ʼಭಾನುವಾರ ಬಾರ್‌ ಬಂದ್‌ʼ : ವಿಶೇಷ ಅಧಿಕಾರ ಬಳಸಿ ʼಡ್ರೈ ಡೇʼ ಘೋಷಿಸಿದ ರಾಜ್ಯಪಾಲರು..!

ಛಠ್ ಪೂಜೆ ಪ್ರಯುಕ್ತ ರಾಜ್ಯಪಾಲ ಎಲ್‌ಜಿ ವಿಕೆ ಸಕ್ಸೇನಾ ಅವರು ತಮ್ಮ ವಿಶೇಷ ಅಧಿಕಾರವನ್ನು ಬಳಸಿಕೊಂಡು ಅಂದಿನ ದಿನವನ್ನು ʼಡ್ರೈ ಡೇʼ ಎಂದು ಘೋಷಿಸಿದ್ದಾರೆ. ಅಲ್ಲದೆ, ಯಮುನಾ ನದಿಯಲ್ಲಿ ವಿಷಕಾರಿ ನೊರೆ ಸಮಸ್ಯೆ ಕುರಿತು ಶೀಘ್ರವೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಪತ್ರ ಬರೆದಿದ್ದಾರೆ.

Written by - Krishna N K | Last Updated : Oct 28, 2022, 07:56 PM IST
  • ಛಠ್ ಪೂಜೆ ಪ್ರಯುಕ್ತ ದೆಹಲಿಯಲ್ಲಿ ಮದ್ಯ ಬಂದ್‌
  • ವಿಶೇಷ ಅಧಿಕಾರಿ ಬಳಸಿ ಡ್ರೈ ಡೇ ಘೋಷಿಸಿದ ರಾಜ್ಯಪಾಲ ಎಲ್‌ಜಿ ವಿಕೆ ಸಕ್ಸೇನಾ
  • ಯಮುನಾ ನದಿ ಜಲ ಮಾಲಿನ್ಯ ಕುರಿತು ಸಿಎಂ ಕೇಜ್ರಿವಾಲಾಗೆ ಎಲ್‌ಜಿ ಪತ್ರ
ʼಭಾನುವಾರ ಬಾರ್‌ ಬಂದ್‌ʼ : ವಿಶೇಷ ಅಧಿಕಾರ ಬಳಸಿ ʼಡ್ರೈ ಡೇʼ ಘೋಷಿಸಿದ ರಾಜ್ಯಪಾಲರು..! title=

ದೆಹಲಿ : ಛಠ್ ಪೂಜೆ ಪ್ರಯುಕ್ತ ರಾಜ್ಯಪಾಲ ಎಲ್‌ಜಿ ವಿಕೆ ಸಕ್ಸೇನಾ ಅವರು ತಮ್ಮ ವಿಶೇಷ ಅಧಿಕಾರವನ್ನು ಬಳಸಿಕೊಂಡು ಅಂದಿನ ದಿನವನ್ನು ʼಡ್ರೈ ಡೇʼ ಎಂದು ಘೋಷಿಸಿದ್ದಾರೆ. ಅಲ್ಲದೆ, ಯಮುನಾ ನದಿಯಲ್ಲಿ ವಿಷಕಾರಿ ನೊರೆ ಸಮಸ್ಯೆ ಕುರಿತು ಶೀಘ್ರವೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಪತ್ರ ಬರೆದಿದ್ದಾರೆ.

ಯಮುನಾ ನದಿಯಲ್ಲಿ ಉಂಟಾದ ನೊರೆ ಕುರಿತು ಶುಕ್ರವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಎಲ್‌ಜಿ ಅವರು ಬರೆದ ಪತ್ರದಲ್ಲಿ, ಯಮುನಾ ನದಿಯ ಕೆಲವು ಸ್ಥಳಗಳಲ್ಲಿ ಜಲಮಾಲಿನ್ಯ ಮತ್ತು ನೊರೆ ಉಂಟಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯಮುನಾ ನದಿಯಲ್ಲಿ ಸೃಷ್ಟಿಯಾಗಿರುವ ನೊರೆ ಮತ್ತು ಜಲಮಾಲಿನ್ಯ ತೀವ್ರ ಕಳವಳಕಾರಿಯಾಗಿದೆ. ಇದನ್ನು ಗಮನಿಸದೆ ಬಿಟ್ಟರೆ ಭಕ್ತರಿಗೆ ಹಾನಿಯಾಗಬಹುದು. ಅದರ ಪ್ರಕಾರ, ತುರ್ತಾಗಿ ಸರಿಪಡಿಸಬೇಕಾಗಿದೆ ಎಂದು ಸಿಎಂಗೆ ಪತ್ರದ ಮೂಲಕ ಸೂಚಿಸಿದ್ದಾರೆ.

ಇದನ್ನೂ ಓದಿ: Viral Video: ಕೆಲವೇ ಸೆಕೆಂಡ್ ಗಳಲ್ಲಿ ಸಂಪೂರ್ಣ ಜಿಂಕೆಯನ್ನು ಗಬಗಬನೇ ನುಂಗಿ ಹಾಕಿದ ದೈತ್ಯ ಹೆಬ್ಬಾವು

ಇನ್ನು ಹಬ್ಬದ ಪ್ರಯುಕ್ತ ನಗರದಲ್ಲಿ ಶಾಂತಿ ಕಾಪಾಡಲು ಎಲ್ಲಾ ಮದ್ಯದ ಅಂಗಡಿಗಳು ಹಬ್ಬದಂದು ಮುಚ್ಚಿಸಲು ಎಲ್‌ಜಿ ಭಾನುವಾರ ಡ್ರೈ ಡೇ ಎಂದು ಘೋಷಿಸಿದ್ದಾರೆ. ದೆಹಲಿ ಅಬಕಾರಿ ಕಾಯಿದೆಯ ಸೆಕ್ಷನ್ 2 (35) ರ ಪ್ರಕಾರ ದೆಹಲಿ ಸರ್ಕಾರದ ಅಧಿಕಾರದಲ್ಲಿರುವ ಎಲ್‌ಜಿ ಈ ನಿರ್ಧಾರ ಕೈಗೊಂಡಿದ್ದಾಗಿ ರಾಜ್ಯಪಾಲರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

 

Trending News