Ahinda Samavesha: ಸಿದ್ದರಾಮಯ್ಯ ಅಹಿಂದ ಸಮಾವೇಶಕ್ಕೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್

ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಅಹಿಂದ ಸಮಾವೇಶ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಸಿರು ನಿಶಾನೆ ತೋರಿಸಿದ್ದಾರೆ. 

Written by - Ranjitha R K | Last Updated : Feb 16, 2021, 07:40 PM IST
  • ದಿಢೀರ್ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿದ ಸಿದ್ದರಾಮಯ್ಯ
  • ಅಹಿಂದ ಸಮಾವೇಶದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟ ಮಾಜಿ ಸಿಎಂ
  • ವರಿಷ್ಠರ ಭೇಟಿ ಬಳಿಕ ಸಿದ್ದರಾಮಯ್ಯ ಹೇಳಿದ್ದೇನು..?
Ahinda Samavesha: ಸಿದ್ದರಾಮಯ್ಯ ಅಹಿಂದ ಸಮಾವೇಶಕ್ಕೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ title=
ದಿಢೀರ್ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿದ ಸಿದ್ದರಾಮಯ್ಯ (photo twitter)

ಬೆಂಗಳೂರು : ಸಿದ್ದರಾಮಯ್ಯ (Siddaramaih) ಅವರ ಮಹತ್ವಾಕಾಂಕ್ಷೆಯ ಅಹಿಂದ ಸಮಾವೇಶ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಸಿರು ನಿಶಾನೆ ತೋರಿಸಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನು (Rahul Gandhi) ಭೇಟಿ ಮಾಡಿದ ಸಿದ್ದರಾಮಯ್ಯ, ಅಹಿಂದ ಸಮಾವೇಶದ ಅಗತ್ಯವನ್ನು ಅವರಿಗೆ ಮನವರಿಕೆ ಮಾಡಿಸಿಕೊಟ್ಟಿದ್ದಾರೆ. 

ರಾಹುಲ್ ಗಾಂಧಿಯನ್ನು ಒಪ್ಪಿಸಿದ್ದು ಹೇಗೆ..?
ಕಳೆದ ಒಂದು ವರ್ಷದಿಂದ ದೆಹಲಿ ಕಡೆ ಮುಖಮಾಡದ ಸಿದ್ದರಾಮಯ್ಯ (Siddaramaih)  ಇಂದು ದಿಢೀರ್ ದೆಹಲಿಗೆ ದೌಡಾಯಿಸಿದ್ದರು. ಜೊತೆಗೆ ಹೈಕಮಾಂಡ್ (High command) ಭೇಟಿ ಮಾಡಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಜೊತೆಗೂ ಚರ್ಚೆ ನಡೆಸಿದ್ದಾರೆ. `ಕುರುಬ ಮೀಸಲಾತಿ (Kuruba Reservation) ವಿಚಾರದಲ್ಲಿ ಬಿಜೆಪಿ (BJP) ಕುತಂತ್ರ ಮಾಡುತ್ತಿದೆ. ಕುರುಬರನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದೆ. ಕುರುಬರ ಮತ ಒಡೆಯಲು ಮೀಸಲಾತಿ ಅಸ್ತ್ರ ಬಿಟ್ಟಿದೆ.  ಇದಕ್ಕೆ ಪ್ರತ್ಯಸ್ತ್ರವಾಗಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ ವರ್ಗದ ಜನರನ್ನು ಒಗ್ಗೂಡಿಸಬೇಕು' ಎಂದು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಗೆ ಹೇಳಿದ್ದರು ಎನ್ನಲಾಗಿದೆ. ಇದಕ್ಕೆ ಒಂದೇ ಮಾತಿನಿಂದ ಸಮ್ಮತಿಸಿದ ರಾಹುಲ್ ಗಾಂಧಿ, ಪಕ್ಷಕ್ಕೆ ಒಳ್ಳೆಯದಾಗುವುದಾದರೆ ಅಹಿಂದ ಸಮಾವೇಶ ಅಷ್ಟೇ ಅಲ್ಲ, ಯಾವುದೇ ಸಮಾವೇಶ ಆಯೋಜಿಸಿ ಎಂದು ಹೇಳಿದರು ಎನ್ನಲಾಗಿದೆ.  ರಾಹುಲ್ ಗಾಂಧಿ ಭೇಟಿ ನಂತರ ಮಾತನಾಡಿದ ಸಿದ್ದರಾಮಯ್ಯ, ರಾಹುಲ್ ಗಾಂಧಿಯವರೊಂದಿಗೆ ರಾಜಕೀಯ ಮಾತಾಡಿದ್ದೇನೆ. ಅಹಿಂದ ಸಮಾವೇಶದ ಬಗ್ಗೆ ಏನೂ ಮಾತನಾಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : Siddaramaiah: 'ಅಯೋಧ್ಯೆಯ ಶ್ರೀರಾಮ ಮಂದಿರ ಕಟ್ಟೋದಕ್ಕೆ ದೇಣಿಗೆ ಕೊಡಲ್ಲ'
 
ಸಂಚಲನ ಸೃಷ್ಟಿಸಿದ್ದ ಸಿದ್ದರಾಮಯ್ಯ `ಅಹಿಂದ' ಅಸ್ತ್ರ : 
ಮಾರ್ಚ್ ಅಂತ್ಯಕ್ಕೆ ಸಿದ್ದರಾಮಯ್ಯ ಅಹಿಂದ ಸಮಾವೇಶ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಹೆಚ್ ಸಿ ಮಹಾದೇವಪ್ಪ (HC Mahadevappa) ಅವರನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಹರಿದಾಡಿತ್ತು. ಇದು ರಾಜ್ಯ ರಾಜಕಾರಣದಲ್ಲೊಂದು ಸಂಚಲನ ಸೃಷ್ಟಿಸಿತ್ತು. ಅಷ್ಟೇ ಅಲ್ಲ, ಸ್ವಪಕ್ಷೀಯರ ವಿರೋಧಕ್ಕೂ ಕಾರಣವಾಗಿತ್ತು.  ಈ  ಬಗ್ಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಅಹಿಂದ ಸಮಾವೇಶದ ಬದಲು, ರಾಜ್ಯಾದ್ಯಂತ ಕಾಂಗ್ರೆಸ್ (Congress) ಸಮಾವೇಶ ಮಾಡುವೆ ಎಂದು ಹೇಳಿದ್ದರು. 

ನಿಮಗಿದು ತಿಳಿದಿರಲಿ.!
2005ರಲ್ಲಿ ಸಿದ್ದರಾಮಯ್ಯ  ಜೆಡಿಎಸ್ ನಲ್ಲಿದ್ದಾಗ (JDS) ಅಹಿಂದ ಸಮಾವೇಶ ನಡೆಸಿದ ಕಾರಣ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. 2006ರಲ್ಲಿ ಅವರು ಕಾಂಗ್ರೆಸ್ ಸೇರ್ಪಡೆಯಾದರು. 2013ರಲ್ಲಿ ಸಿದ್ದರಾಮಯ್ಯ ಮತ್ತೆ ಅಹಿಂದ ಸಮಾವೇಶ (Ahinda Samavesha) ನಡೆಸಿದ್ದರು. ಅಹಿಂದ ವರ್ಗದ ಮತಗಳನ್ನು ಕ್ರೋಢೀಕರಿಸುವ ಯತ್ನ ಮುಂದುವರಿಸಿದ್ದರು. ಸಿದ್ದರಾಮಯ್ಯ ಈ ತಂತ್ರ ಫಲ ನೀಡಿತ್ತು. ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಕೈಗೆ ಅಧಿಕಾರ ನೀಡಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅದೇ ತಂತ್ರಗಾರಿಕೆಯನ್ನು ಪುನರಾವರ್ತಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

ಇದನ್ನೂ ಓದಿ : Satish Jarkiholi: ಬೆಳಗಾವಿ ಬೈಎಲೆಕ್ಷನ್‌ ಗೆಲ್ಲಲು ಕೈ‌ ರಣತಂತ್ರ; ಜೆಡಿಎಸ್‌, ಬಿಜೆಪಿ ನಾಯಕರಿಗೆ ಸತೀಶ್‌ ಗಾಳ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News