ವರ ಕೊವಿಡ್ ಪಾಸಿಟಿವ್ : ಆದರೂ ಗೈಡ್ ಲೈನ್ ಪಾಲನೆಯೊಂದಿಗೇ ನೆರವೇರಿತು ವಿವಾಹ

ರಿಯಾಸಿ ಜಿಲ್ಲೆಯ ಕೋಟ್ಲಾ ಗ್ರಾಮದ ನಿವಾಸಿ ಮನೀರ್ ಮದುವೆ ಬಂದಾರ್ ಪಂಚಾಯತ್ ನ ಪನಾಸಾ ಗ್ರಾಮದ ರಜೀಯಾ ಬೀವಿ ಅವರೊಂದಿಗೆ ನಿಶ್ಚಯವಾಗಿತ್ತು. ವರ ಮನೀರ್  ಶಿವ್ಖೋಡಿ ಟ್ರ್ಯಾಕ್ನಲ್ಲಿ ಕುದುರೆ ಸವಾರಿ ಮಾಡುತ್ತಾರೆ. ಕೆಲ ದಿನಗಳ ಹಿಂದೆ ಈ ಪ್ರದೆಶದಲ್ಲಿ ಎಲ್ಲಾ ಕುದುರೆ ಸವಾರರ ಕೊವಿಡ್ ಟೆಸ್ಟ್ ನಡೆಸಲಾಗಿತ್ತು. ಈ ವೇಳೆ ಮನೀರ್ ಕರೋನಾ ಸೋಂಕಿಗೆ ಒಳಪಟ್ಟಿರುವುದು ಸಾಬೀತಾಗಿದೆ. 

Written by - Ranjitha R K | Last Updated : Apr 11, 2021, 03:41 PM IST
  • ಮದುವೆಗೆ ಕೆಲವೇ ದಿನಗಳಿರುವಾಗ ಕರೋನಾ ಪಾಸಿಟಿವ್ ಆದ ವರ
  • ಮದುವೆ ಮುಂದೂಡುವ ಬಗ್ಗೆ ಯೋಚಿಸಿದ ಎರಡೂ ಕುಟುಂಬ
  • ಸಮಾಜದ ಹಿರಿಯರ ಸಲಹೆಯಂತೆ ಆನ್ ಲೈನ್ ವಿವಾಹ
ವರ ಕೊವಿಡ್ ಪಾಸಿಟಿವ್ : ಆದರೂ ಗೈಡ್ ಲೈನ್  ಪಾಲನೆಯೊಂದಿಗೇ ನೆರವೇರಿತು ವಿವಾಹ title=
ಮದುವೆಗೆ ಕೆಲವೇ ದಿನಗಳಿರುವಾಗ ಕರೋನಾ ಪಾಸಿಟಿವ್ ಆದ ವರ (file photo)

ಜಮ್ಮು: ಈಗ ಎಲ್ಲವೂ ಆನ್ ಲೈನ್ . ಕೋವಿಡ್ (COVID-19), ನಂತರವಂತೂ ಎಲ್ಲವೂ ಆನ್ ಲೈನ್ ಮಯವಾಗಿ ಬಿಟ್ಟಿದೆ. ಏನೇ ಖರೀದಿಯಿದ್ದರೂ ಆನ್ ಲೈನ್ (Online). ಸರ್ಕಾರಿ ಕೆಲಸವಿದ್ದರೂ ಆನ್ ಲೈನ್. ಆದರೆ ಮದುವೆ ಕೂಡಾ ಆನ್ ಲೈನ್ ನಡೆಯುವ ಬಗ್ಗೆ ಯಾರೂ ಯೋಚಿಸಿರಲಿಕ್ಕಿಲ್ಲ. ವಿಚಿತ್ರವಾದರೂ ಸತ್ಯ ಎನ್ನುವ ಹಾಗೆ ಆನ್ ಲೈನ್ ಮದುವೆ (Online marraige) ಕೂಡಾ ನಡೆದಿದೆ.   ಈ ಘಟನೆ ನಡೆದದ್ದು, ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ..

ಕರೋನಾ ಪಾಸಿಟಿವ್ ಆದ ವರ : 
ರಿಯಾಸಿ ಜಿಲ್ಲೆಯ ಕೋಟ್ಲಾ ಗ್ರಾಮದ ನಿವಾಸಿ ಮನೀರ್ ಮದುವೆ ಬಂದಾರ್ ಪಂಚಾಯತ್ ನ ಪನಾಸಾ ಗ್ರಾಮದ ರಜೀಯಾ ಬೀವಿ ಅವರೊಂದಿಗೆ ನಿಶ್ಚಯವಾಗಿತ್ತು. ವರ ಮನೀರ್  ಶಿವ್ಖೋಡಿ ಟ್ರ್ಯಾಕ್ನಲ್ಲಿ ಕುದುರೆ ಸವಾರಿ ಮಾಡುತ್ತಾರೆ. ಕೆಲ ದಿನಗಳ ಹಿಂದೆ ಈ ಪ್ರದೆಶದಲ್ಲಿ ಎಲ್ಲಾ ಕುದುರೆ ಸವಾರರ ಕೊವಿಡ್ ಟೆಸ್ಟ್ ನಡೆಸಲಾಗಿತ್ತು. ಈ ವೇಳೆ ಮನೀರ್ ಕರೋನಾ ಸೋಂಕಿಗೆ (Coronavirus) ಒಳಪಟ್ಟಿರುವುದು ಸಾಬೀತಾಗಿದೆ. ಇದಾದ ನಂತರ ಮನೀರ್ ಅವರನ್ನು ಐಸೋಲೇಶನ್ ನಲ್ಲಿ ಇರಿಸಲಾಗಿದೆ.   ಕರೋನಾ ಸೋಂಕು ಇರುವ ಕಾರಣ ವರ ಮದುವೆ ಮನೆಗೆ ಹೋಗುವುದಂತೂ ಸಾಧ್ಯವಿರಲಿಲ್ಲ. ಇನ್ನೇನೂ ಮದುವೆಯೇ ಕ್ಯಾನ್ಸಲ್ ಎನ್ನುವ ಮಾತುಗಳೂ ಕೂಡಾ ಕೇಳಿಬಂದಿತ್ತು. 

ಇದನ್ನೂ ಓದಿ : Lockdown: 15 ದಿನ ಲಾಕ್‌ಡೌನ್? ಸಿಎಂ ಇಂದು ಅಂತಿಮ ನಿರ್ಧಾರ!

ಮದುವೆ ಮುಂದೂಡುವ ಯೋಚನೆ : 
ವರ ಮನೀರ್ ಕರೋನಾ ಪಾಸಿಟಿವ್ (COVID-19) ಎಂದು ತಿಳಿದ ಕೂಡಲೇ ವಧು ವರ ಬ್ಬರ ಮನೆಯಲ್ಲೂ ಆತಂಕ ಮನೆ ಮಾಡಿತ್ತು. ಒಂದು ಹಂತದಲ್ಲಿ ಮದುವೆಯನ್ನು (Marriage)ಮುಂದೂಡುವ ಬಗ್ಗೆ ಇಬ್ಬರ ಮನೆಯಲ್ಲೂ ಚರ್ಚೆ ನಡೆಸಲಾಯಿತು. ಮದುವೆ ಮುಂದೂಡುವುದಾಗಿ ಇಬ್ಬರ ಮನೆಯವರು ನಿರ್ಧರಿಸಿದ್ದರು. ಆದರೆ ವಧುವಿನ ತಂದೆ ಸಮಾಜದ ಹಿರಿಯ ಜೊತೆ ಈ ಬಗ್ಗೆ ಚರ್ಚೆ ನಡೆಸಿದರು. ಮದುವೆ ಮುಂದೂಡುವ ನಿರ್ಧಾರದ ಬಗ್ಗೆಯೂ ತಿಳಿಸಿದ್ದಾರೆ. ಕೂಡಲೇ ಸಮಾಜದ ಹಿರಿಯರು ಯಾವುದೇ ಕಾರಣಕ್ಕೂ ಮದುವೆ ಮುಂದೂಡುವ ಅಗತ್ಯವಿಲ್ಲ. ನಿಗದಿತ ದಿನಾಂಕದಂದೇ ಮದುವೆ ನಡೆಯಲಿ ಎಂಬ ಸಲಹೆ ನೀಡಿದ್ದಾರೆ. ಅದು ಹೇಗೆ ಎಂದಾಗ ಅವರು ನೀಡಿದ ಸಲಹೆಯೇ ಆನ್ ಲೈನ್ ಮದುವೆ (Online Marriage). ಆದರೆ ಮದುವೆಯಲ್ಲಿ ಹುಡುಗನ ತಂದೆ ತಾಯಿ, ಸಹೋದರ ಸಹೋದರಿ ಸೇರಿದಂತೆ ಯಾರು ಹುಡುಗನ ಸಂಪರ್ಕದಲ್ಲಿದ್ದರೋ ಅವರ್ಯಾರೂ ಮದುವೆಯಲ್ಲಿ ಭಾಗವಹಿಸದಂತೆ ನಿರ್ಧಾರ ಮಾಡಲಾಯಿತು. 

ವರನಿಲ್ಲದೆ ಬಂತು ದಿಬ್ಬಣ : 
ದಿಬ್ಬಣ ಯಿಲ್ಲದಿದ್ದರೆ ಮದುವೆ ಅಪೂರ್ಣ ಎಂಬ ಭಾವನೆ ಬರುತ್ತದೆ. ಆದರೆ ಇಲ್ಲಿ ವರ ಮತ್ತು ವರನ ಮನೆಯವರು ಇಲ್ಲದೆ ದಿಬ್ಬಣ ಬರುವುದಾದರೂ ಹೇಗೆ ಎಂಬ ಪ್ರಶ್ನೆಯೂ ಎದುರಾಗಿತ್ತು.  ಆ ಸಂದರ್ಭದಲ್ಲಿ ವರನ ಗ್ರಾಮಸ್ಥರಲ್ಲಿ 40 ಜನರನ್ನು ದಿಬ್ಬಣದಲ್ಲಿ ಕರೆ ತರಲು ನಿರ್ಧರಿಸಲಾಯಿತು. ಹೀಗಾಗಿ ವರನಿಲ್ಲದೆ ಗ್ರಾಮಸ್ಥರೇ ವಧುವಿನ ಮನೆಗೆ ದಿಬ್ಬಣ ಕರೆತಂದರು. ದಿಬ್ಬಣಕ್ಕೆ ವಧುವಿನ ಮನೆಯವರಿಂದ ಅದ್ದೂರಿ ಸ್ವಾಗತ ಕೂಡಾ ಸಿಕ್ಕಿತು. 

ಇದನ್ನೂ ಓದಿ : ಇಂದಿನಿಂದ ಟೀಕಾ ಉತ್ಸವ ; ಅಧಿಕ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಪ್ರಧಾನಿ ಮನವಿ

ಆನ್‌ಲೈನ್‌  ಮೂಲಕ ನಡೆಯಿತು ವಿವಾಹ : 
ಇನ್ನು ನಿಕಾಹ್ (Nikah) ವೇಳೆ, ಮನೆಯಲ್ಲಿ ಐಸೋಲೇಶನ್ ನಲ್ಲಿದ್ದ ವರ ಮನೀರ್ ಗೆ ವಿಡಿಯೋ ಕರೆ ಮಾಡಲಾಯಿತು. ವಿಡಿಯೋ ಕಾಲ್ (Video Call) ಮೂಲಕ ವರನನ್ನು ಕಾನ್ ಟೆಕ್ಟ್ ಮಾಡಿ ನಿಕಾಹ್ ಓದಲಾಯಿತು.  ಹೀಗೆ ಮದುವೆ ಶಾಸ್ತ್ರಗಳು ಆನ್ ಲೈನ್ ನಲ್ಲಿ ನೆರವೇರಿತು. ವರನ ಮುಂದಿನ ಕೋವಿಡ್ ಪರೀಕ್ಷೆ (COVID Test)ಮುಗಿದು ನೆಗೆಟಿವ್ ವರದಿ ಬರುವವರೆಗೂ ವಧುವನ್ನು ತಾಯಿ ಮನೆಯಲ್ಲಿಯೇ ಇರಿಸಿಕೊಳ್ಳಲು ನಿರ್ಧರಿಸಲಾಯಿತು. ಈ ವಿಶೇಷ ವಿವಾಹದ ಬಗ್ಗೆ ಈಗ ಗ್ರಾಮದಲ್ಲಿ ಚರ್ಚೆ ನಡೆಯುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News