ಕತುವಾ, ಉನ್ನಾವೋ ಪ್ರಕರಣದ ವಿರುದ್ದ ಧ್ವನಿ ಎತ್ತಿದ ಬೆಂಗಳೂರಿಗರು

    

Last Updated : Apr 16, 2018, 03:53 PM IST
ಕತುವಾ, ಉನ್ನಾವೋ ಪ್ರಕರಣದ ವಿರುದ್ದ ಧ್ವನಿ ಎತ್ತಿದ ಬೆಂಗಳೂರಿಗರು title=

ಬೆಂಗಳೂರು: ಉನ್ನಾವೋ ಮತ್ತು ಕತುವಾ ಅತ್ಯಾಚಾರ ಪ್ರಕರಣಗಳ ವಿಚಾರವಾಗಿ ಭಾನುವಾರದಂದು ಬೀದಿಗೆ ಇಳಿದ  ಬೆಂಗಳೂರಿನ ನಾಗರೀಕರು #MyStreetMyProtest ಪ್ರತಿಭಟನೆಯಲ್ಲಿ ಭಾಗವಹಿಸಿದರು. 

ನಗರದ ಪ್ರಮುಖ ಭಾಗಗಳಾದ ರಿಚ್ಮಂಡ್ ಟೌನ್ ಪಾರ್ಕ್, ಕೇಂಬ್ರಿಜ್ ಲೇಔಟ್, ಕೋರಮಂಗಲನಲ್ಲಿ ನೂರಾರು ಜನರು ಜಮಾಯಿಸಿ ಪ್ರತಿಭಟನೆ ಮಾಡಿದರು.#MyStreetMyProtest ಚಳುವಳಿಯು ಪ್ರಮುಖವಾಗಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುತ್ತಿರುವ ಘಟನೆಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಹಮ್ಮಿಕೊಲ್ಲಲಾಗಿತ್ತು,ಮತ್ತು ಉನ್ನಾವೋ ಮತ್ತು ಕತುವಾ ಕೃತ್ಯಗಳನ್ನು ಎಸೆಗಿದರವರ ಮೇಲೆ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 
  
ಉತ್ತರ ಪ್ರದೇಶದ ಉನ್ನಾವೋ ಮತ್ತು ಜಮ್ಮು ಕಾಶ್ಮೀರದ ಕತುವಾದಲ್ಲಿ ಪ್ರಕರಣಗಳಲ್ಲಿ ವಿಚಾರರವಾಗಿ ಬೆಂಗಳೂರಿನ ನಾಗರಿಕರು ಬ್ಯಾನರ್ ಮತ್ತು ಪೋಸ್ಟರ್ ಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಜಮಾಹಿಸಿ ಸರ್ಕಾರವು ಇಂತಹ ಹೇಯ ಕೃತ್ಯ ಗಳನ್ನೂ ತಡೆಗಟ್ಟುವ ನಿಟ್ಟಿನಲ್ಲಿ  ಸೂಕ್ತ ಕ್ರಮಗಳು ಅಗತ್ಯವೆಂದು ತಿಳಿಸಿದರು.

ಉನ್ನಾವೋ ಘಟನೆ ಸಂಭವಿಸಿದಾಗ ಅದರಲ್ಲಿ ಬಿಜೆಪಿ ಶಾಸಕ ಭಾಗಿಯಾಗಿರುವ ಕಾರಣ ದೂರು ದಾಖಲಿಸಲು ನಿರಾಕರಿಸಿದ್ದರು. ಅದೇ ರೀತಿ ಕತುವಾದಲ್ಲಿ ಎಂಟು ವರ್ಷದ ಬಾಲಕಿನನ್ನು ಅಪಹರಿಸಿ, ಅತ್ಯಾಚಾರ ಮಾಡಿ, ನಂತರ ಕೊಲೆ ಮಾಡಲಾಗಿತ್ತು. ಈ ಎರಡು ಘಟನೆಗಳಿಂದ ದೇಶದಲ್ಲೆಡೆ ಪ್ರತಿಭಟನೆಗಳು ವ್ಯಕ್ತವಾಗಿದ್ದವು.

Trending News