ಭಾರತವು ಭಾನುವಾರ ಒಟ್ಟು 2,41,970 ಪ್ರಕರಣಗಳನ್ನು ವರದಿ ಮಾಡುವ ಮೂಲಕ ಸ್ಪೇನ್ ಅನ್ನು ಹಿಂದಿಕ್ಕಿದ ಕಾರಣ ವಿಶ್ವದಲ್ಲೇ ಐದನೇ ಅತಿಹೆಚ್ಚು ಕರೋನವೈರಸ್ ಪೀಡಿತ ರಾಷ್ಟ್ರವಾಗಿದೆ.COVID-19 ಕೇಂದ್ರ ಬಿಂದುವಾಗಿರುವ ಯುರೋಪಿಯನ್ ದೇಶವು ವಾರಗಳ ಹಿಂದೆಯೇ 2,40,978 ಪ್ರಕರಣಗಳನ್ನು ಹೊಂದಿದೆ.
ಸುಮಾರು 70 ದಿನಗಳ ಲಾಕ್ ಡೌನ್ ಮಧ್ಯದಲ್ಲಿಯೂ ಭಾರತದಲ್ಲಿ ಕೊರೊನಾ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವುದಕ್ಕೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿಫಲ ಲಾಕ್ ಡೌನ್ ಎಂದು ಕರೆದಿದ್ದಾರೆ.
ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಮಂತ್ ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ಬರೆದಿರುವ ಪತ್ರದಲ್ಲಿ ತಮ್ಮ ಅಂತಿಮ ವರ್ಷದಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲಾ ಕಾಲೇಜು ವಿದ್ಯಾರ್ಥಿಗಳನ್ನು ಪಾಸ್ ರಾಜ್ಯ ನಿರ್ಧರಿಸಿದೆ ಎಂದು ಹೇಳಿದರು.
ರಸ್ತೆಯಲ್ಲಿ ನಡೆದು ತಮ್ಮ ಊರಿಗೆ ಹೋಗುತ್ತಿರುವ ವಲಸಿಗರಿಗೆ ಆಹಾರ ಮತ್ತು ನೀರನ್ನು ಒದಗಿಸುವಂತೆ ಕೇಂದ್ರಕ್ಕೆ ಕೋರ್ಟ್ ಆದೇಶಿಸಬೇಕು ಎಂದು ಮನವಿ ಮಾಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಕರೋನವೈರಸ್ ಹಿನ್ನಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಅನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲು ಸರ್ಕಾರ ಶುಕ್ರವಾರ ನಿರ್ಧರಿಸಿದೆ. ಮೇ 3 ಕ್ಕೆ ಲಾಕ್ ಡೌನ್ 2.0 ಮುಕ್ತಾಯಗೊಳ್ಳುವ ಹಿನ್ನಲೆಯಲ್ಲಿ ಈಗ ಲಾಕ್ ಡೌನ್ ನ್ನು ಎರಡು ವಾರಗಳ ಕಾಲ ವಿಸ್ತರಿಸಲಾಗಿದೆ.
ಲಕ್ಷಾಂತರ ಜನರು, ಹೆಚ್ಚಾಗಿ ವಲಸೆ ಕಾರ್ಮಿಕರು ದೇಶದ ವಿವಿಧ ಭಾಗಗಳಲ್ಲಿ ಕೆಲಸವಿಲ್ಲದೆ ಸಿಕ್ಕಿಹಾಕಿಕೊಂಡ ಒಂದು ತಿಂಗಳ ನಂತರ, ಕೇಂದ್ರ ಗೃಹ ಸಚಿವಾಲಯವು ಅಂತಿಮವಾಗಿ ರಾಜ್ಯಗಳನ್ನು ಆಯಾ ರಾಜ್ಯಗಳಿಗೆ ವಾಪಸ್ ಕಳುಹಿಸಲು ಅವಕಾಶ ನೀಡಿತು.
ಕೊರೊನಾವೈರಸ್ ಕಾಯಿಲೆ (ಕೋವಿಡ್ -19) ಹಿನ್ನಲೆಯಲ್ಲಿ ಈ ತಿಂಗಳ ಅಂತ್ಯದವರೆಗೆ ಲಾಕ್ಡೌನ್ ಅನ್ನು ವಿಸ್ತರಿಸಲು ಕೇಂದ್ರವು ಒಲವು ತೋರುತ್ತಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ, ಹಲವಾರು ರಾಜ್ಯಗಳು ಈ ನಡೆಗೆ ಬೆಂಬಲವನ್ನು ಸೂಚಿಸಿವೆ ಎಂದು ತಿಳಿಸಿದರು. ಆದಾಗ್ಯೂ, ರಾಷ್ಟ್ರವ್ಯಾಪಿ ಲಾಕ್ಡೌನ್ ವಿಸ್ತರಿಸುವ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.