ಮಂದಿರ ಮತ್ತು ಮಸೀದಿ ಬಗ್ಗೆ ಭಾರತ ಚಿಂತಿಸುತ್ತಿದ್ದರೆ ಸಮಯ ವ್ಯರ್ಥ-ನೌಕಾಪಡೆಯ ಮಾಜಿ ಮುಖ್ಯಸ್ಥ

ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಚೀನಾ ಮುಂದೆ ಸಾಗುತ್ತಿದೆ, ಭಾರತ ಮಂದಿರ ಮತ್ತು ಮಸೀದಿಗಳ ಬಗ್ಗೆ ಮಾತನಾಡುವ ಮೂಲಕ ತನ್ನನ್ನು ತಾನೇ ವಿಚಲಿತಗೊಳಿಸಿದರೆ ಅದರಿಂದ ಸಮಯ ವ್ಯರ್ಥ ಎಂದು ನೌಕಾಪಡೆಯ ಮಾಜಿ ಮುಖ್ಯಸ್ಥ ಅರುಣ್ ಪ್ರಕಾಶ್ ಹೇಳಿದ್ದಾರೆ. 

Last Updated : Aug 12, 2019, 02:33 PM IST
ಮಂದಿರ ಮತ್ತು ಮಸೀದಿ ಬಗ್ಗೆ ಭಾರತ ಚಿಂತಿಸುತ್ತಿದ್ದರೆ ಸಮಯ ವ್ಯರ್ಥ-ನೌಕಾಪಡೆಯ ಮಾಜಿ ಮುಖ್ಯಸ್ಥ title=
Photo: twitter

ನವದೆಹಲಿ:  ಚೀನಾ ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಮುಂದೆ ಸಾಗುತ್ತಿದೆ, ಭಾರತ ಮಂದಿರ ಮತ್ತು ಮಸೀದಿಗಳ ಬಗ್ಗೆ ಮಾತನಾಡುವ ಮೂಲಕ ತನ್ನನ್ನು ತಾನೇ ವಿಚಲಿತಗೊಳಿಸಿದರೆ ಅದರಿಂದ ಸಮಯ ವ್ಯರ್ಥ ಎಂದು ನೌಕಾಪಡೆಯ ಮಾಜಿ ಮುಖ್ಯಸ್ಥ ಅರುಣ್ ಪ್ರಕಾಶ್ ಹೇಳಿದ್ದಾರೆ. 

ಖಾಸಗಿ ವಾಹಿನಿಗೆ ಪ್ರತಿಕ್ರಿಯಿಸಿರುವ ಅವರು 'ಸ್ವತಂತ್ರ ರಾಷ್ಟ್ರವಾಗಿ ಸಂಪೂರ್ಣ ಅಸ್ತಿತ್ವಕ್ಕಾಗಿ ಭಾಷೆ ಧಾರ್ಮಿಕ, ಜಾತಿ ಇತ್ಯಾದಿ ವಿಭಜನೆಗಳನ್ನು ನೋಡಿದ್ದೇವೆ. ಈ ಸಂಘರ್ಷಗಳು ನಮ್ಮ ಸ್ವತಂತ್ರ ಅಸ್ತಿತ್ವದಾದ್ಯಂತ ಮುಂದುವರೆದಿದೆ ಎಂದು ತಿಳಿಸಿದರು. ಇನ್ನೊಂದೆಡೆ ಚೀನಾ ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್ ಮತ್ತು ಯಂತ್ರ ಕಲಿಕೆ ಕುರಿತಾಗಿ ಮಾತನಾಡುತ್ತಿದೆ. ಒಂದು ವೇಳೆ ನಾವು ದೇವಾಲಯಗಳು ಮತ್ತು ಮಸೀದಿಗಳ ಬಗ್ಗೆ ಮಾತನಾಡುತ್ತಾ ಹೋಗುತ್ತಿದ್ದರೆ, ನಂತರ ನಾವು ಸಮಯವನ್ನು ವ್ಯರ್ಥ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಜಮ್ಮು ಮತ್ತು ಕಾಶ್ಮೀರದ ಇತ್ತೀಚಿನ ಪರಿಸ್ಥಿತಿಗಳ ಕುರಿತು ಮಾತನಾಡಿದ ಅವರು, 'ಇತ್ತೀಚಿನ 370 ನೇ ವಿಧಿಯನ್ನು ರದ್ದುಪಡಿಸುವುದು ಮತ್ತು ಹಿಂದಿನ ಜಮ್ಮು ಮತ್ತು ಕಾಶ್ಮೀರ ಸ್ಥಿತಿಯ ಬದಲಾವಣೆಗಳು ಶಾಂತಿಯನ್ನು ತರುತ್ತವೆ. ಅಲ್ಲದೆ ಏಕೀಕರಣ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ' ಎಂದು ಆಶಿಸಿದರು.ಭಾರತ ಸರ್ಕಾರವು ಇತ್ತೀಚಿಗೆ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿ ಕಾಶ್ಮೀರವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.

 

Trending News