ಆಧಾರ್ ಕಾರ್ಡಿನಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ನೀವು ಹೆಚ್ಚು ಶ್ರಮಿಸಬೇಕಿಲ್ಲ. ದೇಶಾದ್ಯಂತ ಯಾವ ಮೂಲೆಯಲ್ಲೇ ಆದರು ಸುಲಭವಾಗಿ ಮಾಡಬಹುದು. ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಹಲವು ಮಾರ್ಗಗಳಿದ್ದರೂ, ನೀವು ಬಯಸಿದರೆ, ಈಗ ನೀವು ನಿಮ್ಮ ಪೋಸ್ಟ್ಮ್ಯಾನ್ (Postman) ಮೂಲಕವೂ ಈ ಕೆಲಸವನ್ನು ಮಾಡಬಹುದು. ಅಂಚೆ ಇಲಾಖೆಯು ನಾಗರಿಕರಿಗೆ ಹೆಚ್ಚಿನ ಅನುಕೂಲವನ್ನು ನೀಡಿದೆ.
ಸಾಮಾನ್ಯವಾಗಿ ಆಧಾರ್ ಕಾರ್ಡ್ ಅನ್ನು ಗುರುತಿನ ಮತ್ತು ವಾಸಸ್ಥಳದ ಪುರಾವೆಯಾಗಿ ಬಳಸಲಾಗುತ್ತದೆ. ಜೊತೆಗೆ, ಆದಾಯ ತೆರಿಗೆ ಪ್ರಾಧಿಕಾರವು ಪ್ಯಾನ್ ಕಾರ್ಡ್ನೊಂದಿಗೆ ಎಲ್ಲಾ ಹಣಕಾಸು ವಹಿವಾಟುಗಳನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.