ಶಾಹೀನ್ ಬಾಗ್‌ ಗೆ ಭೇಟಿ ನೀಡುವುದಾಗಿ ಘೋಷಿಸಿದ ಬಾಬಾ ರಾಮ್ ದೇವ್

ಯೋಗ ಗುರು ಬಾಬಾ ರಾಮ್‌ದೇವ್ ಅವರು ದೆಹಲಿಯ ಶಾಹೀನ್ ಬಾಗ್‌ಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ.ಮುಸ್ಲಿಮರ ವಿರುದ್ಧ ತಾರತಮ್ಯ ತೋರುತ್ತಿರುವ ಪೌರತ್ವ ಕಾನೂನಿನ ವಿರುದ್ಧ ತಿಂಗಳಿಂದಲೂ ಶಾಹೀನ್ ಬಾಗ್ ನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.

Last Updated : Jan 24, 2020, 07:06 PM IST
 ಶಾಹೀನ್ ಬಾಗ್‌ ಗೆ ಭೇಟಿ ನೀಡುವುದಾಗಿ ಘೋಷಿಸಿದ ಬಾಬಾ ರಾಮ್ ದೇವ್  title=

ನವದೆಹಲಿ: ಯೋಗ ಗುರು ಬಾಬಾ ರಾಮ್‌ದೇವ್ ಅವರು ದೆಹಲಿಯ ಶಾಹೀನ್ ಬಾಗ್‌ಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ.ಮುಸ್ಲಿಮರ ವಿರುದ್ಧ ತಾರತಮ್ಯ ತೋರುತ್ತಿರುವ ಪೌರತ್ವ ಕಾನೂನಿನ ವಿರುದ್ಧ ತಿಂಗಳಿಂದಲೂ ಶಾಹೀನ್ ಬಾಗ್ ನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಖಾಸಗಿ ಚಾನಲ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಬಾಬಾ ರಾಮ್‌ದೇವ್ ಅವರು ಹಿಂದೂ ಮತ್ತು ಮುಸ್ಲಿಮರ ನಡುವೆ ಸಂಘರ್ಷವನ್ನು ಬಯಸುವುದಿಲ್ಲ ಎಂದು ಘೋಷಿಸಿದರು, ಅವರ ಭೇಟಿ ಮುಸ್ಲಿಂ ಸಮುದಾಯಕ್ಕೆ "(ಅವರ ವಿರುದ್ಧ) ಅನ್ಯಾಯವಾಗಿದ್ದರೆ" ಅವರಿಗೆ ಬೆಂಬಲ ನೀಡುವ ಸೂಚಕವಾಗಿದೆ ಎಂದು ಹೇಳಿದ್ದಾರೆ.

ಪ್ರತಿಭಟಿಸುವ ಜನರ ಹಕ್ಕನ್ನು ಅವರು ಒಪ್ಪಿಕೊಂಡ ಕೆಲವೇ ದಿನಗಳಲ್ಲಿ ಈ ಅಭಿಪ್ರಾಯಗಳು ಬಂದವು ಆದರೆ ಪ್ರತಿಭಟನೆಯ ವಿಷಯವು ಸಾಂವಿಧಾನಿಕವಾಗಿರಬೇಕು ಮತ್ತು "ಭಾರತದಲ್ಲಿ ಅರಾಜಕತೆ ಇದೆ ಎಂದು ತೋರುತ್ತದೆ" ಎಂದು ಹೇಳಿದರು."ನಾನು ಯಾರ ಪರವಾಗಿಲ್ಲ ಅಥವಾ ಯಾರ ವಿರುದ್ಧವೂ ಅಲ್ಲ ... ನಾನು ಮಧ್ಯವರ್ತಿಯೂ ಅಲ್ಲ. ಹಿಂದೂಗಳು ಮತ್ತು ಮುಸ್ಲಿಮರು  ಸಂಘರ್ಷ ನಡೆಸುವುದು ನನಗೆ ಇಷ್ಟವಿಲ್ಲ. ಮುಸ್ಲಿಮರ ವಿರುದ್ಧ ಅನ್ಯಾಯವಾಗಿದ್ದರೆ ನಾನು ಅವರೊಂದಿಗೆ ನಿಲ್ಲುತ್ತೇನೆ. ನಾಳೆ ನಾನು ಶಾಹೀನ್ ಬಾಗ್‌ಗೆ ಹೋಗುತ್ತೇನೆ, ಎಂದು ಬಾಬಾ ರಾಮದೇವ್ ಹೇಳಿದರು.

'ನಾನು ಪ್ರತಿಭಟನೆಯ ಬೆಂಬಲಿಗ...ಯಾವುದೇ ರೀತಿಯ ಆಜಾದಿ (ಸ್ವಾತಂತ್ರ್ಯ) ಇರಬಹುದು...ಆದರೆ ಇದು ಸಾಂವಿಧಾನಿಕವಾಗಿರಬೇಕು, ಅದು ಇತರರಿಗೆ ನೋವುಂಟು ಮಾಡಬಾರದು. ನಾನು ಜಿನ್ನಾ-ವಾಲಿ ಆಜಾದಿಯನ್ನು ಬಯಸುವುದಿಲ್ಲ, ನನಗೆ ಭಗತ್ ಸಿಂಗ್ ಬೇಕು- ವಾಲಿ ಆಜಾದಿ ಬೇಕು' ಎಂದು ಅವರು ಘೋಷಿಸಿದರು. ಇನ್ನೊಂದೆಡೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶಾಹೀನ್ ಬಾಗ್‌ನಲ್ಲಿ ನಡೆದ ಮಹಿಳೆಯರ ನೇತೃತ್ವದ ಹೋರಾಟದ ವಿರುದ್ಧ  ಟೀಕಾ ಪ್ರಹಾರ ನಡೆಸಿದ ಎರಡು ದಿನಗಳ ನಂತರ ಬಾಬಾ ರಾಮ್‌ದೇವ್ ಅವರ ಉದ್ದೇಶಿತ ಭೇಟಿ ಬರಲಿದೆ.

Trending News