Karnataka election 2023: ಬಿಜೆಪಿಗೆ ಮತ ಹಾಕಿದರೆ ಜನರಿಗೆ ಸಾವೇ ಗತಿ!- ಕಾಂಗ್ರೆಸ್

Karnataka Assembly Election 2023: ಬೆಂಗಳೂರಿನಲ್ಲಿ ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಅಕ್ರಮ ಆಸ್ತಿ ಮಾಡಿದ್ದಾರೆಂಬ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

Written by - Puttaraj K Alur | Last Updated : Apr 23, 2023, 04:41 PM IST
  • ನೀತಿಸಂಹಿತೆ ಜಾರಿಯಾಗುವ ಮುನ್ನ ತುರಾತುರಿಯಲ್ಲಿ 40% ಲೂಟಿಯ ಟೆಂಡರ್‌ ಪಾಸ್ ಮಾಡಿದ ಸರ್ಕಾರ
  • ಔಷಧಿಯಂತಹ ಅಗತ್ಯ ಟೆಂಡರ್‌ಗಳನ್ನು ಕರೆಯದೆ ಬಿಜೆಪಿ ಸರ್ಕಾರ ನಿರ್ಲಕ್ಷಿದ್ದೇಕೆ?
  • ಕಮಿಷನ್ ಕಿರುಕುಳ ನೀಡುವ ಸರ್ಕಾರ 2-3 ವರ್ಷದಿಂದಲೂ ಆಸ್ಪತ್ರೆಗಳಿಗೆ ಔಷಧ ಪೂರೈಕೆ ಮಾಡ್ತಿಲ್ಲ
Karnataka election 2023: ಬಿಜೆಪಿಗೆ ಮತ ಹಾಕಿದರೆ ಜನರಿಗೆ ಸಾವೇ ಗತಿ!- ಕಾಂಗ್ರೆಸ್ title=
ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ‘ನೀತಿಸಂಹಿತೆ ಜಾರಿಯಾಗುವ ಮುನ್ನ 40% ಲೂಟಿಯ ಟೆಂಡರ್‌ಗಳನ್ನು ತುರಾತುರಿಯಲ್ಲಿ ಪಾಸ್ ಮಾಡಿದ ಸರ್ಕಾರಕ್ಕೆ ಔಷಧಿಯಂತಹ ಅಗತ್ಯ ಟೆಂಡರ್‌ಗಳನ್ನು ಕರೆಯದೆ ನಿರ್ಲಕ್ಷಿದ್ದೇಕೆ? ಔಷಧ ಪೂರೈಕೆದಾರರಿಗೆ ಕಮಿಷನ್ ಕಿರುಕುಳ ನೀಡುವ ಸರ್ಕಾರ 2-3 ವರ್ಷದಿಂದಲೂ ಆಸ್ಪತ್ರೆಗಳಿಗೆ ಔಷಧ ಪೂರೈಕೆ ಮಾಡ್ತಿಲ್ಲ. ಬಿಜೆಪಿಗೆ ಮತ ಹಾಕಿದರೆ ಜನರಿಗೆ ಸಾವೇ ಗತಿ!’ ಎಂದು ಟೀಕಿಸಿದೆ.

ಬಾಲಕೋಟೆ ಜಿಲ್ಲೆ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಯ ವಸತಿ ಗೃಹದಲ್ಲಿ ಸಿಕ್ಕಿರುವ ಬೆಳ್ಳಿ ದೀಪಗಳ ವಿಚಾರವಾಗಿ ಕಿಡಿಕಾರಿರುವ ಕಾಂಗ್ರೆಸ್, ‘ಬಿಜೆಪಿಗರ 40% ಕಮಿಷನ್ ಲೂಟಿಯು ಚುನಾವಣೆಗೆ ಬಂಡವಾಳ ಹೂಡಿಕೆ ರೂಪದಲ್ಲಿ ಹೊರಬರುತ್ತಿದೆ. ಶಾಸಕರ ಖರೀದಿ, ಮಂತ್ರಿಗಿರಿಯ ಖರೀದಿ, ಮತಗಳನ್ನೂ ಖರೀದಿ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ವ್ಯಾಪಾರ ಸರಕನ್ನಾಗಿಸಿದೆ ಬಿಜೆಪಿ. ಮುರುಗೇಶ್ ನಿರಾಣಿ ಅವರ ಫೋಟೋ ಇರುವ ಈ ಬೆಳ್ಳಿ ದೀಪಗಳೇ 40% ಭ್ರಷ್ಟಾಚಾರದ ಕತೆ ಹೇಳುತ್ತಿವೆ’ ಎಂದು ಕುಟುಕಿದೆ.

ಇದನ್ನೂ ಓದಿ: "ಬೊಮ್ಮಾಯಿ ಅವರೇ ಮೀಸಲಾತಿ ವಿಚಾರವಾಗಿ ನಿಮ್ಮ ತೀರ್ಮಾನವನ್ನು ಸುಪ್ರೀಂ ಕೋರ್ಟ್ ನಲ್ಲಿ ತಡೆದಿರುವುದೇಕೆ?"

ಬೆಂಗಳೂರಿನಲ್ಲಿ ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಅಕ್ರಮ ಆಸ್ತಿ ಮಾಡಿದ್ದಾರೆಂಬ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ‘ಬೊಮ್ಮಾಯಿವರು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವುದು ಲಿಂಗಾಯತರಿಗೆ ಮಾಡುವ ಅವಮಾನವಾಗುವುದಾದರೆ, ಸಿದ್ದರಾಮಯ್ಯವರ ಮೇಲೆ ಮಾಡುತ್ತಿರುವ ಸುಳ್ಳು ಆರೋಪಗಳು ಇಡೀ ಕುರುಬ ಸಮಾಜಕ್ಕೆ,‌ ಹಿಂದುಳಿದ ವರ್ಗಗಳಿಗೆ ಮಾಡುತ್ತಿರುವ ಅವಮಾನವಲ್ಲವೇ??!!’ ಎಂದು ಪ್ರಶ್ನಿಸಿದೆ.

ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದ್ದು ಕಾಂಗ್ರೆಸ್

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯಗೊಳಿಸಿದ್ದು ಕಾಂಗ್ರೆಸ್. ಹಣ ಮೀಸಲಿಟ್ಟು ಅನುಭವ ಮಂಟಪದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದು ಕಾಂಗ್ರೆಸ್. ಬಸವಣ್ಣ ಸೇರಿದಂತೆ ಶರಣರ ವಚನಗಳ ಸಂಗ್ರಹಕ್ಕೆ ಪ್ರೋತ್ಸಾಹ ನೀಡಿದ್ದು ಕಾಂಗ್ರೆಸ್ ಮತ್ತು ಬಸವಣ್ಣನ ತತ್ವಗಳನ್ನು ಅಳವಡಿಸಿಕೊಂಡು, ಪಾಲಿಸುತ್ತಿರುವುದು ಕಾಂಗ್ರೆಸ್’ ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ಸಮಾಜಕ್ಕೆ ಹೆದರದೇ, ಸತ್ಯದ ಮಾರ್ಗದಲ್ಲಿ ನಡೆದ ಬಸವಣ್ಣನವರು ಇಂದು ನಮ್ಮೆಲ್ಲರಿಗೂ ಬೆಳಕಾಗಿ ನಿಂತಿದ್ದಾರೆ: ರಾಹುಲ್ ಗಾಂಧಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News