Coronavirus update : ಮತ್ತೆ ಹೆಚ್ಚಾಯಿತು ಕರೋನಾ ಸೋಂಕಿತರ ಸಂಖ್ಯೆ, ನಿರ್ಬಂಧ ತೆಗೆದುಹಾಕಿದ್ದೇ ಮುಳುವಾಯಿತಾ?

ಕಳೆದ 24 ಗಂಟೆಗಳಲ್ಲಿ ಇಲ್ಲಿ 126 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಏಪ್ರಿಲ್ 4 ರಿಂದ ಸೋಂಕಿನ ಪ್ರಮಾಣದಲ್ಲಿ ನಿರಂತರ ಏರಿಕೆ ಕಂಡುಬಂದಿದೆ. 

Written by - Ranjitha R K | Last Updated : Apr 7, 2022, 04:47 PM IST
  • ದೆಹಲಿಯಲ್ಲಿ ಕರೋನಾ ಪ್ರಕರಣಗಳು ಹೆಚ್ಚುತ್ತಿವೆ
  • ಸೋಂಕಿನ ಪ್ರಮಾಣವೂ ಹೆಚ್ಚಿದೆ
  • ಚರ್ಚೆಯಾಗುತ್ತಿದೆ ಕರೋನಾ XE ರೂಪಾಂತರದ ಬಗ್ಗೆ
Coronavirus update : ಮತ್ತೆ ಹೆಚ್ಚಾಯಿತು ಕರೋನಾ ಸೋಂಕಿತರ ಸಂಖ್ಯೆ, ನಿರ್ಬಂಧ ತೆಗೆದುಹಾಕಿದ್ದೇ ಮುಳುವಾಯಿತಾ?  title=
Coronavirus latest update (File photo)

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ (Coronavirus latest update). ದೆಹಲಿಯಲ್ಲಿ ಕೊರೊನಾ ಪಾಸಿಟಿವ್‌ ದರದಲ್ಲಿ ನಿರಂತರ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಇಲ್ಲಿ 126 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಏಪ್ರಿಲ್ 4 ರಿಂದ ಸೋಂಕಿನ ಪ್ರಮಾಣದಲ್ಲಿ ನಿರಂತರ ಏರಿಕೆ ಕಂಡುಬಂದಿದೆ. 

ನಿರ್ಬಂಧಗಳು ಕೊನೆಗೊಂಡರೆ ಪ್ರಕರಣಗಳು ಹೆಚ್ಚಾಗುತ್ತವೆ :
ಕರೋನಾ ಪ್ರಕರಣಗಳು (Coronavirus) ಕಡಿಮೆಯಾಗುತ್ತಿರುವ ಕಾರಣ, ಡಿಡಿಎಂಎ ಸಭೆಯಲ್ಲಿ ಮಾಸ್ಕ್ (Mask) ಧರಿಸದಿದ್ದರೆ ದಂಡ ವಿಧಿಸುವ ನಿಯಮವನ್ನು ರದ್ದುಗೊಳಿಸಲಾಗಿದೆ.  ಈ ಮಧ್ಯೆ, ಸೋಂಕಿನ ಪ್ರಮಾಣವು 1.12 ಪ್ರತಿಶತದಷ್ಟು ದಾಖಲಾಗಿದೆ. ಮಂಗಳವಾರ, ದೆಹಲಿಯಲ್ಲಿ 112 ಹೊಸ ಪ್ರಕರಣಗಳು ವರದಿಯಾಗಿದೆ. 

ಇದನ್ನೂ ಓದಿ LIC ಈ ವಿಶೇಷ ಯೋಜನೆಯಲ್ಲಿ ಕೇವಲ ₹29 ಹೂಡಿಕೆ ಮಾಡಿ, ₹4 ಲಕ್ಷ ಲಾಭ ಪಡೆಯಿರಿ 

ದೆಹಲಿಯ ಕರೋನಾ ಬುಲೆಟಿನ್ : 
ಪ್ರಸ್ತುತ, ದೆಹಲಿಯಲ್ಲಿ ಸಕ್ರಿಯ ರೋಗಿಗಳ ಸಂಖ್ಯೆ 488 ಆಗಿದೆ. ಅದೇ ಸಮಯದಲ್ಲಿ, ಸೋಂಕಿನ ಪ್ರಮಾಣವು ಶೇಕಡಾ ಒಂದಕ್ಕಿಂತ ಹೆಚ್ಚು ಅಂದರೆ ಶೇಕಡಾ 1.05 ಕ್ಕೆ ತಲುಪಿದೆ (Delhi Coronavirus). ಹೋಳಿ ಹಬ್ಬಕ್ಕೂ ಮೊದಲು, ದೆಹಲಿಯಲ್ಲಿ ಸೋಂಕಿನ ಪ್ರಮಾಣವು ಒಂದು ಶೇಕಡಾಕ್ಕಿಂತ ಹೆಚ್ಚಿತ್ತು ಮತ್ತು ಹೋಳಿ ನಂತರ ಅದು ಶೇಕಡಾ 0.87 ಕ್ಕೆ ಇಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 

ಸೋಮವಾರ, ದೆಹಲಿಯಲ್ಲಿ 82 ಹೊಸ ಕರೋನವೈರಸ್ (Coronavirus latest update) ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ಒಬ್ಬ ರೋಗಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ, 95 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ರಾಜಧಾನಿಯಲ್ಲಿ ಸೋಂಕಿನ ಪ್ರಮಾಣವು 1.34 ಪ್ರತಿಶತದಷ್ಟು ದಾಖಲಾಗಿದೆ. ಇದಕ್ಕೂ ಮೊದಲು, ಭಾನುವಾರ ದೆಹಲಿಯಲ್ಲಿ 85 ಹೊಸ ಕೋವಿಡ್ -19 ಪ್ರಕರಣಗಳು ಕಂಡುಬಂದಿವೆ ಮತ್ತು ಸೋಂಕಿನ ಪ್ರಮಾಣವು ಶೇಕಡಾ 0.86 ರಷ್ಟಿತ್ತು. 

ಇದನ್ನೂ ಓದಿ  : Sri Lankan Economic Crisis : ಪಿಎಂ ಮೋದಿಯನ್ನು ಹಾಡಿಹೊಗಳಿದ ಶ್ರೀಲಂಕಾದ ಮಾಜಿ ಕ್ರಿಕೆಟರ್ 

ಹೊಸ ರೂಪಾಂತರ XE ಯ ಚರ್ಚೆ:
ಏತನ್ಮಧ್ಯೆ, ಕರೋನಾದ (COVID-19) ಹೊಸ ರೂಪಾಂತರ XEನ ಬಗ್ಗೆ ಎಲ್ಲಾ ಕಡೆಗಳಲ್ಲಿ ಚರ್ಚೆ ನಡೆಯುತ್ತಿದೆ. ಹೊಸ ರೂಪಾಂತರವು ಓಮಿಕ್ರಾನ್ ಗಿಂತ 10 ಪಟ್ಟು ಮಾರಕ ಎನ್ನಲಾಗುತ್ತಿದೆ. ಇದೆ ವೇಳೆ, ಮುಂಬೈನಲ್ಲಿ, ಎಕ್ಸ್‌ಇ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಲಾದ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ತಿರಸ್ಕರಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News