ನವದೆಹಲಿ: ಮತದಾನದ ಬಗ್ಗೆ ಜಾಗೃತಿ ಮೂಡಿಸುವ ದೊಡ್ಡ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಝೀ ವಾಹಿನಿಯು ಮತದಾನ ಮಾಡುವ ಕರ್ತವ್ಯದ ಬಗ್ಗೆ ಯುವಕರನ್ನು ಜಾಗೃತಗೊಳಿಸಿ ಬದ್ಧಗೊಳಿಸಲಿದೆ ಎಂದು ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸ್ ಲಿಮಿಟೆಟ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುನೀತ್ ಗೋಯಂಕಾ ಹೇಳಿದ್ದಾರೆ.
ಜನಜಾಗೃತಿಯಲ್ಲಿ ಮಾಧ್ಯಮಗಳು ಮತ್ತು ಮನೋರಂಜನಾ ಉದ್ಯಮಗಳು ಬಹಳರೀತಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟಿರುವ ಪುನೀತ್ ಗೋಯಂಕಾ, 'ಝೀ ವಾಹಿನಿಯು ಯುವಕರು ಮತದಾನ ಮಾಡುವಂತೆ ಜಾಗೃತಗೊಳಿಸಲು ಬದ್ದವಾಗಿದೆ. ಈ ರೀತಿ ಯುವಕರನ್ನು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಅವಕಾಶ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಮಾಧ್ಯಮ ಮತ್ತು ಮನೋರಂಜನಾ ಉದ್ಯಮ ಜಾಗೃತಿ ಮೂಡಿಸುವಲ್ಲಿ ದೊಡ್ಡ ಪಾತ್ರ ವಹಿಸಲಿದೆ. ಅದರಲ್ಲೂ ಯುವಕರಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಯುವಕರು ಮತದಾನದ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ. ದೇಶದ ನಾಗರೀಕರಾಗಿ, ಅದಕ್ಕೂ ಮಿಗಿಲಾಗಿ, ದೇಶದ ಭವಿಷ್ಯಕ್ಕಾಗಿ ಮತದಾನ ಮಾಡಲಿದ್ದಾರೆ ಎಂಬುದನ್ನು ಝೀ ವಾಹಿನಿ ಖಾತರಿಪಡಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.
Thank you Shri. @NarendraModi Ji. M&E as an industry certainly plays a huge role in driving awareness, especially amongst the youth. We at ZEE,will certainly ensure that the youth is sensitised about their duty to vote,as Citizens &most above,as the Future of our Nation! #VoteKar https://t.co/Q6SCdLHu2G
— Punit Goenka (@punitgoenka) March 25, 2019
ಪ್ರಧಾನ ಮಂತ್ರಿ ಮೋದಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವಂತೆ ಮನವಿ ಮಾಡಿದ್ದರು. ಅದೇ ರೀತಿ ಬಹಳ ಪ್ರಮುಖ ಪಾತ್ರವಹಿಸಬಹುದಾದ ಮಾಧ್ಯಮ ಮತ್ತು ಮನೋರಂಜನಾ ಉದ್ಯಮ ಕೂಡ ಜನಜಾಗೃತಿಯಲ್ಲಿ ಕೈಜೋಡಿಸಬೇಕೆಂದು ಕೇಳಿಕೊಂಡಿದ್ದರು.
ಸರಿಸುಮಾರು 9 ಮಿಲಿಯನ್ ಜನ ಈ ಭಾರಿ ಮತದಾನ ಮಾಡಲು ಅರ್ಹತೆ ಹೊಂದಿರುತ್ತಾರೆ. 2019 ರ ಲೋಕಸಭಾ ಚುನಾವಣೆಯು ಏಪ್ರಿಲ್ 11ರಿಂದ ಆರಂಭವಾಗಿ 7 ಹಂತಗಳಲ್ಲಿ ನಡೆಯಲಿದೆ.