ಗುಜರಾತ್ ವಿಧಾನಸಭೆ ಚುನಾವಣೆ : ಎಲ್ಇಟಿ ಟಾರ್ಗೆಟ್ ಪಟ್ಟಿಯಲ್ಲಿ ಇಬ್ಬರು ಬಿಜೆಪಿ ನಾಯಕರು

  

Last Updated : Nov 29, 2017, 03:36 PM IST
ಗುಜರಾತ್ ವಿಧಾನಸಭೆ ಚುನಾವಣೆ : ಎಲ್ಇಟಿ ಟಾರ್ಗೆಟ್ ಪಟ್ಟಿಯಲ್ಲಿ ಇಬ್ಬರು ಬಿಜೆಪಿ   ನಾಯಕರು title=

ನವದೆಹಲಿ :  ಮುಂದಿನ ತಿಂಗಳು ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಲಷ್ಕರ್-ಇ-ತೊಯ್ಬಾ ಇಬ್ಬರು ಹಿರಿಯ ಬಿಜೆಪಿ ನಾಯಕರನ್ನು ಗುರಿಯಾಗಿಸಿದೆ ಎಂದು ಗುಪ್ತಚರ ಸಂಸ್ಥೆ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಈಗಾಗಲೇ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದರೂ ಕೆಲವು ಗುಪ್ತಚರ ಮೂಲಗಳ ಪ್ರಕಾರ, ಉಗ್ರರು ಲಾಹೋರ್ನಲ್ಲಿ ಭಯೋತ್ಪಾದನಾ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದು, ಇಬ್ಬರು ಹಿರಿಯ ಬಿಜೆಪಿ ನಾಯಕರು ಹಿಟ್ ಲಿಸ್ಟ್ನಲ್ಲಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳಿಗೆ 'ನಿರ್ದಿಷ್ಟ ಮಾಹಿತಿ' ದೊರೆತಿರುವುದಾಗಿ ಮೂಲಗಳು ತಿಳಿಸಿವೆ. 

ಗುಜರಾತ್ನಲ್ಲಿ ಮತದಾನದ ಸಂದರ್ಭದಲ್ಲಿ ಅಥವಾ ಅದಕ್ಕೂ ಮುಂಚೆ ಗೊಂದಲದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಲಖ್ನೌನ ಸ್ಲೀಪರ್ ಸೆಲ್ನ ಸಹಾಯ ಪಡೆಯಲಾಗಿದೆ ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಅಲ್ಲದೆ, ಉಗ್ರರು ಮತ್ತವರ ಸಹಾಯಕರು ಪಾಕಿಸ್ತಾನದಲ್ಲಿರುವ ಎಲ್ಇಟಿ ನಿರ್ವಾಹಕರಿಂದ ನಿರಂತರ ಸೂಚನೆಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕುಖ್ಯಾತ ಪತ್ತೇದಾರಿ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ) ಗುಜರಾತ್ ಅನ್ನು ಟಾರ್ಗೆಟ್ ಮಾಡಿರುವ ಬಗ್ಗೆ ಕಳೆದ ತಿಂಗಳು ವರದಿಯಾಗಿತ್ತು. ಪಾಕಿಸ್ತಾನದ ಕೋಸ್ಟ್ ಗಾರ್ಡ್ ಅಧಿಕಾರಿಗಳು ಅಕ್ಟೋಬರ್ ಆರಂಭದಲ್ಲಿ ನಾಲ್ಕು ಭಾರತೀಯ ಮೀನುಗಾರರಿಂದ ವಿಶಿಷ್ಟ ಗುರುತಿನ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಆದರೀಗ 26/11-ರೀತಿಯ ದಾಳಿಗಳನ್ನು ನಡೆಸಲು ಐಎಸ್ಐ ತನ್ನ ಭಯೋತ್ಪಾದಕರನ್ನು ಬೆಂಬಲಿಸಲು ಅವುಗಳನ್ನು ದುರುಪಯೋಗ ಪಡಿಸಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಅಕ್ಟೋಬರ್ 25 ರಂದು ಗುಜರಾತ್ ಎಟಿಎಸ್ ಇಬ್ಬರು ಐಎಸ್ಐಎಸ್ ಉಗ್ರರನ್ನು ಸೂರತ್ನಲ್ಲಿ ಬಂಧಿಸಿತ್ತು.

ಗುಜರಾತ್ ವಿಧಾನಸಭೆ ಚುನಾವಣೆಯು ಡಿಸೆಂಬರ್ 9 ಮತ್ತು 14 ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ರಾಜ್ಯದಾದ್ಯಂತ ರ್ಯಾಲಿಗಳನ್ನು ನಡೆಸುತ್ತಿದ್ದಾರೆ.

Trending News