Viral Video: ನಾಯಿಗಳಿಂದ ಮಗುವಿನ ಪ್ರಾಣ ರಕ್ಷಿಸುತ್ತಿರುವ ತಾಯಿ ಕೋತಿ, ವಿಡಿಯೋ ತಯಾರಕನ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು

Trending Video: ದೋಣಿಯಲ್ಲಿ ಸವಾರಿ ಮಾಡುತ್ತಿರುವ ಎರಡು ಕಾಡು ನಾಯಿಗಳಿಂದ ತನ್ನ ಮಗುವಿನ ಪ್ರಾಣವನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಡುತ್ತಿರುವ  ಕೋತಿಯೊಂದನ್ನು ನೀವು ವಿಡಿಯೋದಲ್ಲಿ ನೋಡಬಹುದು.  

Written by - Nitin Tabib | Last Updated : Dec 16, 2022, 06:43 PM IST
  • ಈ ವೈರಲ್ ಕ್ಲಿಪ್ ಅನ್ನು ಮಂಗಳವಾರ ವಕೀಲ ನಜ್ನೀನ್ ಅಖ್ತರ್ ಅವರ ಟ್ವಿಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ
  • ಮತ್ತು ಹಂಚಿಕೊಂಡಾಕ್ಷಣ ಅದು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರಿ ವೈರಲ್ ಆಗಿದೆ.
Viral Video: ನಾಯಿಗಳಿಂದ ಮಗುವಿನ ಪ್ರಾಣ ರಕ್ಷಿಸುತ್ತಿರುವ ತಾಯಿ ಕೋತಿ, ವಿಡಿಯೋ ತಯಾರಕನ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು title=
Mother Monkey Saving Its Child

Trending Monkey Dog Video: ತನ್ನ ಮಗುವನ್ನು ರಕ್ಷಿಸಲು ಪೋಷಕರು ಯಾವ ಹಂತಕ್ಕೆ ಬೇಕಾದರೂ ಹೋಗಲು ಯತ್ನಿಸುತ್ತಾರೆ ಎಂಬುದನ್ನು ನೀವೂ ಕೇಳಿರಬಹುದು. ಅಷ್ಟೇ ಯಾಕೆ ಒಂದು ವೇಳೆ ತಮ್ಮ ಮಗುವಿನ ಪ್ರಾಣಕ್ಕೆ ಕುತ್ತು ಬಂದರೂ ಕೂಡ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ತಂದೆ-ತಾಯಿಗಳು ತಮ್ಮ ಮಗುವನ್ನು ಕಾಪಾಡುತ್ತಾರೆ. ಈಗ ಮಕ್ಕಳು ಮನುಷ್ಯರ ಮಕ್ಕಳಾಗಿರಬಹುದು ಅಥವಾ ಪ್ರಾಣಿಗಳ ಮಕ್ಕಳು.. ನಮ್ಮ ಮಕ್ಕಳು ನಮ್ಮ ಪ್ರಾಣವೇ ಸರಿ. ಇದೇ ರೀತಿ ಪ್ರಾಣಿಯೊಂದು ತನ್ನ ಮಗುವಿನ ಪ್ರಾಣವನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ತಾಯಿ ಕೋತಿಯೊಂದು ಎರಡು ಕಾಡು ನಾಯಿಗಳಿಂದ  ತನ್ನ ಮಗುವಿನ ಪ್ರಾಣವನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪದೇ ಪದೇ ಪಣಕ್ಕಿಡುತ್ತಿರುವುದನ್ನು ನೀವು ನೋಡಬಹುದು.

ಎರಡು ನಾಯಿಗಳ ದಾಳಿಯಿಂದ ಮಂಗವೊಂದು ತನ್ನ ಅಂಬೆಗಾಲಿಡುವ ಮಗುವನ್ನು ರಕ್ಷಿಸುವ ವೀಡಿಯೊವೊಂದು ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದ್ದು, ಹೃದಯ ವಿದ್ರಾವಕವಾಗಿದೆ. ಈ ವೈರಲ್ ಕ್ಲಿಪ್‌ನಲ್ಲಿ, ಮಂಗವು ತನ್ನ ಮಗುವಿನೊಂದಿಗೆ ನದಿಯಲ್ಲಿ ಖಾಲಿ ದೋಣಿಯಲ್ಲಿ ಕುಳಿತಿರುವುದನ್ನು ನೀವು ಗಮನಿಸಬಹುದು, ಎರಡು ನಾಯಿಗಳು ಒಂದೇ ದೋಣಿಯಲ್ಲಿ ಬಂದು ತಾಯಿ ಕೋತಿ ಮತ್ತು ಮರಿ ಕೋತಿ ಮೇಲೆ ದಾಳಿ ಮಾಡುತ್ತವೆ.

ಇದನ್ನೂ ಓದಿ-Viral Video: ಮಂಡ್ಯದ ಕಾಮುಕ ಮುಖ್ಯಶಿಕ್ಷಕನಿಗೆ ವಿದ್ಯಾರ್ಥಿನಿಯರು ಥಳಿಸಿದ್ಹೇಗೆ ಗೊತ್ತಾ? ಇಲ್ಲಿದೆ ವೈರಲ್ ವಿಡಿಯೋ

ಮಗುವನ್ನು ರಕ್ಷಿಸುತ್ತಿರುವ ಕೋತಿ
ಈ ವೈರಲ್ ಕ್ಲಿಪ್ ಅನ್ನು ಮಂಗಳವಾರ ವಕೀಲ ನಜ್ನೀನ್ ಅಖ್ತರ್ ಅವರ ಟ್ವಿಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ ಮತ್ತು ಹಂಚಿಕೊಂಡಾಕ್ಷಣ ಅದು  ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೊವನ್ನು ಪೋಸ್ಟ್ ಮಾಡುವಾಗ ಅದಕ್ಕೆ "#ತಾಯಿ ನಾಯಿಗಳಿಂದ ತನ್ನ ಮಗುವನ್ನು ರಕ್ಷಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದಾಳೆ" ಎಂಬ ಶೀರ್ಷಿಕೆ ನೀಡಲಾಗಿದೆ.

ಇದನ್ನೂ ಓದಿ-Viral News: ಎರಡು ವರ್ಷದ ಮಗುವನ್ನು ಜೀವಂತ ನುಂಗಿ ಹಾಕಿದ ಹಿಪ್ಪೋ... ಆದರೂ....?

ಬಳಕೆದಾರರ ಕೆಂಗಣ್ಣಿಗೆ ಗುರಿಯಾದ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ
ಕೋತಿಗೆ ಸಹಾಯ ಮಾಡುವ ಬದಲು, ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊ ರೆಕಾರ್ಡ್ ಮಾಡಿದ ವ್ಯಕ್ತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 'ಈ ವಿಡಿಯೋ ಮಾಡುತ್ತಿರುವ ವ್ಯಕ್ತಿ ನನ್ನ ದೃಷ್ಟಿಯಲ್ಲಿ ಅತ್ಯಂತ ಕೆಟ್ಟ ವ್ಯಕ್ತಿ' ಎಂದು ಒರ್ದ್ವ ಬಳಕೆದಾರರು ಬರೆದುಕೊಂಡರೆ, ಮತ್ತೋರ್ವ ಬಳಕೆದಾರರು, "ಮಂಗವು ತಾಯಿಯ ಕರ್ತವ್ಯವನ್ನು ನಿರ್ವಹಿಸಿದೆ, ಆದರೆ ಈ ವೀಡಿಯೊವನ್ನು ಮಾಡಿದ ವ್ಯಕ್ತಿ ಮಾನವನ ಕರ್ತವ್ಯವನ್ನು ನಿರ್ವಹಿಸಲಿಲ್ಲ" ಎಂದು ಬರೆದಿದ್ದಾರೆ. ಈ ವೀಡಿಯೊವನ್ನು ಹಂಚಿಕೊಂಡ ವ್ಯಕ್ತಿ, "ಈ ವಿಡಿಯೋದಲ್ಲಿ ಒಟ್ಟು ಮೂರು ನಾಯಿಗಳಿವೆ, ಎರಡು ಗೋಚರಿಸುತ್ತಿವೆ ಮತ್ತು ಮೂರನೆಯದು ಈ ವೀಡಿಯೊವನ್ನು ಚಿತ್ರೀಕರಿಸುತ್ತಿದೆ" ಎಂದು ಬರೆದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News