ಕಾಶ್ಮೀರದ ಕುರಿತು ಪಾಕಿಸ್ತಾನಿ ಡೀಲರ್‌ನ ವಿವಾದಾತ್ಮಕ ಪೋಸ್ಟ್‌... 'ಭಾರತ ನಮ್ಮ ಎರಡನೇ ಮನೆ' ಎಂದ Hyundai

Hyundai: ಪಾಕಿಸ್ತಾನದ ಹುಂಡೈ ಡೀಲರ್‌ನ ಟ್ವಿಟರ್ ಖಾತೆಯು ಕಾಶ್ಮೀರದ ಕುರಿತು ವಿವಾದಾತ್ಮಕ ಪೋಸ್ಟ್‌ ಹಂಚಿಕೊಂಡಿದೆ. 

Edited by - Zee Kannada News Desk | Last Updated : Feb 7, 2022, 12:46 PM IST
  • ಪಾಕಿಸ್ತಾನದಲ್ಲಿರುವ ಹುಂಡೈ ಡೀಲರ್‌ ಒಬ್ಬರು ಕಾಶ್ಮೀರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ
  • ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಹುಂಡೈ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ
  • ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಬಳಿಕ "ಭಾರತ ನಮ್ಮ ಎರಡನೇ ಮನೆ" ಎಂದು ಹುಂಡೈ ಇಂಡಿಯಾ ಹೇಳಿಕೆ ನೀಡಿದೆ
ಕಾಶ್ಮೀರದ ಕುರಿತು ಪಾಕಿಸ್ತಾನಿ ಡೀಲರ್‌ನ ವಿವಾದಾತ್ಮಕ ಪೋಸ್ಟ್‌... 'ಭಾರತ ನಮ್ಮ ಎರಡನೇ ಮನೆ' ಎಂದ Hyundai  title=
ಹುಂಡೈ

ನವದೆಹಲಿ: ಪಾಕಿಸ್ತಾನದ (Pakistan) ಡೀಲರ್‌ನಿಂದ ವಿವಾದಾತ್ಮಕ ಹೇಳಿಕೆಯ ನಂತರ, ಹುಂಡೈ ಇಂಡಿಯಾ (Hyundai) ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಹುಂಡೈ ಅನ್ನು ಬಹಿಷ್ಕರಿಸಲು ಮತ್ತು ಹುಂಡೈ ಕಾರುಗಳನ್ನು ಖರೀದಿಸುವುದನ್ನು ನಿಲ್ಲಿಸಲು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಸೃಷ್ಟಿಯಾಗಿತ್ತು. 

ಇದನ್ನೂ ಓದಿ:  "ಧರ್ಮ ಸಂಸತ್ ನಲ್ಲಿನ ಹೇಳಿಕೆಗಳು ಹಿಂದೂಗಳ ಮಾತಲ್ಲ, ಹಿಂದುತ್ವ ಸಂವಿಧಾನದ ಪೀಠಿಕೆಯ ಪ್ರತಿಬಿಂಬ"

ಪಾಕಿಸ್ತಾನದಲ್ಲಿ @hyundaiPakistanOfficial ಹ್ಯಾಂಡಲ್ ಹೊಂದಿರುವ ಹುಂಡೈನ ಡೀಲರ್ ಕಾಶ್ಮೀರದಲ್ಲಿ (Kashmir) ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಕಾಶ್ಮೀರ ಒಗ್ಗಟ್ಟಿನ ದಿನವನ್ನು ಬೆಂಬಲಿಸಲು ಈ ಟ್ವೀಟ್ ಮಾಡಲಾಗಿದೆ. ಈ ಬೆನ್ನಲ್ಲೇ #BoycottHyundai ಭಾರತದಲ್ಲಿ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದು, ದೇಶದಲ್ಲಿ ಕಂಪನಿಯ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸುವಂತೆ ಅನೇಕ ಜನರು ಕೇಳಿಕೊಂಡಿದ್ದಾರೆ.

 

 

ಈ ಎಲ್ಲ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಹುಂಡೈ ಮೋಟಾರ್ಸ್ ಇಂಡಿಯಾ ಭಾರತೀಯ ಮಾರುಕಟ್ಟೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುವ ಹೇಳಿಕೆಯನ್ನು ನೀಡಿದೆ. "ಹುಂಡೈ ಮೋಟಾರ್‌ ಇಂಡಿಯಾ 25 ವರ್ಷಗಳಿಗೂ ಹೆಚ್ಚು ಕಾಲ ಭಾರತೀಯ ಮಾರುಕಟ್ಟೆಗೆ ಬದ್ಧವಾಗಿದೆ ಮತ್ತು ರಾಷ್ಟ್ರೀಯತೆಯನ್ನು ಗೌರವಿಸುವ ನಮ್ಮ ಬಲವಾದ ನೀತಿಗಾಗಿ ನಾವು ದೃಢವಾಗಿ ನಿಲ್ಲುತ್ತೇವೆ" ಎಂದು ಅದು ಹೇಳಿದೆ. 

ಭಾರತವು ಹುಂಡೈ ಬ್ರ್ಯಾಂಡ್‌ಗೆ ಎರಡನೇ ನೆಲೆಯಾಗಿದೆ ಎಂದು ಪುನರುಚ್ಚರಿಸಿದ ಕಂಪನಿಯು, "ಭಾರತಕ್ಕೆ ನಮ್ಮ ಬದ್ಧತೆಯ ಭಾಗವಾಗಿ, ನಾವು ದೇಶದ ಮತ್ತು ಅದರ ನಾಗರಿಕರ ಸುಧಾರಣೆಗೆ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ" ಎಂದು ಹೇಳಿದೆ.

ಇದನ್ನೂ ಓದಿ:  'ಗ್ಲೋಬಲ್ ಲೀಡರ್ ಅಪ್ರೂವಲ್' ಪಟ್ಟಿಯಲ್ಲಿ ಮೋದಿಗೆ ಅಗ್ರಸ್ಥಾನ.. ಬೈಡನ್ ಸೇರಿ 11 ಜನರನ್ನು ಹಿಂದಿಕ್ಕಿದ ಪ್ರಧಾನಿ

ಮಾರುತಿ ಸುಜುಕಿ ಇಂಡಿಯಾದ (Maruti Suzuki) ನಂತರ ಹುಂಡೈ ಮೋಟಾರ್ ಇಂಡಿಯಾ ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಇದು ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಕ್ರೆಟಾ ಮತ್ತು ವೆನ್ಯೂ ಸೇರಿದಂತೆ 12 ಮಾದರಿಗಳನ್ನು ಮಾರಾಟ ಮಾಡುತ್ತಿದೆ. 

ಕಳೆದ ವರ್ಷ ಡಿಸೆಂಬರ್‌ನಲ್ಲಿ, ವಾಹನ ತಯಾರಕರು 2028 ರ ವೇಳೆಗೆ ಭಾರತದಲ್ಲಿ ಸುಮಾರು ಆರು ಎಲೆಕ್ಟ್ರಿಕ್ ವಾಹನಗಳನ್ನು ತರಲು ಸುಮಾರು 4,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಯೋಜನೆಯನ್ನು ಪ್ರಕಟಿಸಿದರು.

1967 ರಲ್ಲಿ ಸ್ಥಾಪಿತವಾದ ಹುಂಡೈ ಮೋಟಾರ್ ಕಂಪನಿಯು 200 ಕ್ಕೂ ಹೆಚ್ಚು ದೇಶಗಳಲ್ಲಿ 1,20,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News