ಮಹಾರಾಷ್ಟ್ರದ ಅಕೋಲಾದಲ್ಲಿ ಗರಿಷ್ಟ ತಾಪಮಾನ ದಾಖಲು..!

ಮಾನ್ಸೂನ್ ಪೂರ್ವ ಋತುವಿನಲ್ಲಿ ಏಪ್ರಿಲ್ ನಲ್ಲಿ ಎರಡನೇ ತಿಂಗಳು ಪ್ರವೇಶಿಸುತ್ತಿದ್ದಂತೆಮಂಗಳವಾರ ತಾಪಮಾನ ದೇಶದಾದ್ಯಂತ ಹಲವಾರು ಭಾಗಗಳಲ್ಲಿ 40 ಡಿಗ್ರಿ ಗಡಿ ದಾಟಿದೆ.

Last Updated : Apr 14, 2020, 07:08 PM IST
ಮಹಾರಾಷ್ಟ್ರದ ಅಕೋಲಾದಲ್ಲಿ ಗರಿಷ್ಟ ತಾಪಮಾನ ದಾಖಲು..! title=

ನವದೆಹಲಿ: ಮಾನ್ಸೂನ್ ಪೂರ್ವ ಋತುವಿನಲ್ಲಿ ಏಪ್ರಿಲ್ ನಲ್ಲಿ ಎರಡನೇ ತಿಂಗಳು ಪ್ರವೇಶಿಸುತ್ತಿದ್ದಂತೆಮಂಗಳವಾರ ತಾಪಮಾನ ದೇಶದಾದ್ಯಂತ ಹಲವಾರು ಭಾಗಗಳಲ್ಲಿ 40 ಡಿಗ್ರಿ ಗಡಿ ದಾಟಿದೆ.

ಪ್ರಸ್ತುತ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮತ್ತು ಆಂಧ್ರಪ್ರದೇಶ ರಾಜ್ಯಗಳು ಟಾಪ್ 10 ಅತಿ ಹೆಚ್ಚು ನಗರಗಳ ಪಟ್ಟಿಯಲ್ಲಿ ಸೇರಿವೆ. ಮಂಗಳವಾರ, ಮಹಾರಾಷ್ಟ್ರದ ಅಕೋಲಾ ದೇಶದ ಅತಿ ಹೆಚ್ಚು ತಾಪಮಾನ ಹೊಂದಿರುವ ಸ್ಥಳವಾಗಿದ್ದು, ಗರಿಷ್ಠ ತಾಪಮಾನ 43.8  ಮತ್ತು ಗುಜರಾತ್ ಸುರೇಂದ್ರನಗರ 43.8.ನಲ್ಲಿ ದಾಖಲಾಗಿದೆ.

ಮಂಗಳವಾರ ಭಾರತದ ಎರಡನೇ ಅತಿ ಹೆಚ್ಚು ಸ್ಥಳವೆಂದರೆ ಗುಜರಾತ್‌ನ ಕೇಶೋಡ್ 43.4°ಸೆಲ್ಸಿಯಸ್, ನಂತರ ಗುಜರಾತ್‌ನ ರಾಜ್‌ಕೋಟ್ 43.3 °ಸೆಲ್ಸಿಯಸ್, ಮಧ್ಯಪ್ರದೇಶದ ಹೋಶಂಗಾಬಾದ್, ಗುಜರಾತ್‌ನ ಕಂಡ್ಲಾ ಮತ್ತು ಆಂಧ್ರಪ್ರದೇಶದ ರೆಂಟಾಚಿಂಟಲಾ 43.2 ಗುಜರಾತ್‌ನ ಅಮ್ರೆಲಿ ಮತ್ತು ಮಹಾರಾಷ್ಟ್ರ 43 , ಮತ್ತು ಗುಜರಾತ್‌ನ ದೀಸಾ 42.8.ರಷ್ಟು ತಾಪಮಾನ ದಾಖಲಾಗಿದೆ.

ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ ಹಿಮಾಲಯ ಪ್ರದೇಶದ ಭಾಗದಲ್ಲಿ ಆಲಿಕಲ್ಲು ಮಳೆ ಮತ್ತು ಗಾಳಿ ಬೀಸುವ ಸಾಧ್ಯತೆಯಿದೆ. ಸಾಮಾನ್ಯವಾಗಿ, ಮುಂದಿನ 24 ಗಂಟೆಗಳಲ್ಲಿ ಪಂಜಾಬ್, ಹರಿಯಾಣ ಮತ್ತು ಚಂಡೀಗಢ, ಉತ್ತರ ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದ ಮೇಲೆ ಮೋಡ ಕವಿದ ಆಕಾಶ ಮತ್ತು ಪ್ರತ್ಯೇಕ ಮಳೆ / ಗುಡುಗು ಸಹ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Trending News