Road Accident : KSRTC ಬಸ್ - ಕಾರು ಮುಖಾಮುಖಿ ಡಿಕ್ಕಿ : ಐವರು ವಿದ್ಯಾರ್ಥಿಗಳು ಸಾವು 

ಬಸ್ - ಕಾರು(KSRTC Bus and Car) ಮುಖಾಮುಖಿ ಡಿಕ್ಕಿ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ರೆ, ಆಸ್ಪತ್ರೆಗೆ ಸಾಗಿಸೋ ಮಾರ್ಗಮಧ್ಯೆ ಓರ್ವ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸೂಕ್ತಪರಿಹಾರಕ್ಕೆ ಸಂಬಂಧಿಕರು ಆಗ್ರಹಿಸಿದ್ದಾರೆ.

Written by - Zee Kannada News Desk | Last Updated : Mar 22, 2022, 07:22 PM IST
  • ಕೆಎಸ್​ಆರ್​ಟಿಸಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ
  • ಐವವರು ವಿದ್ಯಾರ್ಥಿಗಳ ಸಾವು
  • ಡಿಕ್ಕಿ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ರೆ,
Road Accident : KSRTC ಬಸ್ - ಕಾರು ಮುಖಾಮುಖಿ ಡಿಕ್ಕಿ : ಐವರು ವಿದ್ಯಾರ್ಥಿಗಳು ಸಾವು  title=

ಹಾಸನ : ಕೆಎಸ್​ಆರ್​ಟಿಸಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಸಂಕೇನಹಳ್ಳಿ ಗ್ರಾಮದ ಬಳಿ ಸಮೀಪದಲ್ಲಿ ನಡೆದಿದೆ.

ಬಸ್ - ಕಾರು(KSRTC Bus and Car) ಮುಖಾಮುಖಿ ಡಿಕ್ಕಿ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ರೆ, ಆಸ್ಪತ್ರೆಗೆ ಸಾಗಿಸೋ ಮಾರ್ಗಮಧ್ಯೆ ಓರ್ವ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸೂಕ್ತಪರಿಹಾರಕ್ಕೆ ಸಂಬಂಧಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಜೂಜು ಅಡ್ಡೆ ಮೇಲೆ ಚಿಕ್ಕಬಳ್ಳಾಪುರ ಪೊಲೀಸರ ದಾಳಿ, 19 ಜನ ಅರೆಸ್ಟ್

ಬೇಲೂರಿನಿಂದ ಹಾಸನದ ಕಡೆ ತೆರಳುತ್ತಿದ್ದ ವಿದ್ಯಾರ್ಥಿಗಳಿದ್ದ ಆಲ್ಟೋ ಕಾರು(Alto Car) ಬೆಂಗಳೂರಿನಿಂದ ಚಿಕ್ಕಮಗಳೂರು ಕಡೆ ತೆರಳುತ್ತಿದ್ದರು. ಎದುರಿನಿಂದ ಬಂದ ಸಾರಿಗೆ ಬಸ್‌ಗೆ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ವಿದ್ಯಾರ್ಥಿ ಹಾಸನದ ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ಸಾಗಿಸೋ ವೇಳೆ ಮೃತಪಟ್ಟಿದ್ದಾನೆ.

ಸಾವನ್ನಪ್ಪಿರೋ ವಿದ್ಯಾರ್ಥಿಗಳು(Students) ಬೇಲೂರು ಪಟ್ಟಣ ನಿವಾಸಿಗಳೇ ಆಗಿದ್ದು, ನಾಲ್ವರು ಬೇಲೂರಿನ ವಿದ್ಯಾ ವಿಕಾಸ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಓರ್ವ ಹಾಸನ ನಗರದ ಎನ್ ಡಿಆರ್ ಕೆ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದರು. ಹಾಸನದಲ್ಲಿ ಓದ್ತಿರೋ ರಿಹಾನ್ ಪಾಷಾನ ಅಡ್ಮಿಶನ್ ಟಿಕೇಟ್ ತರೋದಕ್ಕೆ ಹೋಗ್ತಿದ್ರು ಅಂತಾ ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಹಸನ್ ಮೋಹಿನ್(20) ರಿಹಾನ್ ಪಾಷಾ (19 ) ಮೊಹಮ್ಮದ್ ಕೈಫ್ (18), ಮೊಹಮ್ಮದ್ ಜಿಲಾನಿ (20), ಅಕ್ಮಲ್ ಪಾಷಾ (19) ಸಾವಿಗೀಡಾದ ವಿದ್ಯಾರ್ಥಿಗಳಾಗಿದ್ದಾರೆ. ಘಟನೆಗೆ ಅತಿ ವೇಗದಿಂದ ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡುವಾಗ ಎದುರಿನಿಂದ ಬಂದ ಬಸ್‌ನ್ನು ಗಮನಿಸದೇ ಮುನ್ನುಗ್ಗಿದ್ದೇ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದು ಪೊಲೀಸರ ತನಿಖೆ ನಂತರವಷ್ಟೇ ಘಟನೆಗೆ ಸರಿಯಾದ ಕಾರಣ ಸಿಗಬೇಕಿದೆ.

ಇದನ್ನೂ ಓದಿ : ಕುದುರೆಗಾಡಿ ಸ್ಪರ್ಧೆಯಲ್ಲಿ ಅಚಾತುರ್ಯ; ವ್ಯಕ್ತಿಯ ಮೇಲೆರಗಿ ಬಂತು ಕುದುರೆ..! ಇಲ್ಲಿದೆ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News