ಎಲ್‌ಪಿಜಿ ಗ್ರಾಹಕರಿಗೆ ಶಾಕ್! ಪ್ರತಿ ಸಿಲಿಂಡರ್ ಬೆಲೆ ಮತ್ತಷ್ಟು ದುಬಾರಿ

ಎಲ್ಪಿಜಿ ಸಿಲಿಂಡರ್ ಮೇಲಿನ ಪರಿಷ್ಕೃತ ದರ ಮೇ 1ರಿಂದಲೇ ಜಾರಿಯಾಗಲಿದೆ.

Last Updated : May 1, 2019, 03:27 PM IST
ಎಲ್‌ಪಿಜಿ ಗ್ರಾಹಕರಿಗೆ ಶಾಕ್! ಪ್ರತಿ ಸಿಲಿಂಡರ್ ಬೆಲೆ ಮತ್ತಷ್ಟು ದುಬಾರಿ title=

ನವದೆಹಲಿ: ದೇಶಾದ್ಯಂತ ಲೋಕಸಭಾ ಚುನಾವಣೆ ನಡೆಯುತ್ತಿರುವ ನಡುವೆಯೇ ಜನತೆಗೆ ಕೇಂದ್ರ ಸರ್ಕಾರ ಎಲ್ಪಿಜಿ ಸಿಲಿಂಡರ್ ಶಾಕ್ ನೀಡಿದೆ. 

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಅಡುಗೆ ಅನಿಲ (ಎಲ್ಪಿಜಿ)ದ 14.2 ಕೆ.ಜಿ ಸಿಲೆಂಡರ್ ಬೆಲೆಯನ್ನು ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಹೊಸ ದರ ಅನ್ವಯವಾಗಲಿದೆ. ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ ದೆಹಲಿಯಲ್ಲಿ 0.28 ಪೈಸೆ ಮತ್ತು ಮುಂಬೈನಲ್ಲಿ 0.29 ಪೈಸೆ ಹೆಚ್ಚಳವಾಗಿದ್ದು, ಅದೇ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ದೆಹಲಿ ಮತ್ತು ಮುಂಬೈನಲ್ಲಿ 6 ರೂ.ಗಳಷ್ಟು ಏರಿಕೆಯಾಗಿದೆ. 

ಮೇ 1 ರಿಂದಲೇ ಹೊಸ ದರ ಜಾರಿ
ಎಲ್ಪಿಜಿ ಸಿಲಿಂಡರ್ ಮೇಲಿನ ಪರಿಷ್ಕೃತ ದರ ಮೇ 1ರಿಂದಲೇ ಜಾರಿಯಾಗಲಿದ್ದು, ಹೊಸ ದರದ ಅನ್ವಯ ದೆಹಲಿಯಲ್ಲಿ ಸಬ್ಸಿಡಿ ಸಹಿತ ಎಲ್ಪಿಜಿ  ಸಿಲೆಂಡರ್ ಬೆಲೆ 496.14 ರೂ., ಕೋಲ್ಕತಾದಲ್ಲಿ 499.29 ರೂ., ಮುಂಬೈನಲ್ಲಿ 493.86 ರೂ. ಮತ್ತು ಚೆನ್ನೈನಲ್ಲಿ 484.02 ರೂ. ಇರಲಿದೆ. ಅಂತೆಯೇ ಸಬ್ಸಿಡಿ ರಹಿತ ಪ್ರತಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ  712.5 ರೂ., ಮುಂಬೈನಲ್ಲಿ 684.50 ರೂ., ಕೋಲ್ಕತಾದಲ್ಲಿ 738.50 ರೂ. ಮತ್ತು ಚೆನ್ನೈನಲ್ಲಿ 728 ರೂ. ಆಗಿದೆ.

ಏಪ್ರಿಲ್ 1ರಂದೂ ಸಹ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ತೈಲ ಕಂಪನಿಗಳು ಮಾರುಕಟ್ಟೆಯಲ್ಲಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 5 ರೂ.ಗಳವರೆಗೆ, ಸಬ್ಸಿಡಿ ಸಹಿತ ಸಿಲಿಂಡರ್ ಬೆಳೆಯನು 25 ಪೈಸೆಗಳಷ್ಟು ಹೆಚ್ಚಳ ಮಾಡಲಾಗಿತ್ತು. 
 

Trending News