Microsoft CEO : ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲು ಸತ್ಯ ನಾದೆಳ್ಲ ಭಾರತಕ್ಕೆ ಭೇಟಿ!

ಮುಂದಿನ ವರ್ಷ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಮೈಕ್ರೋಸಾಫ್ಟ್ ಇಂದು ಪ್ರಕಟಣೆಯಲ್ಲಿ ತಿಳಿಸಿದೆ. 

Written by - Channabasava A Kashinakunti | Last Updated : Oct 20, 2022, 03:40 PM IST
  • ಮೈಕ್ರೋಸಾಫ್ಟ್ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಳ್ಲ
  • ದೇಶದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಘೋಷಣೆ
  • ಮುಂದಿನ ವರ್ಷ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಲು ಪ್ಲಾನ್
Microsoft CEO : ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲು ಸತ್ಯ ನಾದೆಳ್ಲ ಭಾರತಕ್ಕೆ ಭೇಟಿ! title=

ನವದೆಹಲಿ : ಜಗತ್ತಿನ ಪ್ರಸಿದ್ಧ ಸಾಫ್ಟ್ವೇರ್ ಕಂಪೆನಿಯಾದ ಮೈಕ್ರೋಸಾಫ್ಟ್ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಳ್ಲ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಘೋಷಣೆ ಮಾಡಲಾಗಿತ್ತು. ಅದನ್ನು ಸ್ವೀಕರಿಸಲು ಅವರು ಮುಂದಿನ ವರ್ಷ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಮೈಕ್ರೋಸಾಫ್ಟ್ ಇಂದು ಪ್ರಕಟಣೆಯಲ್ಲಿ ತಿಳಿಸಿದೆ. 

ನಾದೆಳ್ಲ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತದ ಕಾನ್ಸುಲ್ ಜನರಲ್ ಟಿವಿ ನಾಗೇಂದ್ರ ಪ್ರಸಾದ್ ಅವರನ್ನು ಭೇಟಿಯಾಗಿ, ಭಾರತದಲ್ಲಿ ಅಂತರ್ಗತ ಬೆಳವಣಿಗೆಯನ್ನು ಸಶಕ್ತಗೊಳಿಸುವಲ್ಲಿ ಡಿಜಿಟಲ್ ತಂತ್ರಜ್ಞಾನದ ನಿರ್ಣಾಯಕ ಪಾತ್ರದ ಬಗ್ಗೆ ಚರ್ಚಿಸಿದರು.

ಇದನ್ನೂ ಓದಿ : ಬಿಜೆಪಿ ಜೊತೆ ಮತ್ತೆ ನಿತೀಶ್ ಸಂಪರ್ಕದಲ್ಲಿದ್ದಾರೆ- ಪ್ರಶಾಂತ್ ಕಿಶೋರ್

ಈ ಬಗ್ಗೆ ಭೇಟಿಯ ನಂತರ ಮಾತನಾಡಿದ ಅವರು "ನಾವು ಐತಿಹಾಸಿಕ ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಬದಲಾವಣೆಯ ಅವಧಿಯಲ್ಲಿ ಜೀವಿಸುತ್ತಿದ್ದೇವೆ" ಎಂದರು

"ಮುಂದಿನ ದಶಕವನ್ನು ಡಿಜಿಟಲ್ ತಂತ್ರಜ್ಞಾನದಿಂದ ವ್ಯಾಖ್ಯಾನಿಸಲಾಗುತ್ತದೆ. ಪ್ರತಿ ಗಾತ್ರದ ಭಾರತೀಯ ಕೈಗಾರಿಕೆಗಳು ಮತ್ತು ಸಂಸ್ಥೆಗಳು ತಂತ್ರಜ್ಞಾನದ ಕಡೆಗೆ ವಾಲುತ್ತಿವೆ, ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡಲು ಸಹಾಯ ಮಾಡುತ್ತವೆ, ಇದು ಅಂತಿಮವಾಗಿ ಹೆಚ್ಚಿನ, ಬುದ್ದಿವಂತಿಕೆ ಮತ್ತು ನಾವೀನ್ಯತೆಯ ಆವಿಷ್ಕಾರಕ್ಕೆ ಕಾರಣವಾಗುತ್ತದೆ" ಎಂದು ಹೇಳಿದರು.

ಚರ್ಚೆಯು ಭಾರತದ ಬೆಳವಣಿಗೆಯ ಪಥ ಮತ್ತು ಜಾಗತಿಕ ರಾಜಕೀಯ ಮತ್ತು ತಂತ್ರಜ್ಞಾನದ ನಾಯಕನಾಗುವ ದೇಶದ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸಿದೆ.

ಸಭೆಯಲ್ಲಿ, ಸತ್ಯ ನಾದೆಳ್ಲ ಅವರು ವಿಶಿಷ್ಟ ಸೇವೆಗಾಗಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ಔಪಚಾರಿಕವಾಗಿ ಸ್ವೀಕರಿಸಿದರು. ಈ ವರ್ಷದ ಆರಂಭದಲ್ಲಿ 17 ಪ್ರಶಸ್ತಿ ಪುರಸ್ಕೃತರಲ್ಲಿ ನಾದೆಳ್ಲ ಒಬ್ಬರಾಗಿದ್ದರು.

ಇದನ್ನೂ ಓದಿ : ಖರ್ಗೆ ಅಧ್ಯಕ್ಷರಾಗುತ್ತಿದ್ದಂತೆ ಹಳೆ ಸಂಪ್ರದಾಯ ಮುರಿದ ಸೋನಿಯಾ ಗಾಂಧಿ..!

ಔಪಚಾರಿಕವಾಗಿ  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾದೆಳ್ಲ, "ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ಮತ್ತು ಹಲವಾರು ಅಸಾಧಾರಣ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡಿರುವುದು ಗೌರವ ತಂದಿದೆ. ನಾನು ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಮತ್ತು ಭಾರತೀಯರಿಗೆ ಕೃತಜ್ಞನಾಗಿದ್ದೇನೆ ಮತ್ತು ಅವರ ಸಹಾಯಕ್ಕೆ ಅವರ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಹೆಚ್ಚಿನದನ್ನು ಸಾಧಿಸಲು ತಂತ್ರಜ್ಞಾನವನ್ನು ಬಳಸಿ,"  ಹೇಳಿದರು.

ಅವರು ಜನವರಿ 2023 ರಲ್ಲಿ ಭಾರತಕ್ಕೆ ಭೇಟಿ ನೀಡಲು ಪ್ಲಾನ್ ಮಾಡುತ್ತಿದ್ದಾರೆ, ಸುಮಾರು ಮೂರು ವರ್ಷಗಳ ನಂತರ ದೇಶಕ್ಕೆ ಅವರ ಮೊದಲ ಭೇಟಿಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News