OMG! ಕುಡಿದ ಮತ್ತಿನಲ್ಲಿ ಓರ್ವ ಯುವಕ ಮತ್ತೊರ್ವ ಯುವಕನ ಜೊತೆಗೆ ವಿವಾಹವಾದ... ಮುಂದೇನಾಯ್ತು ತಿಳಿಯಲು ಸುದ್ದಿ ಓದಿ

Viral News: ಮದುವೆಯಾದ ಮಾರನೇ ದಿನ ಯುವಕ ಚಂದೂರು ಗ್ರಾಮದ ಮತ್ತೊರ್ವ ಯುವಕನ ಮನೆಗೆ ಹೋಗಿ ನಾನು ನಿಮ್ಮ ಮಗನ ಜೊತೆಗೆ ವಿವಾಹ ಮಾಡಿಕೊಂಡಿದ್ದೇನೆ ಎಂದು ಹೇಳಿ ಅವರ ಮನೆಯಲ್ಲಿಯೇ ವಾಸಿಸಲು ಆರಂಭಿಸಿದ್ದಾನೆ.   

Written by - Nitin Tabib | Last Updated : Apr 5, 2023, 08:38 PM IST
  • ಈ ಘಟನೆ ಏಪ್ರಿಲ್ ತಿಂಗಳಿನಲ್ಲಿ ಸಂಭವಿಸಿದ್ದು,
  • ಏಪ್ರಿಲ್ 1ನೇ ತಾರೀಖಿನ ಘಟನೆ ಇದಾಗಿದೆ.
  • ಜಿಲ್ಲೆಯ ಕೋಲ್ಚರಂ ಪ್ರದೇಶದ ದಾಂಪಲಕುಂಟಾದಲ್ಲಿರುವ ಮದ್ಯದಂಗಡಿಯಲ್ಲಿ ಇಬ್ಬರೂ ಯುವಕರು ಪರಸ್ಪರ ಭೇಟಿಯಾಗಿದ್ದಾರೆ.
OMG! ಕುಡಿದ ಮತ್ತಿನಲ್ಲಿ ಓರ್ವ ಯುವಕ ಮತ್ತೊರ್ವ ಯುವಕನ ಜೊತೆಗೆ ವಿವಾಹವಾದ... ಮುಂದೇನಾಯ್ತು ತಿಳಿಯಲು ಸುದ್ದಿ ಓದಿ title=
ಕುಡಿದ ಅಮಲಿನಲ್ಲಿ ಪರಸ್ಪರ ವಿವಾಹವಾದ ಯುವಕರು

Trending News: ತೆಲಂಗಾಣದ ಮೇಡಕ್ ಜಿಲ್ಲೆಯಿಂದ ಒಂದು ವಿಚಿತ್ರ ಸುದ್ದಿ ಮುನ್ನೆಲೆಗೆ ಬಂದಿದೆ. ಅಲ್ಲಿರುವ ಇಬ್ಬರು ಯುವಕರು ಮೊದಲು ವಿಪರೀತ ಸಾರಾಯಿ ಸೇವನೆ ಮಾಡಿ ಬಳಿಕ ಕುಡಿದ ಮತ್ತಿನಲ್ಲಿಯೇ ಪರಸ್ಪರ ವಿವಾಹ ಮಾಡಿಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಇಬ್ಬರ ಕುಟುಂಬ ಸದಸ್ಯರು ಬೆಚ್ಚಿಬಿದ್ದಿದ್ದಾರೆ. 

ಈ ಘಟನೆ ಏಪ್ರಿಲ್ ತಿಂಗಳಿನಲ್ಲಿ ಸಂಭವಿಸಿದ್ದು, ಏಪ್ರಿಲ್ 1ನೇ ತಾರೀಖಿನ ಘಟನೆ ಇದಾಗಿದೆ. ಜಿಲ್ಲೆಯ ಕೋಲ್ಚರಂ ಪ್ರದೇಶದ ದಾಂಪಲಕುಂಟಾದಲ್ಲಿರುವ ಮದ್ಯದಂಗಡಿಯಲ್ಲಿ ಇಬ್ಬರೂ ಯುವಕರು ಪರಸ್ಪರ ಭೇಟಿಯಾಗಿದ್ದಾರೆ. ಇಲ್ಲಿ ಇಬ್ಬರೂ ಕಂಠಪೂರ್ತಿ ಕುಡಿದು ಅಮಲಿನಲ್ಲಿ ಮದುವೆಯಾಗಿದ್ದಾರೆ. ವರದಿಗಳ ಪ್ರಕಾರ, ಈ ಯುವಕರಲ್ಲಿ ಒಬ್ಬ ಯುವಕ ಸಂಗಾರೆಡ್ಡಿ ಜಿಲ್ಲೆಯ ಜೋಗಿಪೇಟೆಯವನಾಗಿದ್ದರೆ, ಮತ್ತೊಬ್ಬ ಯುವಕ ಚಿಲ್ಪ್‌ಚೆಡ್‌ನ ಚಂದೂರ್‌ನವನಾಗಿದ್ದಾನೆ. ಅವರ ವಯಸ್ಸು 21 ಮತ್ತು 22 ವರ್ಷಗಳು.

ಇದನ್ನೂ ಓದಿ-Trending Video: ಗಾಳಿಯಲ್ಲಿ ನೇತಾಡಿ ಖತರ್ನಾಕ್ ರೀತಿಯಲ್ಲಿ ಕಾಗೆಯ ಬೇಟೆಯಾಡಿದ ಹಾವು.. ವಿಡಿಯೋ ನೋಡಿ!

ಮದುವೆಯಾದ ಮರುದಿನ ಯುವಕ ಚಂದೂರು ಗ್ರಾಮದ ಯುವಕನ ಮನೆಗೆ ಹೋಗಿ ನಿಮ್ಮ ಮಗನ ಜೊತೆಗೆ ನನ್ನ ಮದುವೆಯಾಗಿದೆ ಹೀಗಾಗಿ ಮನೆಗೆ ಬಂದಿರುವುದಾಗಿ ಹೇಳಿದ್ದಾನೆ. ಇದನ್ನು ಕೇಳಿ ಬೆಚ್ಚಿಬಿದ್ದ ಚಂದೂರು ನಿವಾಸಿಯ ಪೋಷಕರು ಅಲ್ಲಿಂದ ತೆರಳುವಂತೆ ಹೇಳಿದರೂ ಕೇಳದ ಯುವಕ ಒಂದು ಲಕ್ಷ ರೂಪಾಯಿ ಕೊಟ್ಟರೆ ಹೋಗುತ್ತೇನೆ ಎಂದು ಹೇಳಿದ್ದಾನೆ. ಚಂದೂರು ನಿವಾಸಿ ಪೋಷಕರು ತನ್ನ ಮಾತು ಕೇಳದಿದ್ದಾಗ ಯುವಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಇದನ್ನೂ ಓದಿ-Viral Video: 'ನಾವು ಸಲಿಂಗಕಾಮಿಗಳನ್ನು ತಯಾರಿಸುವ ಉದ್ಯಮ ಸ್ಥಾಪಿಸಿದ್ದೇವೆ' ಮದರಸಾಗಳ ಕುರಿತು ಪಾಕ್ ಮೌಲ್ವಿ ಹೇಳಿಕೆ ಭಾರಿ ವೈರಲ್!

ಇದಾದ ಬಳಿಕ ವಿಷಯ ಜಟಿಲವಾದುದನ್ನು ಕಂಡು ಪೊಲೀಸರು ಹಾಗೂ ಗ್ರಾಮದ ಹಿರಿಯರು ಇಬ್ಬರೂ ಯುವಕರ ಕುಟುಂಬಸ್ಥರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಕೊನೆಗೆ ಚಂಡೂರು ನಿವಾಸಿ ಕುಟುಂಬದವರು ಜೋಗಿಪೇಟೆಯ ಯುವಕನಿಗೆ 10 ಸಾವಿರ ರೂ.ಗಳನ್ನು ನೀಡಿದ್ದು, ಬಳಿಕ ಯುವಕ ದೂರು ಹಿಂಪಡೆದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News