ಕಮಲಾ ಮಿಲ್ಸ್ ಅಗ್ನಿ ದುರಂತ: ಪಬ್ ನ ಇಬ್ಬರು ಮ್ಯಾನೇಜರ್ಗಳ ಬಂಧನ

ಕಮಲ ಮಿಲ್ಸ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ '1.ಎಬೌ' ಪಬ್ ನ ಇಬ್ಬರು ಮ್ಯಾನೇಜರ್ಗಳನ್ನು ಮುಂಬೈನ ಬೋಯ್ವಾಡಾ ನ್ಯಾಯಾಲಯ ಜನವರಿ 9ರ ವರೆಗೆ ಪೋಲಿಸ್ ಬಂಧನಕ್ಕೆ ಒಳಪಡಿಸಿದೆ. 

Last Updated : Jan 1, 2018, 05:20 PM IST
ಕಮಲಾ ಮಿಲ್ಸ್ ಅಗ್ನಿ ದುರಂತ: ಪಬ್ ನ ಇಬ್ಬರು ಮ್ಯಾನೇಜರ್ಗಳ ಬಂಧನ title=

ಮುಂಬೈ : ಇಲ್ಲಿನ ಕಮಲ ಮಿಲ್ಸ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ '1.ಎಬೌ' ಪಬ್ ನ ಇಬ್ಬರು ಮ್ಯಾನೇಜರ್ಗಳನ್ನು ಮುಂಬೈನ ಬೋಯ್ವಾಡಾ ನ್ಯಾಯಾಲಯ ಜನವರಿ 9ರ ವರೆಗೆ ಪೋಲಿಸ್ ಬಂಧನಕ್ಕೆ ಒಳಪಡಿಸಿದೆ. 

ಈ ಘಟನೆಗೆ ಸಂಬಂಧಿಸಿದಂತೆ ಗಿಬ್ಸನ್ ಲೋಪೇಜ್(34) ಮತ್ತು ಕೆವಿನ್ ಬಾವಾ(35) ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. 

ಈ ಬಂಧಿತರಿಬ್ಬರೂ ಲೋವರ್ ಪಾರಲ್ ಪ್ರದೇಶದ ಕಮಲಾ ಮಿಲ್ಸ್ ಆವರಣದಲ್ಲಿರುವ ಪಬ್ನಲ್ಲಿ ಮ್ಯಾನೇಜರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೆಂಕಿ ಅನಾಹುತ ಸಂಭಾವಿಸಿದ ಸಂದರ್ಭದಲ್ಲಿ ಇವರಿಬ್ಬರೂ ಪಬ್ ನಲ್ಲಿಯೇ ಇದ್ದರೂ ಅಲ್ಲಿನ ಅತಿಥಿಗಳಿಗೆ ಸಹಾಯ ಮಾಡದೆ ಅಲ್ಲಿಂದ ಪರಾರಿಯಾಗಿದ್ದರು. 

"ಆ ಪಬ್ ನ ಇಬ್ಬರು ಮ್ಯಾನೆಜರ್ಗಳನ್ನು ಭಾರತಿಯ ದಂಡ ಸಂಹಿತೆ ಕಾಯ್ದೆ 304, 337 ಮತ್ತು 34ರ ಅಡಿಯಲ್ಲಿ ಬಂಧಿಸಲಾಗಿದೆ'' ಎಂದು ಹಿರಿಯ ಪೋಲಿಸ್ ಇನ್ಸ್ ಪೆಕ್ಟರ್ ಅಹಮದ್ ಪಠಾಣ್ ತಿಳಿಸಿದ್ದಾರೆ. 

ಈ ಅಗ್ನಿ ದುರಂತವು ಡಿ.29ರಂದು ಕಮಲಾ ಮಿಲ್ಸ್ ಆವರಣದ ಪಬ್ ನಲ್ಲಿ ಸಂಭವಿಸಿದ್ದು, 11 ಮಹಿಳೆಯರು ಸೇರಿ 14 ಮಂದಿ ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದರು.

Trending News