ಜಿರಳೆ ಭಯಕ್ಕೆ 36 ತಿಂಗಳಲ್ಲಿ 18 ಮನೆ ಬದಲಾವಣೆ..! ಬೇಸತ್ತ ಪತಿ ಮಾಡಿಯೇ ಬಿಟ್ಟ ಈ ಕೆಲಸ

ಜಿರಳೆಗಳ ಭಯ  ವೈವಾಹಿಕ ಜೀವನಕ್ಕೇ ಮುಳುವಾಗಿ ಪರಿಣಮಿಸಿರುವ ಘಟನೆ ನಡೆದಿದೆ. ಇದೊಂದು ಥರ ವಿಚಿತ್ರ ಘಟನೆ. ಜಿರಳೆಗಳೆಂದರೆ ಭಯಂಕರವಾಗಿ ಭಯ ಬೀಳುವ ಪತ್ನಿ.

Written by - Ranjitha R K | Last Updated : Apr 13, 2021, 07:52 PM IST
  • ಜಿರಳೆಗಳ ಭಯ ವೈವಾಹಿಕ ಜೀವನಕ್ಕೇ ಮುಳುವಾಗಿದೆ
  • ಜಿರಳೆ ಭಯಕ್ಕೆ 18 ಮನೆಗಳನ್ನು ಬದಲಾಯಿಸಿದ ಕತೆ
  • ಕೊನೆಗೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತಿ
ಜಿರಳೆ ಭಯಕ್ಕೆ 36 ತಿಂಗಳಲ್ಲಿ 18 ಮನೆ ಬದಲಾವಣೆ..! ಬೇಸತ್ತ ಪತಿ ಮಾಡಿಯೇ ಬಿಟ್ಟ ಈ ಕೆಲಸ  title=
ಜಿರಳೆ ಭಯಕ್ಕೆ 18 ಮನೆಗಳನ್ನು ಬದಲಾಯಿಸಿದ ಕತೆ (file photo)

ಭೋಪಾಲ್ : ಜಿರಳೆಗಳ ಭಯ (cockroach fear) ವೈವಾಹಿಕ ಜೀವನಕ್ಕೇ ಮುಳುವಾಗಿ ಪರಿಣಮಿಸಿರುವ ಘಟನೆ ನಡೆದಿದೆ. ಇದೊಂದು ಥರ ವಿಚಿತ್ರ ಘಟನೆ. ಜಿರಳೆಗಳೆಂದರೆ ಭಯಂಕರವಾಗಿ ಭಯ ಬೀಳುವ ಪತ್ನಿ. ಪತ್ನಿಯ  ಭಯ ಹೋಗಲಾಡಿಸಲು ಪತಿ ಸರ್ವ ಪ್ರಯತ್ನಗಳನ್ನೂ ಮಾಡಿದ್ದಾನೆ. ಮನೋ ವೈದ್ಯರ ಬಳಿಗೂ ಪತ್ನಿಯನ್ನು ಕರೆದುಕೊಂಡು ಹೋಗಿದ್ದಾನೆ. ಆದರೂ ಪ್ರಯೋಜನ ಮಾತ್ರ ಶೂನ್ಯ. ಇನ್ನು ಮನೆ ಬದಲಾಯಿಸಿದರೆ ಸಮಸ್ಯೆ ಸರಿ ಹೋಗಬಹುದು ಎಂಬ ಕಾರಣಕ್ಕೆ ಬರೋಬರಿ 18 ಮನೆಯನ್ನು ಬದಲಾಯಿಸಿಯೂ ಆಗಿದೆ. ಇಷ್ಟೆಲ್ಲಾ ಪ್ರಯತ್ನ ಪಟ್ಟ ನಂತರ ಪತಿ ಒಂದು ನಿರ್ಧಾರಕ್ಕೆ ಬಂದಿದ್ದಾನೆ. 

2017 ರಲ್ಲಿ ಈ ಜೋಡಿಯ ವಿವಾಹವಾಗಿದೆ (Marraige). ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. 2018 ರಲ್ಲಿ, ತನ್ನ ಪತ್ನಿಗಿರುವ  ವಿಚಿತ್ರ ಭಯದ ಬಗ್ಗೆ ಪತಿ ಮತ್ತು ಮನೆಯವರಿಗೆ ತಿಳಿದಿದೆ. 2018 ರಲ್ಲಿ, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ (Wife) ಇದ್ದಕ್ಕಿದ್ದಂತೆ ಕಿರುಚಾಡಲು ಆರಂಭಿಸಿದ್ದಾಳೆ. ಏನು ಎಂದು ನೋಡಿದಾಗ ಅಡುಗೆ ಮನೆಯಲ್ಲಿ ಜಿರಳೆ (cockroach)ಇರುವುದಾಗಿ ಹೇಳಿದ್ದಾಳೆ. ಇದಾದ ನಂತರ ಇಡೀ ಮನೆಯನ್ನೇ ಶುಚಿಗೊಳಿಸಲಾಗಿದೆ. ಮನೆಯಲ್ಲಿ ಜಿರಳೆಗಳಿಲ್ಲಎಂದು ಎಷ್ಟೇ ಮನದಟ್ಟು ಮಾಡಿದರೂ ಪತ್ನಿ ಮಾತ್ರ ಒಪ್ಪಲು ಸಿದ್ದವಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ : Haridwar Kumbh Mela 2021: 'ಗಂಗೆಯ ಆಶೀರ್ವಾದದಿಂದ ಕೊರೊನಾ ಹರಡಲ್ಲ, ಕುಂಭಮೇಳದ ಹೋಲಿಕೆ ಮರ್ಕಜ್ ಜೊತೆಗೆ ಬೇಡ'

18 ಬಾರಿ ಮನೆ ಬದಲಾವಣೆ : 
ಜಿರಳೆಗಳ ಭಯದ ಕಾರಣದಿಂದಾಗಿ ಮನೆಯನ್ನೇ (House) ಬದಲಾಯಿಸಬೇಕಾಯಿತು. ಪತ್ನಿಯ ಜಿರಳೆ ಭಯದ ಕಾರಣದಿಂದಾಗಿ, 36 ತಿಂಗಳಲ್ಲಿ 18 ಮನೆಗಳನ್ನು ಬದಲಾಯಿಸಿದ್ದಾರೆ.  ಮನೆ ಬದಲಾಯಿಸಿದ್ದೇ ಬಂತು ಹೊರತು ಪತ್ನಿಯ ಉಂಟಾದ ಭಯ ಮಾತ್ರ ಕಡಿಮೆಯಾಗಲೇ ಇಲ್ಲ. ಹೊಸ ಮನೆಯಲ್ಲೂ ಪತ್ನಿಯದ್ದು ಅದೇ ಕತೆ. 

ವೈದ್ಯರನ್ನೂ ಸಂಪರ್ಕಿಸಿದ್ದಾಯಿತು : 
ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಲಹೆ ಮೇರೆಗೆ ಹೆಂಡತಿಯನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗಿದ್ದೂ ಆಯಿತು. ಆದರೆ ವೈದ್ಯರು ನೀಡಿದ ಔಷಧಿಯನ್ನು (Medicine) ಪತ್ನಿ ತೆಗೆದುಕೊಳ್ಳಲು ಸಿದ್ದವಿರಲಿಲ್ಲ. ಎಲ್ಲಾ ರೀತಿಯ ಕೌನ್ಸೆಲಿಂಗ್ ಕೂಡಾ ಮಾಡಲಾಯಿತು. ಆದರೆ ಯಾವುದೂ ಪ್ರಯೋಜನವಾಗಲಿಲ್ಲ ಎನ್ನುವುದು ಪತಿಯ ಮಾತು. ಕೊನೆಗೆ ಪತಿ ವಿಚ್ಛೇದನಕ್ಕಾಗಿ (Divorce) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ಇದನ್ನೂ ಓದಿ : CBSE Board Exams: ಬೋರ್ಡ್ ಪರೀಕ್ಷೆ ರದ್ದುಗೊಳಿಸುವಂತೆ ಕೇಂದ್ರಕ್ಕೆ ಕೇಜ್ರಿವಾಲ್ ಮನವಿ

ಆದರೆ ಹೆಂಡತಿ ಹೇಳುವುದೇ ಬೇರೆ :  
ಪತಿ ತನ್ನ ನಿಜವಾದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಬಯಸುವುದಿಲ್ಲ ಎನ್ನುವುದು ಪತ್ನಿಯ ವಾದ . ತನ್ನನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ  ತನ್ನನ್ನು ಹುಚ್ಚಿ ಎಂದು ಸಾಬೀತುಪಡಿಸಲು ಬಯಸುತ್ತಾನೆ ಎನ್ನುವುದು ಪತ್ನಿಯ ಮಾತು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News