/kannada/photo-gallery/rahu-star-transit-will-bless-these-zodiac-sign-221364 ರಾಹು ಕೃಪೆಯಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ!ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ! ಧನಿಕರಾಗುವ ಕಾಲ ದೂರವಿಲ್ಲ  ರಾಹು ಕೃಪೆಯಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ!ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ! ಧನಿಕರಾಗುವ ಕಾಲ ದೂರವಿಲ್ಲ 221364

Teachers Day 2023: ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ದೇಶಾದ್ಯಂತ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಕರಿಗೆ ಮೀಸಲಾಗಿರುವ ಈ ದಿನವನ್ನು ವಿಶೇಷವಾಗಿ 1888 ರಲ್ಲಿ ಇದೇ ದಿನಾಂಕದಂದು ಜನಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯ ಇತಿಹಾಸ ಮತ್ತು ಅದರ ಮಹತ್ವವೇನು ಎಂದು ತಿಳಿಯೋಣ:

ಇದನ್ನೂ ಓದಿ: Dina Bhavishya: ಇಂದು ಈ ರಾಶಿಯವರಿಗೆ ಎಂಥಾ ಸಂಕಷ್ಟ ಬಂದರೂ ಕೈಹಿಡಿದು ಮುನ್ನಡೆಸುತ್ತಾನೆ ಆಂಜನೇಯ

ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಆದರೆ ಸೆಪ್ಟೆಂಬರ್ 5ರಂದೇ ಈ ದಿನವನ್ನು ಆಚರಿಸುವುದೇಕೆ ಎಂಬುದು ನಿಮಗೆ ತಿಳಿದಿದೆಯೇ? ಈ ದಿನವನ್ನು ವಿಶೇಷವಾಗಿ ಸೆಪ್ಟೆಂಬರ್ 5, 1888 ರಂದು ಜನಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಡಾ. ರಾಧಾಕೃಷ್ಣನ್ ಅವರು ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿ. ಅಷ್ಟೇ ಅಲ್ಲದೆ, ಶ್ರೇಷ್ಠ ವಿದ್ವಾಂಸರು, ತತ್ವಜ್ಞಾನಿ ಮತ್ತು ಭಾರತರತ್ನ ಪುರಸ್ಕೃತರು ಕೂಡ.

ಶಿಕ್ಷಕರ ದಿನದ ಇತಿಹಾಸ:

1962ರಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಎರಡನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಾಗ, ಅವರ ವಿದ್ಯಾರ್ಥಿಗಳು ಸೆಪ್ಟೆಂಬರ್ 5 (ಹುಟ್ಟುಹಬ್ಬದ ದಿನ) ಅನ್ನು ವಿಶೇಷ ದಿನವನ್ನಾಗಿ ಆಚರಿಸಲು ಅನುಮತಿ ಕೇಳಿದರಂತೆ. ಅದಕ್ಕೆ ಪ್ರತಿಕ್ರಿಯಿಸಿದ ರಾಧಾಕೃಷ್ಣನ್ ಅವರು, “ನನ್ನ ಹುಟ್ಟುಹಬ್ಬವನ್ನು ಪ್ರತ್ಯೇಕವಾಗಿ ಆಚರಿಸುವ ಬದಲು ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿದರೆ ಹೆಮ್ಮೆಯಾಗುತ್ತದೆ” ಎಂದರಂತೆ. ಇದೇ ಆಶಯದಂತೆ 1962ರಲ್ಲಿ ಮೊದಲ ಬಾರಿಗೆ ಶಿಕ್ಷಕರ ದಿನವನ್ನು ಆಚರಿಸಲಾಯಿತು.

ಶಿಕ್ಷಕರ ದಿನಾಚರಣೆಯ ಮಹತ್ವ:

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜೀವನದ 40 ವರ್ಷಗಳನ್ನು ಶಿಕ್ಷಕರಾಗಿ ಕಳೆದು ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು. ಸಮಾಜಕ್ಕೆ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ನಿಜವಾದ ಶಿಕ್ಷಕ ಪ್ರಮುಖ ಪಾತ್ರ ವಹಿಸುತ್ತಾನೆ ಎಂದು ಅವರು ನಂಬಿದ್ದರು. ನಿಜವಾದ ಶಿಕ್ಷಕನು ತನ್ನ ಶಿಷ್ಯನಿಗೆ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಲು ಕಲಿಸುತ್ತಾನೆ ಮತ್ತು ಅವರ ಜೀವನವನ್ನು ಸುಧಾರಿಸುವಲ್ಲಿ ಗಣನೀಯ ಕೊಡುಗೆ ನೀಡುತ್ತಾನೆ. ಆದ್ದರಿಂದ ಶಿಕ್ಷಕರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಶಿಕ್ಷಕರು ನೀಡಿದ ಈ ಎಲ್ಲಾ ಕೊಡುಗೆಗಳಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಈ ದಿನ ಉತ್ತಮ ಅವಕಾಶವಾಗಿದೆ.

ಇದನ್ನೂ ಓದಿ: ಗವಾಸ್ಕರ್, ಧೋನಿಯಿಂದಲೂ ಸಾಧ್ಯವಾಗದ ಈ ಅದ್ಭುತ ವಿಶ್ವದಾಖಲೆ ಬರೆದರು ವಿರಾಟ್ ಕೊಹ್ಲಿ!

ಒಂದೆಡೆ, ಭಾರತದಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ, ಮತ್ತೊಂದೆಡೆ, ಪ್ರಪಂಚದ ಅನೇಕ ದೇಶಗಳಲ್ಲಿ ಈ ದಿನವನ್ನು ಒಂದು ತಿಂಗಳ ನಂತರ ಅಂದರೆ ಅಕ್ಟೋಬರ್ 5 ರಂದು ಆಚರಿಸಲಾಗುತ್ತದೆ. 1994 ರಲ್ಲಿ, UNESCO ಶಿಕ್ಷಕರ ಗೌರವಾರ್ಥವಾಗಿ ಅಕ್ಟೋಬರ್ 5 ರಂದು ಅಂತರರಾಷ್ಟ್ರೀಯ ಶಿಕ್ಷಕರ ದಿನವನ್ನು ಆಚರಿಸಲು ಘೋಷಣೆ ಹೊರಡಿಸಿತು. ರಷ್ಯಾ, ಆಸ್ಟ್ರೇಲಿಯಾ, ಚೀನಾ, ಜರ್ಮನಿ, ಬಾಂಗ್ಲಾದೇಶ, ಶ್ರೀಲಂಕಾ, ಯುಕೆ, ಪಾಕಿಸ್ತಾನ, ಇರಾನ್ ಮುಂತಾದ ದೇಶಗಳಲ್ಲಿ ಶಿಕ್ಷಕರ ದಿನವನ್ನು ವಿವಿಧ ದಿನಗಳಲ್ಲಿ ಆಚರಿಸಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Section: 
English Title: 
Teachers Day 2023: Know the reason for celebrating Teacher's Day on 5th September
News Source: 
Home Title: 

ಸೆಪ್ಟೆಂಬರ್ 5ರಂದೇ ‘ಶಿಕ್ಷಕರ ದಿನ’ ಆಚರಿಸಲು ಕಾರಣವೇನು ಗೊತ್ತಾ? ‘ಸರ್ವ’ ಮಹತ್ವ ಅಂತಿಂಥದಲ್ಲಾ…

ಸೆಪ್ಟೆಂಬರ್ 5ರಂದೇ ‘ಶಿಕ್ಷಕರ ದಿನ’ ಆಚರಿಸಲು ಕಾರಣವೇನು ಗೊತ್ತಾ? ‘ಸರ್ವ’ ಮಹತ್ವ ಅಂತಿಂಥದಲ್ಲಾ…
Caption: 
Importance of Teachers' Day
Yes
Is Blog?: 
No
Tags: 
Facebook Instant Article: 
Yes
Highlights: 
  • ಸೆಪ್ಟೆಂಬರ್ 5ರಂದೇ ‘ಶಿಕ್ಷಕರ ದಿನ’ ಆಚರಿಸುವುದೇಕೆ ಎಂಬುದು ನಿಮಗೆ ತಿಳಿದಿದೆಯೇ?
  • ಶಿಕ್ಷಕರ ದಿನಾಚರಣೆಯ ಇತಿಹಾಸ ಮತ್ತು ಅದರ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
  • ಪ್ರಪಂಚದ ಅನೇಕ ದೇಶಗಳಲ್ಲಿ ಶಿಕ್ಷಕರ ದಿನಾಚರಣೆಯನ್ನು ಅಕ್ಟೋಬರ್ 5 ರಂದು ಆಚರಿಸಲಾಗುತ್ತದೆ
Mobile Title: 
ಸೆಪ್ಟೆಂಬರ್ 5ರಂದೇ ‘ಶಿಕ್ಷಕರ ದಿನ’ ಆಚರಿಸಲು ಕಾರಣವೇನು ಗೊತ್ತಾ? ‘ಸರ್ವ’ ಮಹತ್ವ ಅಂತಿಂಥದಲ್ಲಾ…
Bhavishya Shetty
Publish Later: 
No
Publish At: 
Tuesday, September 5, 2023 - 07:48
Created By: 
Bhavishya Shetty
Updated By: 
Bhavishya Shetty
Published By: 
Bhavishya Shetty
Request Count: 
1
Is Breaking News: 
No
Word Count: 
309