ವಾರಣಾಸಿಯ ವೈದ್ಯರೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ

ವಾರಣಾಸಿ  ಜಿಲ್ಲಾಡಳಿತದ ಜೊತೆಗೂ ಪ್ರಧಾನಿ ಮಾತುಕತೆ ಮಾಡಲಿದ್ದಾರೆ.  ಕರೋನಾ ವಿರುದ್ಧದ ಹೋರಾಟದ ಮಾಹಿತಿ ಪಡೆಯಲಿದ್ದಾರೆ.  

Written by - Ranjitha R K | Last Updated : May 21, 2021, 08:02 AM IST
  • ವಾರಣಾಸಿಯ ವೈದ್ಯರೊಂದಿಗೆ ಇಂದು ಮೋದಿ ನೇರ ಸಂವಾದ
  • ಕರೋನಾ ನಿಗ್ರಹದಲ್ಲಿ ವೈದ್ಯರ ಪಾತ್ರದ ಬಗ್ಗೆ ಮೋದಿ ಮಾತುಕತೆ
  • ಕರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕಾಶಿವಾಸಿಗಳ ಕೊಡುಗೆ ಬಗ್ಗೆಯೂ ಚರ್ಚೆ
ವಾರಣಾಸಿಯ ವೈದ್ಯರೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ title=
ವಾರಣಾಸಿಯ ವೈದ್ಯರೊಂದಿಗೆ ಇಂದು ಮೋದಿ ನೇರ ಸಂವಾದ (file photo)

ನವದೆಹಲಿ :  ವಾರಣಾಸಿಯ ಕರೋನಾ ಯೋಧರ ಜೊತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ನೇರ ಸಂವಾದ ನಡೆಸಲಿದ್ದಾರೆ. ವಾರಣಾಸಿಯು ಪ್ರಧಾನಿ ಮೋದಿ ಸಂಸದೀಯ ಕ್ಷೇತ್ರವೂ ಹೌದು.  ಈ ವರ್ಚುವಲ್ ಸಂವಾದದಲ್ಲಿ ಪ್ರಧಾನಿ ಮೋದಿ ತನ್ನ ಕ್ಷೇತ್ರದ ಡಾಕ್ಟರ್ಸ್ ಮತ್ತು ಪ್ಯಾರಾಮೆಡಿಕಲ್ ಸ್ಟಾಫ್ ಜೊತೆ ಮಾತುಕತೆ ನಡೆಸಲಿದ್ದಾರೆ.

ವಾರಣಾಸಿ (Varanasi) ಜಿಲ್ಲಾಡಳಿತದ ಜೊತೆಗೂ ಪ್ರಧಾನಿ ಮಾತುಕತೆ ಮಾಡಲಿದ್ದಾರೆ.  ಕರೋನಾ (Coronavirus) ವಿರುದ್ಧದ ಹೋರಾಟದ ಮಾಹಿತಿ ಪಡೆಯಲಿದ್ದಾರೆ. ಕರೋನಾ ಮೂರನೇ ಅಲೆ ಎದುರಿಸುವ ಸಿದ್ದತೆಯ ಕುರಿತೂ ಮಾಹಿತಿ ಪಡೆಯಲಿದ್ದಾರೆ. ಇದೇ ವೇಳೆ ಏಪ್ರಿಲ್ 1 ರಿಂದ ಹಿಡಿದು ಮೇ 20 ರ ತನಕ ಕರೋನಾ (COVID-19) ವಿರುದ್ಧದ ಯುದ್ಧದ ಸಂಪೂರ್ಣ ವಿಡಿಯೋ (Video) ಒಂದನ್ನು ಜಿಲ್ಲಾಡಳಿತ ಪ್ರಧಾನಿಯವರಿಗೆ ಪ್ರಸ್ತುತ ಪಡಿಸಲಿದೆ.  

ಇದನ್ನೂ ಓದಿ : ಎರಡನೇ ಕೊರೊನಾ ಅಲೆಯಲ್ಲಿ 300ಕ್ಕೂ ಅಧಿಕ ವೈದ್ಯರ ಸಾವು

ಈ ಸಮಯದಲ್ಲಿ ಬಿಎಚ್‌ಯು, ಡಿಆರ್‌ಡಿಒ, ದೀನ್ ದಯಾಳ್ ಸರ್ಕಾರಿ ಜಿಲ್ಲಾ ಆಸ್ಪತ್ರೆ, ಇಎಸ್‌ಐಸಿ (ESIC) ಮತ್ತು ಇತರ ಆಸ್ಪತ್ರೆಗಳ ವೈದ್ಯರಿಂದ  ಪ್ರಧಾನಿ  ಮಾಹಿತಿ ಪಡೆಯಲಿದ್ದಾರೆ. ಕರೋನಾ ನಿಗ್ರಹಿಸುವಲ್ಲಿ ವೈದ್ಯರ ಪಾತ್ರ ಮತ್ತು ಅವರ ಅನುಭವಗಳನ್ನು ಆಲಿಸಲಿದ್ದಾರೆ. 

ಡಿಆರ್‌ಡಿಒ ಆಸ್ಪತ್ರೆಯ ಪ್ರಯೋಜನದ ಬಗ್ಗೆ ಮಾತನಾಡಲಿದ್ದಾರೆ ಮೋದಿ.
ಪದ್ಮಭೂಷಣ ಪಂ. ರಾಜನ್ ಮಿಶ್ರಾ  ಹೆಸರಿನಲ್ಲಿರುವ  ಡಿಆರ್‌ಡಿಒ (DRDO) ಆಸ್ಪತ್ರೆಯ ಬಗ್ಗೆಯೂ ಪಿಎಂ ಮೋದಿ ಚರ್ಚಿಸಲಿದ್ದಾರೆ. ವಾಸ್ತವವಾಗಿ, ವಾರಣಾಸಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ (COVID Patient) ಒಟ್ಟು 1900  ಹಾಸಿಗೆಗಳಿವೆ.  ಆದರೆ, ಡಿಆರ್ ಡಿಒ ಆಸ್ಪತ್ರೆಯಲ್ಲಿ 750 ರೋಗಿಗಳನ್ನು ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : 'Black Fungus' ನ್ನು ಸಾಂಕ್ರಾಮಿಕ ಕಾಯ್ದೆ ಅಡಿ ತರಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಕರೋನಾ ಸೋಂಕನ್ನು ತಡೆಗಟ್ಟಲು ಕಾಶಿವಾಸಿಗಳ ಕೊಡುಗೆಯ ಬಗ್ಗೆ ಪಿಎಂ ಮೋದಿ ಚರ್ಚಿಸಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News