Viral Video: ಚಿರತೆ ನೋಡಿದ ನಾಯಿಗೆ ಹೃದಯಾಘಾತ, ಆಮೇಲೇನಾಯ್ತು ನೋಡಿ..!

ಮೊದಲು ಬೇರೆ ನಾಯಿ ಇರಬೇಕೆಂದುಕೊಂಡಿದ್ದ ಅವಕ್ಕೆ ಹತ್ತಿರ ಹೋದಾಗ ಚಿರತೆ ಎಂಬುದು ಅರಿವಾಗಿದೆ. ಈ ವೇಳೆ ‘ನಾ ಸತ್ತೆ’ ಎಂಬಂತೆ ಎರಡೂ ಜೋರಾಗಿ ಓಟ ಕಿತ್ತಿವೆ.

Written by - Puttaraj K Alur | Last Updated : Nov 6, 2021, 01:45 PM IST
  • ಚಿರತೆ ನೋಡಿ ಹೃದಯಾಘಾತದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ ನಾಯಿ
  • ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿರುವ ಘಟನೆಯ ವಿಡಿಯೋ ವೈರಲ್
  • ಭಯ ಹುಟ್ಟುಹಾಕಿರುವ ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮನವಿ
Viral Video: ಚಿರತೆ ನೋಡಿದ ನಾಯಿಗೆ ಹೃದಯಾಘಾತ, ಆಮೇಲೇನಾಯ್ತು ನೋಡಿ..! title=
ಚಿರತೆ ನೋಡಿದ ನಾಯಿಗೆ ಹೃದಯಾಘಾತ

ನವದೆಹಲಿ: ಮನುಷ್ಯರಿರಲಿ, ಪ್ರಾಣಿಗಳಿರಲಿ ಎಲ್ಲರಿಗೂ ಭಯ ಇದ್ದೇ ಇರುತ್ತದೆ ಎನ್ನುತ್ತಾರೆ. ಇಂತಹದೊಂದು ಆಘಾತಕಾರಿ ಪ್ರಕರಣ ರಾಜಸ್ಥಾನದಿಂದ ಬೆಳಕಿಗೆ ಬಂದಿದ್ದು, ನಾಯಿಯೊಂದು ಭಯದಿಂದ ಹೃದಯಾಘಾತ(Dog Heart Attack)ಕ್ಕೆ ಒಳಗಾಗಿ ಸಾವನ್ನಪ್ಪಿದೆ. ಇದು ಕೇಳಲು ಸ್ವಲ್ಪ ವಿಚಿತ್ರವಾದರೂ ಸತ್ಯ. ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಚಿರತೆ ಕಂಡ ನಾಯಿಗೆ ಹೃದಯಾಘಾತ!

ವರದಿಗಳ ಪ್ರಕಾರ, ಈ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ. ಗುರುವಾರ ರಾತ್ರಿ ಚಿರತೆಯೊಂದು ಗ್ರಾಮಕ್ಕೆ ಪ್ರವೇಶಿಸಿತ್ತು. ಚಿರತೆ(Leopard)ಯು ನಾಯಿಗಳ ಬಳಿ ಹಾದುಹೋದಾಗ, ಅವುಗಳ ತುಂಬಾ ಭಯಭೀತಗೊಂಡು ಚೀರಾಡಲಾರಂಭಿಸಿದ್ದವು. ಚಿರತೆ ಕಂಡ ಭಯದಲ್ಲಿ ಒಂದು ನಾಯಿಗೆ ಹೃದಯಾಘಾತವಾಗಿ ಸ್ಥಳದಲ್ಲಿಯೇ ಅದು ಸಾವನ್ನಪ್ಪಿದೆ.

ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆದ ನವಜೋತ್ ಸಿಂಗ್ ಸಿಧು

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಈ ವೈರಲ್ ವಿಡಿಯೋದಲ್ಲಿ ಎರಡು ನಾಯಿ(Dogs)ಗಳು ಕಾಣಿಸಿಕೊಂಡಿವೆ. ದೂರದಿಂದಲೇ ಚಿರತೆಯನ್ನು ನೋಡಿದ ನಾಯಿಗಳು ಬೌ.. ಬೌ… ಎಂದು ಜೋರಾಗಿ ಬೊಗಳುತ್ತಾ ಅದರತ್ತ  ಓಡಿ ಬಂದಿವೆ. ಮೊದಲು ಬೇರೆ ನಾಯಿ ಇರಬೇಕೆಂದುಕೊಂಡಿದ್ದ ಅವಕ್ಕೆ ಹತ್ತಿರ ಹೋದಾಗ ಚಿರತೆ ಎಂಬುದು ಅರಿವಾಗಿದೆ. ಈ ವೇಳೆ ‘ನಾ ಸತ್ತೆ’ ಎಂಬಂತೆ ಎರಡೂ ಜೋರಾಗಿ ಓಟ ಕಿತ್ತಿವೆ. ಚಿರತೆ ಎಲ್ಲಿ ದಾಳಿ ನಡೆಸಿ ನಮ್ಮನ್ನು ಕೊಂದು ಹಾಕುತ್ತೋ ಎಂಬ ಜೀವಭಯದಲ್ಲಿ ಅವುಗಳಿಗೆ ಓಡಲು ಸಾಧ್ಯವಾಗಿಲ್ಲ, ಹೀಗಾಗಿ ಎದ್ದು ಬಿದ್ದು ಓಡಿವೆ. ಚಿರತೆಯೂ ಅವುಗಳ ಹಿಂದಿಯೇ ಓಡಿಬಂದಿದ್ದರ ಪರಿಣಾಮ ಒಂದು ನಾಯಿಗೆ ತಕ್ಷಣವೇ ದೃದಯಾಘಾತವಾಗಿದೆ. ಅದು ರಸ್ತೆಯಲ್ಲಿಯೇ ಬಿದ್ದು ನರಳಾಡುತ್ತಾ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಅದೃಷ್ಟವಶಾತ್ ಈ ಘಟನೆ ರಾತ್ರಿ ವೇಳೆ ನಡೆದಿದೆ. ಗ್ರಾಮಸ್ಥರು ಮತ್ತು ಮಕ್ಕಳು ಇಲ್ಲದ ಕಾರಣ ಯಾವುದೇ ರೀತಿ ಅನಾಹುತ ನಡೆದಿಲ್ಲ.

ಇದನ್ನೂ ಓದಿ: ದೆಹಲಿ ಉದ್ಯಮಿ ಮನೆಯಿಂದ ಎರಡು ಕೋಟಿ ನಗದು ಚಿನ್ನಾಭರಣ ದೋಚಿದ ದರೋಡೆಕೋರರು

ಚಿರತೆಯಿಂದ ಗ್ರಾಮಸ್ಥರಲ್ಲಿ ಭೀತಿ ಆವರಿಸಿದೆ

ಚಿರತೆ(Leopard) ಬಂದಿರುವ ಸುದ್ದಿ ತಿಳಿದ ಬಳಿಕ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದುವರೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿಲ್ಲ, ಚಿರತೆ ಹಿಡಿಯಲು ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ಪಶುವೈದ್ಯಕೀಯ ತಜ್ಞ ಡಾ.ಶ್ರವಣ್ ಸಿಂಗ್ ರಾಥೋಡ್ ಮಾತನಾಡಿ, ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರುವ ಪ್ರಾಣಿ ಚಿರತೆಯಾಗಿರುವ ಸಾಧ್ಯತೆ ಇದೆ. ನಮ್ಮ ತಂಡವು 2019ರಲ್ಲಿ ಇದೇ ಗ್ರಾಮದಲ್ಲಿ ಚಿರತೆಯನ್ನು ರಕ್ಷಿಸಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಚಿರತೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಿದೆ. ಇದಾದ ಬಳಿಕ ಅದನ್ನು ಹಿಡಿಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ. ಜೋಧ್‌ಪುರದ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಜನರು ಅಚ್ಚರಿಗೊಂಡಿದ್ದು, ವಿವಿಧ ರೀತಿಯಲ್ಲಿ ಕಾಮೆಂಡ್ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News