PIB Fact Check: ಕೇಂದ್ರ ಸರ್ಕಾರದ ಹೆಸರಲ್ಲಿ ನಡೆಯುತ್ತಿರುವ ಈ ಯೋಜನೆ ಬಗ್ಗೆ ಇರಲಿ ಎಚ್ಚರ! ಇಲ್ಲಿದೆ ಸತ್ಯಾಸತ್ಯತೆ

PIB Fact Check: ನಿಮಗೆ ವಾಟ್ಸಾಪ್ ನಲ್ಲಿ ಸಂದೇಶ ಬಂದಿದೆಯೇ, ಅದರಲ್ಲಿ ಕೇಂದ್ರ ಸರ್ಕಾರ ಜನರಿಗೆ ಉಚಿತ ಲ್ಯಾಪ್ ಟಾಪ್ ವಿತರಿಸುತ್ತಿದೆ ಎಂದು ಹೇಳಲಾಗಿದೆ. ಹೌದು ಎಂದಾದರೆ, ಮೊದಲು ಈ ಸುದ್ದಿಯನ್ನು ಓದಿ.

Written by - Yashaswini V | Last Updated : Nov 9, 2021, 11:48 AM IST
  • ಸರ್ಕಾರದ ಹೆಸರಿನಲ್ಲಿ ಸಂದೇಶವೊಂದು ವೈರಲ್ ಆಗುತ್ತಿದೆ
  • ಈ ವೈರಲ್ ಸಂದೇಶದ ಫೋಟೋವನ್ನು ಪಿಐಬಿ ಹಂಚಿಕೊಂಡಿದೆ
  • ಈ ಕುರಿತಂತೆ ಪಿಬಿಐ ಸತ್ಯಾಸತ್ಯತೆಯನ್ನು ಪರಿಶೀಲಿಸಲಿದೆ
PIB Fact Check: ಕೇಂದ್ರ ಸರ್ಕಾರದ ಹೆಸರಲ್ಲಿ ನಡೆಯುತ್ತಿರುವ ಈ ಯೋಜನೆ ಬಗ್ಗೆ ಇರಲಿ ಎಚ್ಚರ! ಇಲ್ಲಿದೆ ಸತ್ಯಾಸತ್ಯತೆ title=
Free Laptop

PIB Fact Check: ವಾಟ್ಸ್‌ಆ್ಯಪ್‌ನಲ್ಲಿ ಸಂದೇಶವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಕೇಂದ್ರ ಸರ್ಕಾರ ಜನರಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸುತ್ತಿದೆ ಎಂದು ಹೇಳಲಾಗಿದೆ. ಸರ್ಕಾರ ತನ್ನ ಯೋಜನೆಯಡಿ ಜನರಿಗೆ ಉಚಿತ ಲ್ಯಾಪ್‌ಟಾಪ್ (Free Laptop)  ನೀಡುತ್ತಿದೆ ಎಂದು ಈ ಸಂದೇಶದಲ್ಲಿ ತಿಳಿಸಲಾಗಿದೆ. ಆದರೆ ಪ್ರಶ್ನೆಯೆಂದರೆ, ಸರ್ಕಾರ ನಿಜವಾಗಿಯೂ ಅಂತಹ ಯಾವುದೇ ಯೋಜನೆಯನ್ನು ಘೋಷಿಸಿದೆಯೇ? ಪಿಐಬಿ ಫ್ಯಾಕ್ಟ್ ಚೆಕ್ ಹಲವು ತನಿಖೆಗಳ ನಂತರ ಈ ವೈರಲ್ ಸಂದೇಶದ ಬಗ್ಗೆ ಮಾಹಿತಿ ನೀಡಿದೆ. 

ಸಂದೇಶದಲ್ಲಿ ಏನು ಹೇಳಲಾಗಿದೆ?
ಈ ವೈರಲ್ ಸಂದೇಶದ ಬಗ್ಗೆ ತನಿಖೆ ನಡೆಸಿದ ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದು, ಪ್ರಧಾನಿ ಉಚಿತ ಲ್ಯಾಪ್‌ಟಾಪ್ (Free Laptop) ವಿತರಣಾ ಯೋಜನೆಯಡಿ ಎಲ್ಲರಿಗೂ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ ಎಂದು ಸಂದೇಶದಲ್ಲಿ ಹೇಳಲಾಗುತ್ತಿದೆ. ಇದನ್ನು ನಕಲಿ ವಾಟ್ಸಾಪ್ ಸಂದೇಶ ಎಂದು ಪಿಐಬಿ ಹೇಳಿದೆ. 

ಇದನ್ನೂ ಓದಿ- Bhopal: ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ಅಗ್ನಿ ಅವಘಡ

ಹಾಗಾಗಿ ಇಂತಹ ನಕಲಿ ಸಂದೇಶಗಳ (Fake Message) ಬಗ್ಗೆ ಎಚ್ಚರದಿಂದಿರಿ. ಈ ನಕಲಿ ಸಂದೇಶಗಳನ್ನು ಹಂಚಿಕೊಳ್ಳದಂತೆ ಅಥವಾ ಫಾರ್ವರ್ಡ್ ಮಾಡದಂತೆಯೂ ಕೇಳಲಾಗಿದೆ. ಇದರೊಂದಿಗೆ, ಅಂತಹ ಯಾವುದೇ ಲಿಂಕ್ ಮತ್ತು ವೆಬ್‌ಸೈಟ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಸೂಚಿಸಲಾಗಿದೆ.

PIB ಎಚ್ಚರಿಕೆಗಳು!
ಈ ಜಾಹೀರಾತನ್ನು ನೀವು ಎಲ್ಲೋ ನೋಡಿದ್ದರೆ ಅಥವಾ ವಾಟ್ಸಾಪ್‌ನಲ್ಲಿ ನಿಮಗೆ ಕಳುಹಿಸಿದರೆ, ಅದನ್ನು ನಂಬಬೇಡಿ ಎಂದು ಪಿಐಬಿ ಎಚ್ಚರಿಸಿದೆ. ಇದರಲ್ಲಿ ನೀಡಿರುವ ಸಂಖ್ಯೆಗೆ ಯಾವುದೇ SMS ಕಳುಹಿಸಬೇಡಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ನೀವು ವಂಚನೆಗೆ ಬಲಿಯಾಗಬಹುದು. ಇದರೊಂದಿಗೆ ಈ ವಂಚನೆಯ ಬಗ್ಗೆ ಇತರರಿಗೂ ಅರಿವು ಮೂಡಿಸಿ. ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ- Packaging Rules in India:ಹಾಲು, ಚಹಾ, ಬಿಸ್ಕಿಟ್, ಖಾದ್ಯ ತೈಲಗಳ ಬೆಲೆ ಕುರಿತು ಹೊಸ ನಿಯಮ ಏಪ್ರಿಲ್ 1, 2022ರಿಂದ ಜಾರಿ

PIB ಸತ್ಯ ನಿರಾಕರಣೆಗಳನ್ನು ಪರಿಶೀಲಿಸುತ್ತದೆ :
ಸರ್ಕಾರದ ನೀತಿಗಳು ಅಥವಾ ಯೋಜನೆಗಳ ಹೆಸರಿನಲ್ಲಿ ವೈರಲ್ ಆಗುತ್ತಿರುವ ಮಾಹಿತಿಯನ್ನು ಪಿಐಬಿ ಫ್ಯಾಕ್ಟ್ ಚೆಕ್ ನಿರಾಕರಿಸಿದೆ. ಯಾವುದೇ ಸರ್ಕಾರಕ್ಕೆ ಸಂಬಂಧಿಸಿದ ಸುದ್ದಿಗಳು ನಕಲಿ ಎಂದು ನೀವು ಅನುಮಾನಿಸಿದರೆ ಅಥವಾ ಯಾವುದಾದರು ಅಂತಹ ಸಂದೇಶಗಳ ಬಗ್ಗೆ ನಿಮಗೆ ಅನುಮಾನವಿದ್ದರೆ ನೀವು ಅದರ ಬಗ್ಗೆ PIB ಸತ್ಯ ಪರಿಶೀಲನೆಗೆ ತಿಳಿಸಬಹುದು. ಇದಕ್ಕಾಗಿ ನೀವು 918799711259 ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ socialmedia@pib.gov.in ಇಮೇಲ್ ಐಡಿ ಮಾಹಿತಿ ನೀಡುವ ಮೂಲಕ ಇದರ ಬಗ್ಗೆ ಮಾಹಿತಿ ತಿಳಿಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News