ನವದೆಹಲಿ: ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಗುರುವಾರ ಏರ್ಪಡಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಎಂದೇ ದಾಖಲೆ ಬರೆದಿರುವ ಜ್ಯೋತಿ ಅಮ್ಗೆ ಭಾಗವಹಿಸಿದರು.
ಪ್ರತಿ ವರ್ಷ ಯೋಗ ದಿನಾಚರಣೆ ಅಂಗವಾಗಿ ನಗರದಲ್ಲಿ ಏರ್ಪಡಿಸುವ ಯೋಗ ಕಾರ್ಯಕ್ರಮಗಳಲ್ಲಿ ತಪ್ಪದೇ ಪಾಲ್ಗೊಳ್ಳುವ ಜ್ಯೋತಿ ಅಮ್ಗೆ ಅವರು, ಇಂದು ಯೋಗಪಟು ಧನಶ್ರೀ ಲೆಕುರ್ವಾಲೆ ಅವರ ಅಂಗೈ ಮೇಲೆ ಕುಳಿತು ತಮ್ಮ ಕೈಗಳನ್ನು ಎತ್ತಿ ಯೋಗಾಸನ ಮಾಡಿದರು. ಸದ್ಯ ಆ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
#WATCH World's shortest woman, Jyoti Amge, practices Yoga in Nagpur, ahead of #InternationalYogaDay tomorrow. pic.twitter.com/whoCPhq4ab
— ANI (@ANI) June 20, 2019
ಕೇಂದ್ರ ಸರ್ಕಾರ ಜೂನ್ 21ರಂದು ದೇಶಾದ್ಯಂತ ಯೋಗ ದಿನಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಲ್ಲಿ ಈ ಬಾರಿ ಮುಖ್ಯ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಾಕ್ರಮದಲ್ಲಿ ಭಾಗವಹಿಸಲಿದ್ದು, ಜನರಿಗೆ ಯೋಗಾಭ್ಯಾಸ ಹೇಳಿಕೊಡಲಿದ್ದಾರೆ.
Nagpur: World's shortest woman, Jyoti Amge, practices Yoga, ahead of #InternationalYogaDay tomorrow. pic.twitter.com/uRnxen29qv
— ANI (@ANI) June 20, 2019