Ujjwala Yojana : ಈ ದಾಖಲೆಗಳು ನಿಮ್ಮ ಬಳಿ ಇದ್ದರೆ ನೀವು ಪಡೆಯಬಹುದು ಉಜ್ವಲ ಯೋಜನೆಯ 'ಉಚಿತ LPG ಸಿಲಿಂಡರ್'

ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಮತ್ತು ಉಚಿತ ಸಿಲಿಂಡರ್‌ನ ಲಾಭವನ್ನು ಪಡೆಯಲು ನಿಮಗೆ ಸಾಧ್ಯವಿಲ್ಲ

Written by - Channabasava A Kashinakunti | Last Updated : Sep 5, 2021, 12:44 PM IST
  • ಉಜ್ವಲ ಯೋಜನೆ ಅಡಿ ಉಚಿತ LPG ಸಿಲಿಂಡರ್
  • ಉಚಿತ ಗ್ಯಾಸ್ ಸಿಲಿಂಡರ್ ಗೆ ಯಾವ ದಾಖಲೆಗಳು ಬೇಕು
  • ಉಜ್ವಲ ಯೋಜನೆಯಡಿ ದೇಶದಲ್ಲಿ 8 ಲಕ್ಷ ಉಚಿತ ಸಂಪರ್ಕ ವಿತರಿಸಲಾಗಿದೆ
Ujjwala Yojana : ಈ ದಾಖಲೆಗಳು ನಿಮ್ಮ ಬಳಿ ಇದ್ದರೆ ನೀವು ಪಡೆಯಬಹುದು ಉಜ್ವಲ ಯೋಜನೆಯ 'ಉಚಿತ LPG ಸಿಲಿಂಡರ್' title=

ನವದೆಹಲಿ : ನೀವು ಉಜ್ವಲ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ನೀವು ಕೆಲವು ದಾಖಲೆಗಳನ್ನು ಹೊಂದಿರಬೇಕು. ಇವುಗಳಿಲ್ಲದೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಮತ್ತು ಉಚಿತ ಸಿಲಿಂಡರ್‌ನ ಲಾಭವನ್ನು ಪಡೆಯಲು ನಿಮಗೆ ಸಾಧ್ಯವಿಲ್ಲ. ಇಂದು ನಾವು ನಿಮಗೆ ಈ ಪ್ರಮುಖ ದಾಖಲೆಗಳ ಬಗ್ಗೆ ಹೇಳುತ್ತಿದ್ದೇವೆ, ಆದರೆ ಅದಕ್ಕೂ ಮೊದಲು, ಈ ಯೋಜನೆಯ ಬಗ್ಗೆ ತಿಳಿಯಿರಿ.

ಇಲ್ಲಿಯವರೆಗೆ 1 ಕೋಟಿ ಉಚಿತ ಗ್ಯಾಸ್ ಸಂಪರ್ಕ ವಿತರಣೆ

ಪ್ರಧಾನಿ ನರೇಂದ್ರ ಮೋದಿ ಅವರು 2016 ರಲ್ಲಿ 'ಉಜ್ವಲ ಯೋಜನೆ'(Ujjwala Yojana)ಯನ್ನು ಆರಂಭಿಸಿದರು. ಇದರ ಅಡಿಯಲ್ಲಿ, ದೇಶದ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕಗಳನ್ನು ಒದಗಿಸಬೇಕು, ಇದರಿಂದ ಅವರು ಹೊಗೆ ಮುಕ್ತರಾಗಬಹುದು. ಈ ಉಜ್ವಲ ಯೋಜನೆಯನ್ನು ಪ್ರಧಾನಿ ಮೋದಿಯವರ 2.O ಸರ್ಕಾರವು ಆಗಸ್ಟ್ 25 ರಿಂದ ಉತ್ತರ ಪ್ರದೇಶದಲ್ಲಿ (ಯುಪಿ) ಆರಂಭಿಸಲಾಯಿತು. ಮೊದಲ ಹಂತದಲ್ಲಿ ದೇಶದ ಸುಮಾರು 8 ಕೋಟಿ ಮಹಿಳೆಯರು ಹೋಗೆ ಮುಕ್ತರಾದರೆ, ಎರಡನೇ ಹಂತದಲ್ಲಿ ಯೋಜನೆಯ ಸುಮಾರು 20 ಲಕ್ಷ ಮಹಿಳೆಯರಿಗೆ ಅನುಕೂಲವಾಗುವ ಗುರಿ ಹೊಂದಲಾಗಿದೆ. ದೇಶಾದ್ಯಂತ 1 ಕೋಟಿ ಉಚಿತ ಗ್ಯಾಸ್ ಸಂಪರ್ಕ ವಿತರಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ : Ration Card Rules Change : ಪಡಿತರ ಚೀಟಿದಾರರಿಗೆ ಬಿಗ್ ನ್ಯೂಸ್ : ಸರ್ಕಾರಿ ಅಂಗಡಿಗಳಿಂದ ಪಡಿತರ ಪಡೆಯುವ ನಿಯಮಗಳಲ್ಲಿ ಬದಲಾವಣೆ!

ಈ ದಾಖಲೆಗಳು ಅಗತ್ಯವಿದೆ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗದೊಂದಿಗೆ ಜರಿ ಆಗಿರುವ  ಉಜ್ವಲ ಯೋಜನೆಯ ಲಾಭ ಪಡೆಯಲು ಕೆಲವು ಷರತ್ತುಗಳನ್ನು ನಿಗದಿಪಡಿಸಲಾಗಿದೆ. ಅಂತೆಯೇ, ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 18 ವರ್ಷಗಳಿಗಿಂತ ಹೆಚ್ಚು ಇರಬೇಕು. ಇದಲ್ಲದೇ, ಅವರು ಸಬ್ಸಿಡಿ ಪಡೆಯಲು ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ, ಬಿಪಿಎಲ್ ಕಾರ್ಡ್, ಗುರುತಿನ ಚೀಟಿ (Aadhaar Card or Voter ID Card) ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋ ಹೊಂದಿರಬೇಕು, ಇದು ಅರ್ಜಿ ಸಲ್ಲಿಸುವಾಗ ಉಪಯುಕ್ತವಾಗಿರುತ್ತದೆ. ಮಹಿಳೆಯ ಕುಟುಂಬದಲ್ಲಿ ಈಗಾಗಲೇ ಯಾವುದೇ ಎಲ್‌ಪಿಜಿ ಸಂಪರ್ಕ(LPG Gas Connection) ಇರಬಾರದು.

ಈ ರೀತಿ ಅರ್ಜಿ ಸಲ್ಲಿಸಿ 

ಅರ್ಜಿ ಸಲ್ಲಿಸಲು, ಮೊದಲು pmuy.gov.in ವೆಬ್ ಸೈಟ್ ಗೆ ಹೋಗಿ. ಇದರ ನಂತರ ಹೊಸ ಉಜ್ವಲಾ 2.0 ಸಂಪರ್ಕಕ್ಕೆ ಅರ್ಜಿ(Apply For New Ujjwala 2.0 Connection) ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಇಂಡೇನ್, ಭಾರತ್ ಪೆಟ್ರೋಲಿಯಂ ಮತ್ತು HP ಗ್ಯಾಸ್ ಕಂಪನಿಯ ಆಯ್ಕೆಗಳು ಕಂಡು ಬರುತ್ತವೆ. ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ. ಅದರ ನಂತರ ಅಲ್ಲಿ ನೀಡಿದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ದಾಖಲೆಗಳನ್ನು ಪರಿಶೀಲಿಸಿದ ನಂತರ, ನಿಮ್ಮ ಹೆಸರಿನಲ್ಲಿ LPG ಗ್ಯಾಸ್ ಸಂಪರ್ಕವನ್ನು ನೀಡಲಾಗುತ್ತದೆ. ಎರಡನೇ ಹಂತದಲ್ಲಿ ಎಲ್‌ಪಿಜಿ ಸಂಪರ್ಕದ ಜೊತೆಗೆ, ಮೊದಲ ಸಿಲಿಂಡರ್‌ನ ಮರುಪೂರಣವೂ ಉಚಿತವಾಗಿರುತ್ತದೆ. ಇದರೊಂದಿಗೆ ಗ್ಯಾಸ್ ಸ್ಟೌ ಕೂಡ ಉಚಿತವಾಗಿ ನೀಡಲಾಗುತ್ತದೆ.

ಇದನ್ನೂ ಓದಿ : Indian Railways : ರೈಲ್ವೆ ಪ್ರಯಾಣಿಕರಿಗೆ ಬಿಗ್ ಶಾಕ್ : ಈಗ ರೈಲು ಪ್ರಯಾಣದ ಸಮಯದಲ್ಲಿ ಸಿಗುವುದಿಲ್ಲ ಈ ಸೌಲಭ್ಯ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News