ಬೇಕಾಬಿಟ್ಟಿ ಒನ್ ವೇನಲ್ಲಿ ಚಾಲನೆ ಮಾಡ್ತಿದ್ದವರಿಗೆ ಶಾಕ್
ಬೆಂಗಳೂರು ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ
ಒಂದೂವರೆ ಗಂಟೆಯಲ್ಲಿ 2 ಲಕ್ಷ 64 ಸಾವಿರ ದಂಡ ವಸೂಲಿ
ಒಂದೂವರೆ ಗಂಟೆ ಅವಧಿಲ್ಲಿ ಬರೊಬ್ಬರಿ 525 ಕೇಸ್ ದಾಖಲು
ದ್ವಿಚಕ್ರ ವಾಹನ ಸವಾರರ ಮೇಲೆಯೇ ಬರೊಬ್ಬರಿ 423 ಕೇಸ್
ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ನಿವಾರಿಸಲು ತಾಂತ್ರಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಎಂಐಟಿ) ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಮಹತ್ತರ ಒಂಪ್ಪದಕ್ಕೆ (ಎಂಒಯು) ಸಹಿ ಹಾಕಿದೆ.
ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ವಾಹನಗಳ ದಂಡವಸೂಲಿ ಮಾಡುವುದು ಬೆಂಗಳೂರು ಸಂಚಾರಿ ಪೊಲೀಸರಿಗೆ ಒಂದು ದೊಡ್ಡ ಸವಾಲಾಗಿದೆ. ಹೀಗಾಗಿ ಬೇರೆ ಜಿಲ್ಲೆಯಿಂದ ಬರುವ ವಾಹನಗಳ ಮೇಲೆ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿರುವ ಟ್ರಾಫಿಕ್ ಪೋಲಿಸ್ ಪಡೆ, ಟೋಲ್ಗೇಟ್ನಲ್ಲಿಯೇ ಕೇಸ್ ಕ್ಲಿಯರ್ ಮಾಡಲು ಭರ್ಜರಿ ಪ್ಲಾನ್ ರೂಪಿಸಿದೆ.
ಗೂಡ್ಸ್ ವಾಹನಗಳನ್ನ ಬೆಳಗಿನ ಅವಧಿಯಲ್ಲಿ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಿದ್ದು ಈ ಹಿಂದೆ 25 ನಿಮಿಷಗಳ ಪ್ರಯಾಣವನ್ನ ಏಳೆಂಟು ನಿಮಿಷಗಳಿಗೆ ಇಳಿಸಲಾಗಿದೆ ಎಂದು ಸಂಚಾರಿ ವಿಭಾಗದ ವಿಶೇಷ ಆಯುಕ್ತ ಡಾ.ಎಂ.ಸಲೀಂ ತಿಳಿಸಿದ್ದಾರೆ.
ನಗರದಲ್ಲಿ ಸ್ಥಗಿತಗೊಳಿಸಲಾಗಿರುವ ಟೋಯಿಂಗ್ ವ್ಯವಸ್ಥೆಯನ್ನು ಪುನಃ ಜಾರಿ ಗೊಳಿಸುವ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.