ನವದೆಹಲಿ: ದೇಶದ ನಾಗರಿಕರಿಗೆ ಯುಐಡಿಎಐ ನೀಡುವ 12-ಅಂಕಿಯ ಸಂಖ್ಯೆಯನ್ನು ಆಧಾರ್ ಸಂಖ್ಯೆ ಎಂದು ಕರೆಯಲಾಗುತ್ತದೆ. ಆಧಾರ್ ಕಾರ್ಡ್‌ಗಳನ್ನು ಮುಖ್ಯವಾಗಿ ಬ್ಯಾಂಕುಗಳು, ಆದಾಯ ತೆರಿಗೆ ಗುರುತಿಸುವಿಕೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ. ಇದು ವಿಳಾಸ ಮತ್ತು ಐಡಿ ಪ್ರೂಫ್ ಆಗಿ ಸಹ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಪ್ಯಾನ್ ಕಾರ್ಡ್ ಒಂದು ಅನನ್ಯ 10-ಅಂಕಿಯ ಗುರುತಿನ ಸಂಖ್ಯೆಯಾಗಿದೆ.
ಇದನ್ನು ಓದಿ- ಇನ್ನೂ PAN ಮತ್ತು Aadhaar Card ಲಿಂಕ್ ಮಾಡಿಲ್ಲವೇ? ಇಲ್ಲಿದೆ ನೆಮ್ಮದಿಯ ಸುದ್ದಿ
ಗುರುತು ಮತ್ತು ವಾಸಸ್ಥಳದ ಪುರಾವೆಯಾಗಿ ಆಧಾರ್ ಕಾರ್ಡ್ ಅನ್ನು ಬಳಸಬಹುದಾದರೂ, ಎಲ್ಲಾ ಹಣಕಾಸು ವಹಿವಾಟುಗಳ ಬಗ್ಗೆ ನಿಗಾ ಇಡಲು ಪ್ಯಾನ್ ಕಾರ್ಡ್ ಆದಾಯ ತೆರಿಗೆ ಪ್ರಾಧಿಕಾರಕ್ಕೆ ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇವೆರಡೂ ದಾಖಲೆಗಳು ನಮಗೆ ಬಹಳ ಮುಖ್ಯವಾದ ದಾಖಲೆಗಳಾಗಿವೆ. ಸಾಮಾನ್ಯವಾಗಿ ಈ ಎರಡೂ ದಾಖಲೆಗಳಲ್ಲಿ ಹೆಸರು ತಪ್ಪಾಗಿದ್ದರೆ, ಜನರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಪ್ಪಾಗಿರುವ ನಿಮ್ಮ ಹೆಸರನ್ನು ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ನಲ್ಲಿ ಸರಿಪಡಿಸಬಹುದು.
ಇದನ್ನು ಓದಿ- ನಿಮ್ಮ ಬಳಿ ಇರುವ Pan Card ಅಸಲಿಯೇ? ಅದನ್ನು ಹೀಗಿ ಪರಿಶೀಲಿಸಿ
ಆಧಾರ್ ಕಾರ್ಡ್ ನಲ್ಲಿ ನೀವು ನಿಮ್ಮ ಹೆಸರನ್ನು ಹೀಗೆ ಸರಿಪಡಿಸಿ
ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಸರಿಪಡಿಸಲು, ನೀವು ಆಧಾರ್ ದಾಖಲಾತಿ ಕೇಂದ್ರಕ್ಕೆ ಹೋಗಿ ಆಧಾರ್ ತಿದ್ದುಪಡಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅಲ್ಲಿ, ಸರಿಯಾದ ಮಾಹಿತಿಯನ್ನು ಫಾರ್ಮ್‌ನಲ್ಲಿ ಭರ್ತಿ ಮಾಡುವುದರ ಜೊತೆಗೆ, ನಿಮ್ಮ ಹೆಸರು ಸರಿಯಾಗಿರುವ ಸೂಕ್ತ ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ. ಇದರ ನಂತರ, ಮಾಹಿತಿಯನ್ನು ನವೀಕರಿಸಲು ನೀವು ₹ 25 ರಿಂದ ₹ 30 ಪಾವತಿಸಬೇಕು. ಈ ಪ್ರಕ್ರಿಯೆಯನ್ನು ಅನುಸರಿಸಿದ ನಂತರ ನಿಮ್ಮ ಹೆಸರನ್ನು ಸರಿಪಡಿಸಲಾಗುತ್ತದೆ.
ಇದನ್ನು ಓದಿ- ಉಚಿತವಾಗಿ ತಯಾರಿಸಿ ನಿಮ್ಮ PAN Card! ಕೇವಲ ಒಂದು ಕ್ಲಿಕ್ ಹಾಗೂ 10 ನಿಮಿಷ ಸಾಕು
ಪ್ಯಾನ್ ಕಾರ್ಡ್ ನಲ್ಲಿನ ತಪ್ಪು ಹೆಸರನ್ನು ಹೇಗೆ ಸರಿಪಡಿಸಬೇಕು?
ಪ್ಯಾನ್ ಕಾರ್ಡ್ (PAN Card) ಹೆಸರಿನಲ್ಲಿ ತಪ್ಪು ಇದ್ದರೆ, ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ವೆಬ್‌ಸೈಟ್‌ಗೆ ಭೇಟಿ ನೀಡಿ. 'Correction in Existing PAN' ಆಯ್ಕೆಯನ್ನು ಆಯ್ದುಕೊಳ್ಳಿ. ಇದರ ನಂತರ, ಕ್ಯಾಟೆಗರಿ ಆಯ್ಕೆಮಾಡಿ. ನಿಮ್ಮ ಹೆಸರನ್ನು ಸರಿಯಾಗಿ ನಮೂದಾಗಿರುವ ಒಂದು ದಾಖಲೆಯನ್ನು ಕೂಡ ನೀವು ಅಟ್ಯಾಚ್ ಮಾಡಬೇಕು. ಇದನ್ನು ಮಾಡಿದ ನಂತರ, ಸಲ್ಲಿಸು ಆಯ್ಕೆಯನ್ನು ಕ್ಲಿಕ್ ಮಾಡಿ. ಈ ಎಲ್ಲದಕ್ಕೂ ನಿಮಗೆ ಸ್ವಲ್ಪ ಶುಲ್ಕ ವಿಧಿಸಲಾಗುತ್ತದೆ. ನಂತರ ನವೀಕರಿಸಿದ ಪ್ಯಾನ್ ಕಾರ್ಡ್ ಅನ್ನು ಅರ್ಜಿಯ ದಿನದಿಂದ 45 ದಿನಗಳ ನಂತರ ನೋಂದಾಯಿತ ವಿಳಾಸಕ್ಕೆ ಕಳುಹಿಸಲಾಗುತ್ತದೆ.