Ravindra Jadeja Retirement: 17 ವರ್ಷಗಳ ನಂತರ ಟಿ 20 ವಿಶ್ವಕಪ್ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾ ಇದೆ. ಆದರೆ ಈ ಬೆನ್ನಲ್ಲೇ ಟೀಂ ಇಂಡಿಯಾದ ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದರು. ಈ ಬೆನ್ನಲ್ಲೇ ರವೀಂದ್ರ ಜಡೇಜಾ ಕೂಡ ಟಿ20ಗೆ ವಿದಾಯ ಘೋಷಿಸಿದ್ದಾರೆ.
ಇದನ್ನೂ ಓದಿ: ಡಯೆಟ್ ಅಗತ್ಯವೇ ಇಲ್ಲ! ಈ ಗಿಡದ ಚಿಗುರನ್ನು ಅರೆದು ನೀರಲ್ಲಿ ಬೆರೆಸಿ ಕುಡಿದರೆ ಕೇವಲ 4 ದಿನದಲ್ಲಿ ಸೊಂಟದ ಬೊಜ್ಜು ಕರಗುತ್ತೆ
ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣಗಳ ಮೂಲಕ ಪೋಸ್ಟ್ ಶೇರ್ ಮಾಡಿ ಟಿ20ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಭಾರತ ತಂಡದ ಪರ ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನು ಆಡುವುದನ್ನು ಮುಂದುವರಿಸುವುದಾಗಿ ರವೀಂದ್ರ ಜಡೇಜಾ ಸ್ಪಷ್ಟಪಡಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ನಿವೃತ್ತಿ ಘೋಷಿಸಿದ ರವೀಂದ್ರ ಜಡೇಜಾ, ' ತುಂಬಿದ ಹೃದಯದಿಂದ ಧನ್ಯವಾದ ಹೇಳುತ್ತಿದ್ದೇನೆ. ಇದೇ ವೇಳೆ T20 ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತೇನೆ. ಯಾವಾಗಲೂ ನನ್ನ ದೇಶಕ್ಕಾಗಿ ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ ಮತ್ತು ಇತರ ಸ್ವರೂಪಗಳಲ್ಲಿಯೂ ಮುಂದುವರಿಸಲು ಇಷ್ಟಪಡುತ್ತೇನೆ. ಟಿ20 ವಿಶ್ವಕಪ್ ಗೆಲ್ಲುವುದು ನನ್ನ ಕನಸಾಗಿತ್ತು, ಇದು ನನ್ನ ಟಿ20 ಅಂತರಾಷ್ಟ್ರೀಯ ವೃತ್ತಿಜೀವನದ ಉತ್ತುಂಗ ಶಿಖರ. ನೆನಪುಗಳು, ಉತ್ಸಾಹ ಮತ್ತು ಅಚಲ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಜೈ ಹಿಂದ್” ಎಂದು ಬರೆದುಕೊಂಡಿದ್ದಾರೆ
ಇದನ್ನೂ ಓದಿ: ಮುಖದ ಮೇಲೆ ಈ ಬದಲಾವಣೆಗಳು ಕಂಡರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದು ಅರ್ಥ!
ರವೀಂದ್ರ ಜಡೇಜಾ ವೃತ್ತಿಜೀವನ:
ರವೀಂದ್ರ ಜಡೇಜಾ 2009 ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಪಾದಾರ್ಪಣೆ ಮಾಡಿದ್ದರು. 74 ಟಿ20 ಪಂದ್ಯಗಳ 41 ಇನ್ನಿಂಗ್ಸ್ಗಳಲ್ಲಿ 515 ರನ್ ಗಳಿಸಿದ್ದಾರೆ. ಅವರ ಸರಾಸರಿ 21.46 ಮತ್ತು ಸ್ಟ್ರೈಕ್ ರೇಟ್ 127.16 ಆಗಿತ್ತು. ಉತ್ತಮ ಸ್ಕೋರ್ 46 ರನ್. ಬೌಲಿಂಗ್’ನಲ್ಲಿ ರವೀಂದ್ರ ಜಡೇಜಾ 71 ಟಿ20 ಇನ್ನಿಂಗ್ಸ್’ಗಳಲ್ಲಿ ಒಟ್ಟು 54 ವಿಕೆಟ್ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರ ಸರಾಸರಿ 29.85 ಮತ್ತು ಆರ್ಥಿಕತೆ 7.13. ಬೌಲಿಂಗ್’ನಲ್ಲಿ ಅವರ ಅತ್ಯುತ್ತಮ ಫಿಗರ್ 15 ರನ್’ಗಳಿಗೆ ಮೂರು ವಿಕೆಟ್ಗಳು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್