಓದಿ:ಪೊಲೀಸರು ನನ್ನ ಬಂಧಿಸಿಲ್ಲ..! ʼಇಡ್ಲಿಗುರುʼ ಹೊಟೇಲ್ ಮಾಲೀಕನ ಸ್ಪಷ್ಟನೆ 

ಇತ್ತೀಚೆಗೆ ನಗರದಲ್ಲಿ ವಾಹನ ಸವಾರರಿಂದ ಸಂಚಾರ ನಿಯಮ‌ ಉಲ್ಲಂಘನೆ ಪ್ರಕರಣಗಳು ಅಧಿಕಗೊಂಡಿದೆ. ಹಾಗಾಗಿ 50 ಸಾವಿರಕ್ಕಿಂತ ಹೆಚ್ಚು ದಂಡವಿರುವ ಸವಾರನ ಮನೆ ಬಾಗಿಲಿಗೆ ನೋಟಿಸ್ ನೀಡಿ ದಂಡ ವಸೂಲಿ ಮಾಡೋದಾಗಿ ಎಚ್ಚರಿಕೆ ಕೊಟ್ಟಿದ್ದ ಸಂಚಾರ ಪೊಲೀಸರು ಅದನ್ನ ಕಾರ್ಯರೂಪಕ್ಕೆ ತಂದಿದ್ದಾರೆ.
 
50 ಸಾವಿರಕ್ಕಿಂತ ಹೆಚ್ಚು ದಂಡವಿರುವ 84 ಬೈಕ್ ಹಾಗೂ ಒಂದು ಕಾರನ್ನ ದಕ್ಷಿಣ ವಿಭಾಗ ಸಂಚಾರ ಪೊಲೀಸರು ಸೀಜ್ ಮಾಡಿದ್ದಾರೆ. ಈ ವಾಹನಗಳ ಮೇಲೆ 10,210 ಸಾವಿರ ಉಲ್ಲಂಘನಾ ಪ್ರಕರಣಗಳು ದಾಖಲಾಗಿದ್ದು‌ ಸುಮಾರು 1.07 ಕೋಟಿ ರೂಪಾಯಿ ದಂಡ ಸಂಗ್ರಹಿಸಬೇಕಿದೆ. ಸಂಚಾರ ಪೊಲೀಸರ ಬದಲಾಗಿ ಆತ್ಯಾಧುನಿಕಾ ಕ್ಯಾಮರಗಳಿಂದ‌ ಸೆರೆಯಾಗುವ ಪೋಟೊ ಆಧಾರದ ಮೇರೆಗೆ ಪ್ರಕರಣಗಳನ್ನ‌ ದಾಖಲಿಸಿಕೊಳ್ಳಲಾಗುತ್ತಿದ್ದು, ಪೊಲೀಸರು ಅಡ್ಡಗಟ್ಟುವುದಿಲ್ಲ ಎಂದು ಭಾವಿಸಿ ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್, ಸೀಟ್ ಬೆಲ್ಟ್ ಹಾಕದಿರುವುದು ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿತ್ತು. ಅಂತಹವರಿಗೆ ಈಗ ಶಾಕ್ ಎದುರಾಗಿದೆ.

ಇದನ್ನೂ ಓದಿ:APMC ಗೋದಾಮಿನಲ್ಲಿ ಡಾ. ಬಿ ಆರ್‌ ಅಂಬೇಡ್ಕರ್‌ ವಸತಿ ಶಾಲೆ

ಟ್ರಾಫಿಕ್ ವೈಯಲೇಷನ್ ಮಾಡುವವವರ ವಿರುದ್ಧ ಹಾಗೂ ಮುಖ್ಯವಾಗಿ 50 ಸಾವಿರಕ್ಕಿಂತ ಹೆಚ್ಚು ದಂಡ ಹೊಂದಿರುವ ಸವಾರರ ವಿರುದ್ಧ‌ ಕ್ರಮ‌ಕೈಗೊಳ್ಳುವಂತೆ ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಎಂ.ಎನ್‌.ಅನುಚೇತ್ ನಗರದ ಎಲ್ಲಾ ವಲಯದ ಡಿಸಿಪಿಗಳಿಗೆ ಸೂಚಿಸಿದ್ದರು. ಇದರಂತೆ ಕಾರ್ಯಾಚರಣೆ ಕೈಗೊಂಡ ದಕ್ಷಿಣ ವಿಭಾಗದ ಡಿಸಿಪಿ ಶಿವರಾಜ್ ದೇವರಾಜ್‌ ನೇತೃತ್ವದ ತಂಡ ಕಳೆದ ಎರಡು-ಮೂರು ದಿನಗಳಿಂದ ಕಾರ್ಯಾಚರಣೆ ಕೈಗೊಂಡು 84 ಬೈಕ್ ಹಾಗೂ ಒಂದು ಕಾರು ವಶಕ್ಕೆ ಪಡೆದುಕೊಂಡಿದ್ದಾರೆ. 

ಸೀಜ್ ಮಾಡಲಾದ ಎಲ್ಲಾ ವಾಹನಗಳ ಮೇಲೆ‌ 50 ಸಾವಿರಕ್ಕಿಂತ ಹೆಚ್ಚು ದಂಡವಿರುವುದು ಕಂಡು ಬಂದಿದೆ. ಒಟ್ಟಾರೆ 10 ಸಾವಿರಕ್ಕಿಂತ ಹೆಚ್ಚು ಸಂಚಾರ ಉಲ್ಲಂಘನೆ ಪ್ರಕರಣಗಳಿದ್ದು 1 ಕೋಟಿ ರೂಪಾಯಿ ದಂಡವಿದೆ.‌ ಸದ್ಯ ಎಲ್ಲಾ ವಾಹನಗಳನ್ನ‌ ಸೀಜ್‌ ಮಾಡಿ ವಾಹನ ಮಾಲೀಕರಿಗೆ ನೊಟೀಸ್ ಕಳುಹಿಸಲಾಗಿದೆ..ದಂಡ ಕಟ್ಟಿಲ್ಲ ಅಂದ್ರೆ  ಚಾರ್ಜ್ ಶೀಟ್ ಸಲ್ಲಿಸಿ ಕೋರ್ಟ್ ಗೆ ಹಾಜರುಪಡಿಸಲಾಗುವುದು ಎಂದು ಎಚ್ಚರಿಕೆ ಕೊಟಿದ್ದು. ಆನ್ ಲೈನ್ ಮೂಲಕವೂ ದಂಡ ಕಟ್ಬಬಹುದು ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News