ಐಟಿ ದಾಳಿ: ₹50 ಕೋಟಿ ನೋಟು ಎಣಿಸಿ... ಎಣಿಸಿ ಸುಸ್ತಾದ ಯಂತ್ರಗಳು..!

IT raids in Odisha and Jharkhand: ಬುಧವಾರ ಬೆಳಗ್ಗೆಯಿಂದ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಐಟಿ ದಾಳಿ ನಡೆಯುತ್ತಿದೆ. ಒಡಿಶಾದ 4 ಮತ್ತು ಜಾರ್ಖಂಡ್‌ನ 2 ಪ್ರದೇಶಗಳಲ್ಲಿ ಶೋಧಕಾರ್ಯ ನಡೆಯುತ್ತಿದೆ. ಒಡಿಶಾದ ರೈದಿಹ್, ಸಂಬಲ್ಪುರ್ ಮತ್ತು ಬಲಂಗಿರ್ ಜಿಲ್ಲೆಗಳಲ್ಲಿ BDPL ನಿರ್ದೇಶಕರು ಮತ್ತು ಕಂಪನಿಗೆ ಸೇರಿದ ಸ್ಥಳಗಳಿವೆ.  ​

Written by - Puttaraj K Alur | Last Updated : Dec 7, 2023, 01:38 PM IST
  • ಒಡಿಶಾ ಮತ್ತು ಜಾರ್ಖಂಡ್‍ನಲ್ಲಿ ಐಟಿ ದಾಳಿ ವೇಳೆ ₹50 ಕೋಟಿ ಪತ್ತೆ
  • ಕಂತೆ ಕಂತೆ ನೋಟುಗಳನ್ನು ಎಣಿಸಿ… ಎಣಿಸಿ ಸುಸ್ತಾದ ಯಂತ್ರಗಳು
  • ಒಡಿಶಾ ಮತ್ತು ಜಾರ್ಖಂಡ್‌ನ ಬೌದ್ಧ್ ಡಿಸ್ಟಿಲರೀಸ್ ಸಂಸ್ಥೆ ಮೇಲೆ ಐಟಿ ದಾಳಿ
ಐಟಿ ದಾಳಿ: ₹50 ಕೋಟಿ ನೋಟು ಎಣಿಸಿ... ಎಣಿಸಿ ಸುಸ್ತಾದ ಯಂತ್ರಗಳು..! title=
ಐಟಿ ದಾಳಿ ವೇಳೆ ₹50 ಕೋಟಿ ಪತ್ತೆ!

ನವದೆಹಲಿ: ಐಟಿ ಇಲಾಖೆ ದಾಳಿ ವೇಳೆ ಸಿಗುವ ಕಂತೆ ಕಂತೆ ನೋಟುಗಳನ್ನು ಎಣಿಸಿ… ಎಣಿಸಿ ಅಧಿಕಾರಿಗಳು ಸುಸ್ತಾದ ಕಥೆ ಕೇಳಿರುತ್ತೀರಿ. ಆದರೆ ಒಡಿಶಾ ಮತ್ತು ಜಾರ್ಖಂಡ್‍ನಲ್ಲಿ ಐಟಿ ದಾಳಿ ವೇಳೆ ಸಿಕ್ಕ ₹50 ಕೋಟಿರೂ ಅಧಿಕ ಮೊತ್ತದ ನೋಟುಗಳನ್ನು ಎಣಿಸಿ… ಎಣಿಸಿ ಯಂತ್ರಗಳೇ ಸುಸ್ತಾಗಿವೆ.

ಹೌದು, ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಐಟಿ ದಾಳಿ ವೇಳೆ ಸಿಕ್ಕ ಹಣಗಳ ಕಂತೆ ಕಂಡು ಸ್ವತಃ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಬೆಚ್ಚಿಬಿದ್ದಾರೆ. ಒಡಿಶಾ ಮತ್ತು ಜಾರ್ಖಂಡ್‌ನ ಬೌದ್ಧ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌(BDPL) ಸಂಸ್ಥೆಗೆ ಸೇರಿದ ಸ್ಥಳಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬುಧವಾರದವರೆಗೂ ಕಂಪನಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಅಪಾರ ಪ್ರಮಾಣದ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Fact Check: ಸೋಷಿಯಲ್ ಮೀಡಿಯಾದಲ್ಲಿ ರಾಜಸ್ಥಾನ ಸಿಎಂ, ಡಿಸಿಎಂ ಹೆಸರಿನ ಪತ್ರ ವೈರಲ್, ಈ ಬಗ್ಗೆ ಬಿಜೆಪಿ ಹೇಳಿದ್ದೇನು?

ಸುದ್ದಿಸಂಸ್ಥೆ ANI ವರದಿಯ ಪ್ರಕಾರ, ಒಡಿಶಾದ ಬೋಲಂಗಿರ್ ಮತ್ತು ಸಂಬಲ್‌ಪುರ ಹಾಗೂ ಜಾರ್ಖಂಡ್‌ನ ರಾಂಚಿ, ಲೋಹರ್ದಗಾದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಬುಧವಾರದವರೆಗೆ ಬರೋಬ್ಬರಿ 50 ಕೋಟಿ ರೂ. ಮೊತ್ತದ ನೋಟುಗಳ ಎಣಿಕೆ ಪೂರ್ಣಗೊಂಡಿದೆ. ಇನ್ನೂ ಕಂತೆ ಕಂತೆ ನೋಟುಗಳನ್ನು ಎಣಿಕೆ ಮಾಡಬೇಕಿದೆ. ಆದರೆ ಎಣಿಕೆ ಯಂತ್ರಗಳು ಕೈಕೊಟ್ಟಿದ್ದರಿಂದ ಅಧಿಕಾರಿಗಳು ತಾತ್ಕಾಲಿಕವಾಗಿ ನೋಟುಗಳ ಎಣಿಕೆ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆಂದು ತಿಳಿದುಬಂದಿದೆ.  

ರಾಜ್ಯಸಭಾ ಸದಸ್ಯ ಧೀರಜ್ ಸಾಹು ಜೊತೆ BDPL ಸಂಸ್ಥೆಯು ವ್ಯಾವಹಾರಿಕ ಸಂಬಂಧ ಹೊಂದಿದೆ ಎಂದು ವರದಿಯಾಗಿದೆ. ಬುಧವಾರ ಬೆಳಗ್ಗೆಯಿಂದ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಐಟಿ ದಾಳಿ ನಡೆಯುತ್ತಿದೆ. ಒಡಿಶಾದ 4 ಮತ್ತು ಜಾರ್ಖಂಡ್‌ನ 2 ಪ್ರದೇಶಗಳಲ್ಲಿ ಶೋಧಕಾರ್ಯ ನಡೆಯುತ್ತಿದೆ. ಒಡಿಶಾದ ರೈದಿಹ್, ಸಂಬಲ್ಪುರ್ ಮತ್ತು ಬಲಂಗಿರ್ ಜಿಲ್ಲೆಗಳಲ್ಲಿ BDPL ನಿರ್ದೇಶಕರು ಮತ್ತು ಕಂಪನಿಗೆ ಸೇರಿದ ಸ್ಥಳಗಳಿವೆ.  

ಇದನ್ನೂ ಓದಿ: Daily GK Quiz: ಯಾವ ಮೀನು ಗಂಡಿನಿಂದ ಹೆಣ್ಣಾಗಿ ಬದಲಾಗುತ್ತದೆ..?

BDPL ಕಂಪನಿಯು ತನ್ನ ನಿಜವಾದ ವ್ಯವಹಾರ ಚಟುವಟಿಕೆಗಳನ್ನು ಮರೆಮಾಚುವ ಮೂಲಕ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆದಾಯ ತೆರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ. ಇನ್ನೂ ಕೋಟ್ಯಂತರ ರೂ. ಮೊತ್ತದ ನೋಟುಗಳ ಎಣಿಕೆ ಕಾರ್ಯ ಬಾಕಿ ಇದೆ. ಹೀಗಾಗಿ ಇಂದೂ ಸಹ ಐಟಿ ಇಲಾಖೆ ಅಧಿಕಾರಿಗಳು ನೋಟುಗಳ ಎಣಿಕೆ ಕಾರ್ಯ ನಡೆಸಲಿದ್ದಾರೆಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News