ವಲಸೆ ಕಾರ್ಮಿಕರ ಚಲನೆಯನ್ನು ನಾವು ಹೇಗೆ ತಡೆಯುವುದು? - ಸುಪ್ರೀಂಕೋರ್ಟ್

ರಸ್ತೆಯಲ್ಲಿ ನಡೆದು  ತಮ್ಮ ಊರಿಗೆ ಹೋಗುತ್ತಿರುವ ವಲಸಿಗರಿಗೆ ಆಹಾರ ಮತ್ತು ನೀರನ್ನು ಒದಗಿಸುವಂತೆ ಕೇಂದ್ರಕ್ಕೆ ಕೋರ್ಟ್  ಆದೇಶಿಸಬೇಕು ಎಂದು ಮನವಿ ಮಾಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

Last Updated : May 15, 2020, 03:46 PM IST
ವಲಸೆ ಕಾರ್ಮಿಕರ ಚಲನೆಯನ್ನು ನಾವು ಹೇಗೆ ತಡೆಯುವುದು? - ಸುಪ್ರೀಂಕೋರ್ಟ್  title=
file photo

ನವದೆಹಲಿ: ರಸ್ತೆಯಲ್ಲಿ ನಡೆದು  ತಮ್ಮ ಊರಿಗೆ ಹೋಗುತ್ತಿರುವ ವಲಸಿಗರಿಗೆ ಆಹಾರ ಮತ್ತು ನೀರನ್ನು ಒದಗಿಸುವಂತೆ ಕೇಂದ್ರಕ್ಕೆ ಕೋರ್ಟ್  ಆದೇಶಿಸಬೇಕು ಎಂದು ಮನವಿ ಮಾಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

'ಈ ನ್ಯಾಯಾಲಯವು ಯಾರು ನಡೆಯುತ್ತಿದ್ದಾರೆ ಮತ್ತು ನಡೆಯುತ್ತಿಲ್ಲ ಎಂದು ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲ. ಇದನ್ನು ರಾಜ್ಯವು ತಿರ್ಮಾನಿಸಬೇಕು ಹೊರತು ಕೋರ್ಟ್ ಅಲ್ಲ ಎಂದು ಸುಪ್ರೀಕೋರ್ಟ್ ತಿಳಿಸಿದೆ.ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ರಸ್ತೆಗಳಲ್ಲಿ ನಡೆಯುತ್ತಿರುವ ವಲಸಿಗರನ್ನು ಗುರುತಿಸಿ ಅವರಿಗೆ ಆಹಾರ ಮತ್ತು ಆಶ್ರಯ ನೀಡುವಂತೆ ನ್ಯಾಯಾಲಯವು ಕೇಂದ್ರವನ್ನು ಕೇಳಬೇಕೆಂದು ಒತ್ತಾಯಿಸಿದೆ.

ಇದೇ ವೇಳೆ ಅವರು ಮಹಾರಾಷ್ಟ್ರದಲ್ಲ್ಲಿರೈಲ್ವೆ ಹಳಿಗಳಲ್ಲಿ ಮಲಗಿದ್ದ 16 ವಲಸಿಗರ ಮೇಲೆ ಸರಕು ರೈಲು ಓಡಿಸಿದ ಘಟನೆಯನ್ನೂ ವಕೀಲರು ಉಲ್ಲೇಖಿಸಿದ್ದರು. ಜನರು ನಡೆಯುತ್ತಿದ್ದಾರೆ ಮತ್ತು ನಿಲ್ಲುವುದಿಲ್ಲ ಎನ್ನುವುದನ್ನು ನಾವು ಹೇಗೆ ನಿಲ್ಲಿಸಬಹುದು?" ಎಂದು ನ್ಯಾಯಾಧೀಶರು ಪ್ರಶ್ನಿಸಿದರು.ಇದೇ ವೇಳೆ ರೈಲು ಅಪಘಾತದ ವಿಚಾರವಾಗಿ ಪ್ರತಿಕ್ರಿಯಿಸಿದ ನ್ಯಾಯಾಲಯ ಯಾರಾದರೂ ರೈಲ್ವೆ ಹಳಿಗಳಲ್ಲಿ ಮಲಗಿದಾಗ ಇದನ್ನು ಹೇಗೆ ತಡೆಯಬಹುದು?' ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. 

ಇದೇ ವೇಳೆ ನ್ಯಾಯಾಲಯವು ವಕೀಲರನ್ನು ದೂಷಿಸಿ ಅವರ ಜ್ಞಾನ ವೃತ್ತಪತ್ರಿಕೆ ತುಣುಕುಗಳ ಮೇಲೆ ಆಧಾರಿತವಾಗಿದೆ ಎಂದು ಹೇಳಿದೆ. 'ಪ್ರತಿಯೊಬ್ಬ ವಕೀಲರು ಪತ್ರಿಕೆಯಲ್ಲಿ ಘಟನೆಗಳನ್ನು ಓದುತ್ತಾರೆ ಮತ್ತು ಪ್ರತಿಯೊಂದು ವಿಷಯದ ಬಗ್ಗೆಯೂ ಜ್ಞಾನ ಹೊಂದುತ್ತಾರೆ. ನಿಮ್ಮ ಜ್ಞಾನವು ಸಂಪೂರ್ಣವಾಗಿ ವೃತ್ತಪತ್ರಿಕೆ ತುಣುಕುಗಳನ್ನು ಆಧರಿಸಿದೆ ಮತ್ತು ನಂತರ ಈ ನ್ಯಾಯಾಲಯವು ತೀರ್ಮಾನಿಸಬೇಕೆಂದು ನೀವು ಬಯಸುತ್ತೀರಿ. ರಾಜ್ಯವು ಅದನ್ನು ತೀರ್ಮಾನಿಸಲಿ. ಇದನ್ನು ನ್ಯಾಯಾಲಯ ಏಕೆ ತೀರ್ಮಾನಿಸಬೇಕು ಅಥವಾ ಕೇಳಬೇಕು? ನಾವು ನಿಮಗೆ ವಿಶೇಷ ಪಾಸ್ ನೀಡುತ್ತೇವೆ.ನೀವು ಹೋಗಿ ಸರ್ಕಾರದ ಆದೇಶಗಳನ್ನು ಜಾರಿಗೊಳಿಸಬಹುದೇ?ಎಂದು ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

ವಲಸಿಗರನ್ನು ಮನೆಗೆ ಕರೆದೊಯ್ಯಲು ಸರ್ಕಾರ ಈಗಾಗಲೇ ಸಾರಿಗೆ ವ್ಯವಸ್ಥೆ ಆರಂಭಿಸಿದೆ ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ರಾಷ್ಟ್ರವ್ಯಾಪಿ ಸ್ಥಗಿತಗೊಂಡಿದ್ದರಿಂದ ಉದ್ಯೋಗ ಮತ್ತು ಆಶ್ರಯವಿಲ್ಲದೆ ಉಳಿದಿರುವ ವಲಸಿಗರು ಸಾವಿರಾರು ಕಿ.ಮೀ ದೂರದಲ್ಲಿರುವ ತಮ್ಮ ಗ್ರಾಮಗಳಿಗೆ ಹೊರಟರು. ಅವರು ಟ್ರಕ್‌ಗಳು ಮತ್ತು ಆಟೋಗಳಲ್ಲಿ ಸವಾರಿ ಮಾಡಿದರು, ಅಥವಾ ಮನೆಯ ಸುರಕ್ಷತೆಯನ್ನು ತಲುಪುವ ಹತಾಶೆಯಲ್ಲಿ ಸೈಕ್ಲಿಂಗ್ ಮಾಡಿದರು. ಹಸಿವು ಮತ್ತು ಬಳಲಿಕೆಯಿಂದ ಅಥವಾ ಅಪಘಾತಗಳಿಂದ ಅವರು ಊರು ತಲುಪುವ ಮೊದಲೇ ಅನೇಕರು ಪ್ರಾಣ ಕಳೆದುಕೊಂಡರು.

ಪ್ರತಿ ರಾಜ್ಯವು ವಲಸಿಗರು ರಸ್ತೆಗಳಲ್ಲಿ ಅಥವಾ ರೈಲು ಹಳಿಗಳಲ್ಲಿ ನಡೆಯದಂತೆ ನೋಡಿಕೊಳ್ಳಬೇಕು ಎಂದು ಗೃಹ ಸಚಿವಾಲಯ ಇತ್ತೀಚೆಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
 

Trending News