ಇನ್ನೂ ಎರಡು ವಾರಗಳವರೆಗೆ ಲಾಕ್‌ಡೌನ್ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧಾರ

ಕರೋನವೈರಸ್ ಹಿನ್ನಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲು ಸರ್ಕಾರ ಶುಕ್ರವಾರ ನಿರ್ಧರಿಸಿದೆ. ಮೇ 3 ಕ್ಕೆ ಲಾಕ್ ಡೌನ್ 2.0 ಮುಕ್ತಾಯಗೊಳ್ಳುವ ಹಿನ್ನಲೆಯಲ್ಲಿ ಈಗ ಲಾಕ್ ಡೌನ್ ನ್ನು ಎರಡು ವಾರಗಳ ಕಾಲ ವಿಸ್ತರಿಸಲಾಗಿದೆ.

Last Updated : May 1, 2020, 06:51 PM IST
ಇನ್ನೂ ಎರಡು ವಾರಗಳವರೆಗೆ ಲಾಕ್‌ಡೌನ್ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧಾರ  title=

ನವದೆಹಲಿ: ಕರೋನವೈರಸ್ ಹಿನ್ನಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲು ಸರ್ಕಾರ ಶುಕ್ರವಾರ ನಿರ್ಧರಿಸಿದೆ. ಮೇ 3 ಕ್ಕೆ ಲಾಕ್ ಡೌನ್ 2.0 ಮುಕ್ತಾಯಗೊಳ್ಳುವ ಹಿನ್ನಲೆಯಲ್ಲಿ ಈಗ ಲಾಕ್ ಡೌನ್ ನ್ನು ಎರಡು ವಾರಗಳ ಕಾಲ ವಿಸ್ತರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ದಿನದಿಂದ ತಮ್ಮ ಮಂತ್ರಿಗಳೊಂದಿಗೆ ನಡೆಸಿದ ಹಲವಾರು ಸಭೆಗಳ ಹಿನ್ನಲೆಯಲ್ಲಿ ಈ ನಿರ್ಧಾರವು ಬಂದಿದೆ.ಲಾಕ್ ಡೌನ್ ಯೋಜನೆಯನ್ನು ರೂಪಿಸಲು ಪ್ರಧಾನಿ ಇಂದು ಗೃಹ ಸಚಿವ ಅಮಿತ್ ಶಾ, ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ವಿಮಾನಯಾನ ಸಚಿವ ಹರ್ದೀಪ್ ಪುರಿ ಅವರೊಂದಿಗೆ ಸಭೆ ನಡೆಸಿದರು.

ಈ ಭಾನುವಾರ ರಾಷ್ಟ್ರವ್ಯಾಪಿ ಸ್ಥಗಿತಗೊಳಿಸುವಿಕೆಯು ಮುಕ್ತಾಯಗೊಳ್ಳಲಿರುವ ಕಾರಣ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ತಮ್ಮ ಮಂತ್ರಿಗಳನ್ನು ಭೇಟಿಯಾಗಿ ಲಾಕ್ ಡೌನ್ ವಿಸ್ತರಣೆ ತಂತ್ರವನ್ನು ದೃಪಡಿದ್ದರು ಎನ್ನಲಾಗಿದೆ.
 

Trending News