ಮುಂಬೈನ ಬೈಕುಲ್ಲಾದ ಮುಸ್ತಫಾ ಬಜಾರ್‌ನಲ್ಲಿ ಬೆಂಕಿ ದುರಂತ

ಬೆಂಕಿ ನಂದಿಸಲು ಎಂಟು ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.

Last Updated : Aug 28, 2019, 07:17 AM IST
ಮುಂಬೈನ ಬೈಕುಲ್ಲಾದ ಮುಸ್ತಫಾ ಬಜಾರ್‌ನಲ್ಲಿ ಬೆಂಕಿ ದುರಂತ title=

ಮುಂಬೈ: ಮುಂಬೈನ ಬೈಕುಲ್ಲಾದ ಮುಸ್ತಫಾ ಬಜಾರ್‌ನಲ್ಲಿ ಬುಧವಾರ ಮುಂಜಾನೆ ದೊಡ್ಡ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿ ನಂದಿಸಲು ಮತ್ತು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಎಂಟು ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಸಾವುನೋವು ಅಥವಾ ಗಾಯಗಳ ಬಗ್ಗೆ ಈವರೆಗೆ ಯಾವುದೇ ವರದಿಗಳು ಹೊರಬಂದಿಲ್ಲ. 

ಸಾಂತಾ ಸಾವ್ಟಾ ಮಾರ್ಗದಲ್ಲಿ ಈ ಅಗ್ನಿ ದುರಂತ ಸಂಭವಿಸಿದೆ. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ.

ಕಳೆದ ತಿಂಗಳು, ಅಂಧೇರಿಯ ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್ಎಲ್) ಕಟ್ಟಡದೊಳಗೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 84 ಜನರನ್ನು ಕಟ್ಟಡದಿಂದ ರಕ್ಷಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮುಂಬೈಯಲ್ಲಿ ಬೆಂಕಿಗೆ ಸಂಬಂಧಿಸಿದ ಘಟನೆಗಳು ಹೆಚ್ಚಾಗಿದೆ. ಡಿಸೆಂಬರ್ 2017 ರಲ್ಲಿ, ಮೇಲ್ಛಾವಣಿಯ ಪಬ್‌ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ 14 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಂದು ವರ್ಷದ ನಂತರ, 2018 ರ ಡಿಸೆಂಬರ್‌ನಲ್ಲಿ ಮುಂಬೈನ ಇಎಸ್‌ಐಸಿ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 10 ಜನರು ಸಾವನ್ನಪ್ಪಿದ್ದಾರೆ. ಮಕ್ಕಳು ಮತ್ತು ರೋಗಿಗಳು ಸೇರಿದಂತೆ 175 ಜನರು ಗಾಯಗೊಂಡಿದ್ದರು.

Trending News