ನವದೆಹಲಿ: ಅನ್ಲಾಕ್ 1.0 ನಲ್ಲಿ ಎಲ್ಲವೂ ನಿಧಾನವಾಗಿ ನಿಮಗಾಗಿ ತೆರೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಮುಂದಿನ ವಾರಾಂತ್ಯದಿಂದ ನಿಮ್ಮ ನೆಚ್ಚಿನ ಶಾಪಿಂಗ್ಗಾಗಿ ಮಾಲ್ಗಳ ಬಾಗಿಲು ಮತ್ತೆ ತೆರೆಯುತ್ತವೆ. ಇದಲ್ಲದೆ ನಿಮ್ಮ ನೆಚ್ಚಿನ ರೆಸ್ಟೋರೆಂಟ್ನಲ್ಲಿ ಸಹ ನೀವು ಭೋಜನವನ್ನು ಆನಂದಿಸಲು ಸಾಧ್ಯವಾಗುತ್ತದೆ. ಜೂನ್ 8 ರಿಂದ ಷರತ್ತುಗಳೊಂದಿಗೆ ರೆಸ್ಟೋರೆಂಟ್ (Restaurants) ಮತ್ತು ಮಾಲ್ಗಳನ್ನು (Malls) ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಆದರೆ ಈ ನಿಯಮಗಳನ್ನು ಪಾಲಿಸಬೇಕು:
ಗೃಹ ಸಚಿವಾಲಯ ಅನ್ಲಾಕ್ -1 ರ ಪ್ರಕಟಣೆಯಲ್ಲಿ ಮಾಲ್ಗಳು ಮತ್ತು ರೆಸ್ಟೋರೆಂಟ್ಗಳನ್ನು ತೆರೆಯಲು ಹೊಸ ಮಾರ್ಗಸೂಚಿಯನ್ನು ರಚಿಸಲಾಗಿದೆ. ಕಂಟೋನ್ಮೆಂಟ್ ವಲಯವನ್ನು ಹೊರತುಪಡಿಸಿ ಇತರ ಭಾಗಗಳಲ್ಲಿ ಜೂನ್ 8 ರಿಂದ ಮಾಲ್, ಧಾರ್ಮಿಕ ಸ್ಥಳಗಳು, ಆತಿಥ್ಯ ಕ್ಷೇತ್ರಗಳು ಮತ್ತು ರೆಸ್ಟೋರೆಂಟ್ಗಳು ತೆರೆಯಲು ಸಾಧ್ಯವಾಗುತ್ತದೆ. ಆದಾಗ್ಯೂ ಈ ಅವಧಿಯಲ್ಲಿ ಸಾಮಾಜಿಕ ಅಂತರದಂತಹ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿರುತ್ತದೆ.
ಮಾಲ್ಗಳಲ್ಲಿ ಪಾಲಿಸಬೇಕಾದ ನಿಯಮಗಳು:
ಮಾಲ್ ಒಳಗೆ ಸುರಕ್ಷಿತ ಶಾಪಿಂಗ್ ಮಾಡಲು ಜನರು ಆರೋಗ್ಯ ಸೇತು ಆ್ಯಪ್ (Aarogya Setu App) ಹೊಂದಲು ಕಡ್ಡಾಯಗೊಳಿಸಲಾಗಿದೆ ಎಂದು ತಜ್ಞರು ಹೇಳುತ್ತಾರೆ. ಎಲ್ಲಾ ಗ್ರಾಹಕರು ಮತ್ತು ಅಂಗಡಿಯವರು ಈ ಅಪ್ಲಿಕೇಶನ್ ಅನ್ನು ಮೊಬೈಲ್ನಲ್ಲಿ ಇರಿಸಬೇಕಾಗುತ್ತದೆ. ಇದಲ್ಲದೆ ಮಾಲ್ಗಳಲ್ಲಿ ಪ್ರವೇಶದ ಸಮಯದಲ್ಲಿ ಎಲ್ಲಾ ಜನರ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿರುತ್ತದೆ. ಒಂದೇ ಸಮಯದಲ್ಲಿ ಕೇವಲ 3 ಜನರು ಮಾತ್ರ ಲಿಫ್ಟ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಅಲ್ಲದೆ ಇಬ್ಬರ ನಡುವೆ 3 ಮೆಟ್ಟಿಲುಗಳ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ.
ಹಸಿರು, ಕೆಂಪು ಮತ್ತು ಕಿತ್ತಳೆ ವರ್ಗ :
ಮಾರ್ಗಸೂಚಿಯ ಪ್ರಕಾರ ಲಾಕ್ಡೌನ್ (Lockdown) 5.0 ಮೂರು ಹಂತಗಳಲ್ಲಿರುತ್ತದೆ. ಹಸಿರು, ಕೆಂಪು ಮತ್ತು ಕಿತ್ತಳೆ ವಲಯಗಳ ವರ್ಗಗಳಲ್ಲಿ ಲಾಕ್ಡೌನ್ ಕೊನೆಗೊಳಿಸುವ ಮೂಲಕ ಕೇವಲ ಒಂದು ವಲಯ, ಅಂದರೆ ಕಂಟೈನ್ಮೆಂಟ್ ವಲಯದಲ್ಲಿ ಮಾತ್ರ ಲಾಕ್ಡೌನ್ ಇರುತ್ತದೆ. ರಾತ್ರಿಯಲ್ಲಿ ಕರ್ಫ್ಯೂ ಸಮಯವನ್ನು ಪರಿಶೀಲಿಸಲಾಗುವುದು, ಇಡೀ ದೇಶದಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ಮಾತ್ರ ನಿಷೇಧ ಇರುತ್ತದೆ.