ಪಾಂಗೊಂಗ್‌ನ ಪ್ರಮುಖ ಶಿಖರಗಳ ಮೇಲೆ ಹಿಡಿತ ಸಾಧಿಸಿದ ಭಾರತೀಯ ಸೇನೆ

ಭಾರತೀಯ ಸೇನೆಯು ಲಡಾಖ್‌ನಲ್ಲಿ ಮತ್ತೊಮ್ಮೆ ತನ್ನ ಶಕ್ತಿಯನ್ನು ತೋರಿಸಿದೆ. ಪಾಂಗೊಂಗ್‌ನ ಪ್ರಮುಖ ಶಿಖರಗಳ ಮೇಲೆ ಭಾರತೀಯ ಸೇನೆಯು ಹಿಡಿತ ಸಾಧಿಸಿದೆ.

Last Updated : Sep 10, 2020, 02:17 PM IST
  • ಭಾರತೀಯ ಸೇನೆಯು ಲಡಾಖ್‌ನಲ್ಲಿ ಮತ್ತೊಮ್ಮೆ ತನ್ನ ಶಕ್ತಿಯನ್ನು ತೋರಿಸಿದೆ.
  • ಪಾಂಗೊಂಗ್‌ನ ಪ್ರಮುಖ ಶಿಖರಗಳ ಮೇಲೆ ಭಾರತೀಯ ಸೇನೆಯು ಹಿಡಿತ ಸಾಧಿಸಿದೆ.
  • ಫಿಂಗರ್ 4 ಪಾಂಗೊಂಗ್ ಸರೋವರದ ದಕ್ಷಿಣ ತೀರದಲ್ಲಿದೆ.
ಪಾಂಗೊಂಗ್‌ನ ಪ್ರಮುಖ ಶಿಖರಗಳ ಮೇಲೆ ಹಿಡಿತ ಸಾಧಿಸಿದ ಭಾರತೀಯ ಸೇನೆ title=

ನವದೆಹಲಿ: ಭಾರತೀಯ ಸೇನೆಯು ಲಡಾಖ್‌ನಲ್ಲಿ ಮತ್ತೊಮ್ಮೆ ತನ್ನ ಶಕ್ತಿಯನ್ನು ತೋರಿಸಿದೆ. ಪಾಂಗೊಂಗ್‌ನ ಪ್ರಮುಖ ಶಿಖರಗಳ ಮೇಲೆ ಭಾರತೀಯ ಸೇನೆಯು ಹಿಡಿತ ಸಾಧಿಸಿದೆ. ಭಾರತೀಯ ಸೇನೆಯು ಫಿಂಗರ್ 4ರ ಅನೇಕ ಪ್ರಮುಖ ಶಿಖರಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಭಾರತೀಯ ಸೈನಿಕರ ಬಲದ ಮುಂದೆ ಚೀನಾ (China) ಸೈನಿಕರು ಮಂಡಿಯೂರಿದ್ದಾರೆ. 

ಫಿಂಗರ್ 4 ಪಾಂಗೊಂಗ್ ಸರೋವರದ ದಕ್ಷಿಣ ತೀರದಲ್ಲಿದೆ. ಈಗ ಭಾರತೀಯ ಸೇನೆಯು (Indian Army) ಫಿಂಗರ್ 8 ರವರೆಗೆ ಬಲವಾದ ಸ್ಥಾನದಲ್ಲಿದೆ. ಆದಾಗ್ಯೂ ಚೀನಾದ ಸೈನ್ಯವು ಫಿಂಗರ್ 4 ನಲ್ಲಿ ಇನ್ನೂ ಇದೆ. ಆದರೆ ಭಾರತೀಯ ಸೇನೆಯು ಪ್ರಮುಖ ಶಿಖರಗಳನ್ನು ವಶಪಡಿಸಿಕೊಂಡಿದೆ. ಭಾರತೀಯ ಸೇನೆಯು ಈಗ ಚೀನಾದ ಸೈನ್ಯದ ಚಟುವಟಿಕೆಗಳನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು.

ಏತನ್ಮಧ್ಯೆ ಎಲ್‌ಎಸಿ (LAC) ಬಳಿ ನಿರ್ಮಿಸಲಾದ ಏರ್‌ಸ್ಟ್ರಿಪ್ಸ್ ಮತ್ತು ಹೆಲಿಪ್ಯಾಡ್‌ಗಳನ್ನು ವಾಯುಪಡೆಯು ಪರಿಶೀಲಿಸುತ್ತಿದೆ ಎಂಬ ಸುದ್ದಿ ಬರುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಬಳಸಲು ಇಲ್ಲಿ ತಯಾರಿ ನಡೆಸಲಾಗಿದೆ. ಭಾರತದ ಸ್ಥಳೀಯ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಅನ್ನು ಲೇಹ್‌ನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ದೌಲತ್ ಬೇಗ್ ಓಲ್ಡಿ, ಸಿಯಾಚಿನ್ ಮತ್ತು ಲೇಹ್ ನಲ್ಲಿ  ಇಳಿಯುವ ಮೂಲಕ ಇದನ್ನು ಪರೀಕ್ಷಿಸಲಾಯಿತು.

ಇವೆಲ್ಲ ಬೆಳವಣಿಗೆಗಳ ಮಧ್ಯೆ ಎಲ್‌ಎಸಿ ಮೇಲಿನ ಉದ್ವಿಗ್ನತೆ ಕುರಿತು ನಿನ್ನೆ ಭಾರತ ಮತ್ತು ಚೀನಾ ನಡುವೆ ನಾಲ್ಕು ಗಂಟೆಗಳ ಬ್ರಿಗೇಡ್ ಕಮಾಂಡರ್ ಮಟ್ಟದ ಸಂವಾದ ನಡೆದಿತ್ತು. ಮಾತುಕತೆಯ ನಂತರ ಎರಡೂ ಕಡೆಯವರು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.

ಇದಕ್ಕೂ ಮೊದಲು ಸೆಪ್ಟೆಂಬರ್ 8 ರಂದು ಚೀನಾದ ಸೈನಿಕರು ಪೆಂಗಾಂಗ್ ಸರೋವರದ ಪಶ್ಚಿಮ ಭಾಗದಲ್ಲಿ ಮೋಟಾರು ದೋಣಿಗಳ ಮೂಲಕ ಭಾರತದ ಗಡಿಗೆ ನುಸುಳಲು ಪ್ರಯತ್ನಿಸಿದರು, ಆದರೆ ಭಾರತೀಯ ಸೈನ್ಯವನ್ನು ನೋಡಿದ ನಂತರ ಹಿಂದಿರುಗಿದರು. ಇದಕ್ಕೆ ಒಂದು ದಿನ ಮೊದಲು, ಚೀನಾದ ಸೈನಿಕರು ಚುಶುಲ್ನ ಮುಖರ್ಪಾರಿ ಬೆಟ್ಟವನ್ನು ವಶಪಡಿಸಿಕೊಳ್ಳಲು ಬಂದಿದ್ದರು. ಆದರೆ ಅವರನ್ನು ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದರು.

Trending News