Free Bus Service : ರಕ್ಷಾ ಬಂಧನ ದಿನ ಮಹಿಳೆಯರಿಗೆ ಭರ್ಜರಿ ಗಿಫ್ಟ್ : ಈ ರಾಜ್ಯಗಳಲ್ಲಿ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣಿ!

ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ ಮತ್ತು ಈ ಬಾರಿ ಆಗಸ್ಟ್ 22 ರಂದು ಆಚರಿಸಲಾಗುತ್ತದೆ.

Written by - Channabasava A Kashinakunti | Last Updated : Aug 12, 2021, 06:07 PM IST
  • ರಕ್ಷಾಬಂಧನ ದಿನ ಅನೇಕ ರಾಜ್ಯ ಸರ್ಕಾರಗಳು ಮಹಿಳೆಯರಿಗೆ ವಿಶೇಷ ಉಡುಗೊರೆ
  • ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿವೆ
  • ಈ ಬಾರಿ ಆಗಸ್ಟ್ 22 ರಂದು ಆಚರಿಸಲಾಗುತ್ತದೆ.
Free Bus Service : ರಕ್ಷಾ ಬಂಧನ ದಿನ ಮಹಿಳೆಯರಿಗೆ ಭರ್ಜರಿ ಗಿಫ್ಟ್ : ಈ ರಾಜ್ಯಗಳಲ್ಲಿ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣಿ! title=

ನವದೆಹಲಿ : ರಕ್ಷಾಬಂಧನ ದಿನ ಅನೇಕ ರಾಜ್ಯ ಸರ್ಕಾರಗಳು ಮಹಿಳೆಯರಿಗೆ ವಿಶೇಷ ಉಡುಗೊರೆಗಳನ್ನು ನೀಡಿವೆ. ಈ ದಿನ ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಹೌದು, ಹರಿಯಾಣ, ರಾಜಸ್ಥಾನ ಮತ್ತು ಬಿಹಾರ ಸರ್ಕಾರಗಳು ರಕ್ಷಾ ಬಂಧನ ದಿನ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿವೆ. ಇದಲ್ಲದೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ, ಆದರೂ ಈ ಬಗ್ಗೆ ಯಾವುದೇ ಅಧಿಕೃತ ಆದೇಶವನ್ನು ಹೊರ ಬಿದ್ದಿಲ್ಲ.

ಈ ವರ್ಷ ಆಗಸ್ಟ್ 22 ರಂದು ರಕ್ಷಾಬಂಧನ 

ರಕ್ಷಾ ಬಂಧನ (Raksha Bandhan 2021) ಹಬ್ಬವು ಸಹೋದರ ಮತ್ತು ಸಹೋದರಿಯರ ಪವಿತ್ರ ಪ್ರೀತಿಯ ಸಂಕೇತವಾಗಿದೆ ಮತ್ತು ಈ ದಿನ ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿ ಕಟ್ಟಿ ನೂರು ಕಾಲ ಸುಖವಾಗಿ ಬಾಳಲಿ ಎಂದು ಆಶೀರ್ವಾದ ಮಾಡುತ್ತಾರೆ. ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ ಮತ್ತು ಈ ಬಾರಿ ಆಗಸ್ಟ್ 22 ರಂದು ಆಚರಿಸಲಾಗುತ್ತದೆ.

ಇದನ್ನೂ ಓದಿ : Viral Video: ಜಾಡಿಸಿ ಒದ್ದಳು… ಕೂದಲು ಹಿಡಿದು ಎಳೆದಾಡಿದಳು… ಕೊನೆಗೆ ಜೈಲು ಸೇರಿದಳು..!

ಹರಿಯಾಣದಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣ

ರಕ್ಷಾಬಂಧನದ ದಿನ ಹರಿಯಾಣ ಸರ್ಕಾರವು ಮಹಿಳೆಯರಿಗೆ ಹಾಗೂ 15 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣ(Free Bus for Women)ಕ್ಕೆ ಅವಕಾಶ ನೀಡಿದೆ. ಈ ಕುರಿತು ಮುಖ್ಯಮಂತ್ರಿಯವರ ಕಛೇರಿಯು ಟ್ವೀಟ್ ಮಾಡಿದ್ದು, 'ರಕ್ಷಾಬಂಧನದ ಸಂದರ್ಭದಲ್ಲಿ ಉಡುಗೊರೆ ನೀಡುವುದು, ಈ ವರ್ಷವೂ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರಾಜ್ಯದ ಮಹಿಳೆಯರಿಗೆ ಮತ್ತು 15 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ನೀಡಲು ನಿರ್ಧರಿಸಿದ್ದಾರೆ, ಆದ್ದರಿಂದ ಸಹೋದರಿಯರು ತಮ್ಮ ಸಹೋದರರ ಮನೆಗೆ ಹೋಗಿ ರಾಖಿ ಕಟ್ಟಬಹುದು.

ಕೊರೋನಾ ನಿಯಮ ಪಾಲನೆ ಕಡ್ಡಾಯ 

ಬಸ್ಸಿನಲ್ಲಿ ಪ್ರಯಾಣಿಸುವಾಗ ಕೊರೋನಾ ಪ್ರೋಟೋಕಾಲ್(Corona Guidelines) ಅನ್ನು ಅನುಸರಿಸಬೇಕು. CMO ಟ್ವೀಟ್ ಮಾಡಿದೆ, 'ಕೋವಿಡ್ -19 ಅನ್ನು ಗಮನದಲ್ಲಿಟ್ಟುಕೊಂಡು, ಬಸ್ಸುಗಳಲ್ಲಿ ಶೇ 50 ರಷ್ಟು ಸಾಮರ್ಥ್ಯದೊಂದಿಗೆ ಓಡಿಸಲಾಗುವುದು ಮತ್ತು ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಬಸ್ಸಿನಲ್ಲಿ ಪ್ರಯಾಣಿಸುವವರು ಮಾಸ್ಕ್ ಜೊತೆಗೆ ಇತರ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : RBI ಬಹುದೊಡ್ಡ ನಿರ್ಧಾರ : ಸ್ವಸಹಾಯ ಸಂಘಗಳಿಗೆ ಯಾವುದೇ ಗ್ಯಾರಂಟಿಯಿಲ್ಲದೆ ಸಿಗಲಿದೆ 20 ಲಕ್ಷಗಳ ಸಾಲ

ಬಿಹಾರದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

ಬಿಹಾರದ ನಿತೀಶ್ ಕುಮಾರ್(Nitish Kumar) ಸರ್ಕಾರ ಕೂಡ ರಕ್ಷಾಬಂಧನದ ದಿನದಂದು ಮಹಿಳೆಯರಿಗೆ ಉಚಿತ ಪ್ರಯಾಣದ ಉಡುಗೊರೆಯನ್ನು ನೀಡಿದೆ. ರಾಖಿ ದಿನದಂದು ಮಹಿಳೆಯರು ಬಿಹಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಗರ ಸೇವಾ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಮತ್ತು ಪ್ರಯಾಣಕ್ಕೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಬಿಹಾರ ಸರ್ಕಾರದಲ್ಲಿ ಸಾರಿಗೆ ಇಲಾಖೆಯ ಸಚಿವೆ ಶೀಲಾ ಕುಮಾರಿ, ರಕ್ಷಾಬಂಧನದ ಸಂದರ್ಭದಲ್ಲಿ ನಗರ ಸೇವಾ ಬಸ್ಸುಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ರಾಜಸ್ಥಾನದಲ್ಲಿ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ

ರಕ್ಷಾಬಂಧನದ ಸಂದರ್ಭದಲ್ಲಿ ಹರಿಯಾಣ ಮತ್ತು ಬಿಹಾರವನ್ನು ಹೊರತುಪಡಿಸಿ, ರಾಜಸ್ಥಾನವು ಮಹಿಳೆಯರಿಗೆ ಉಚಿತ ಬಸ್ ಸೇವೆ(Free Bus service) ಘೋಷಿಸಿದೆ. ಆಗಸ್ಟ್ 22 ರಂದು, ಮಹಿಳೆಯರು ರಾಜಸ್ಥಾನ ರಸ್ತೆ ಸಾರಿಗೆ ಮತ್ತು ಜೈಪುರದಲ್ಲಿ ಲೋ ಫ್ಲೋರ್ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಹೊರ ಬಿತ್ತು ರಾಜ್ಯಸಭೆಯಲ್ಲಿ ನಡೆದ ಗದ್ದಲದ Video : ಲೇಡಿ ಮಾರ್ಷಲ್ ತಳ್ಳಿದ ಸಂಸದರು!

ದೆಹಲಿಯಲ್ಲಿ ಮಹಿಳೆಯರಿಗೆ ಈಗಾಗಲೇ ಬಸ್ ಪ್ರಯಾಣ ಉಚಿತವಿದೆ

ದೆಹಲಿ ಈಗಾಗಲೇ ದೆಹಲಿ ಸಾರಿಗೆ ಸಂಸ್ಥೆ (ಡಿಟಿಸಿ) ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ(Free Travel)ದ ಸೌಲಭ್ಯವನ್ನು ಹೊಂದಿದೆ. 2019 ರಲ್ಲಿ, ದೆಹಲಿ ಸರ್ಕಾರವು ಭಯ್ಯಾ ದೂಜ್‌ನಿಂದ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಆರಂಭಿಸಿತು. ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಗುಲಾಬಿ ಬಣ್ಣದ ಟಿಕೆಟ್ ನೀಡಲಾಗುತ್ತದೆ, ಇದಕ್ಕೆ ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

Trending News