PM Modi: 'ಅನ್ನದಾತರು ರಸ್ತೆ ಮೇಲಿರುವಾಗ ಮೋದಿಗೆ ಅರಮನೆ ಕಟ್ಟುವ ತವಕ'

ಪ್ರಧಾನಿ ಮೋದಿ ಅವರನ್ನ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ

Last Updated : Dec 10, 2020, 05:35 PM IST
  • ಕಾಂಗ್ರೆಸ್ ನೂತನ ಸಂಸತ್ ಭವನ ಕಟ್ಟಡದ ಭೂಮಿ ಪೂಜೆ ನೆರವೇರಿಸಿರುವ ಪ್ರಧಾನಿ ಮೋದಿ ಅವರನ್ನು ತರಾಟೆಗೆ
  • ಪ್ರಧಾನಿ ಮೋದಿ ಅವರನ್ನ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ
  • ಸಂವಿಧಾನವನ್ನು ಗೌರವಿಸುವ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಯನ್ನು ಒದಗಿಸುವ ಪವಿತ್ರ ಸ್ಥಳ. ಆದರೆ ಪ್ರಧಾನಿ ಮೋದಿ ಪ್ರಸ್ತುತ ಸಂಸತ್ತಿನ ಬದಲು ಭವ್ಯ ಬಂಗಲೆ ಕಟ್ಟಲು ಹೊರಟಿದ್ದಾರೆ
PM Modi: 'ಅನ್ನದಾತರು ರಸ್ತೆ ಮೇಲಿರುವಾಗ ಮೋದಿಗೆ ಅರಮನೆ ಕಟ್ಟುವ ತವಕ' title=

ನವದೆಹಲಿ: ದೇಶದ ಅನ್ನದಾತ ತನ್ನ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವಾಗ ಪ್ರಧಾನಿ ತಮಗಾಗಿ ಅರಮನೆ ಕಟ್ಟಿಕೊಳ್ಳುವ ತವಕದಲ್ಲಿದ್ದಾರೆ ಎಂದು ಕಾಂಗ್ರೆಸ್ ನೂತನ ಸಂಸತ್ ಭವನ ಕಟ್ಟಡದ ಭೂಮಿ ಪೂಜೆ ನೆರವೇರಿಸಿರುವ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡು ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ(Randeep singh surjewala), ಕಳೆದ 16 ದಿನಗಳಿಂದ ರೈತರು ದೆಹಲಿ ಗಡಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಮಾತ್ರ ಸೆಂಟ್ರಲ್ ವಿಸ್ತಾ ಯೋಜನೆ ಹೆಸರಲ್ಲಿ ತಮಗಾಗಿ ಅರಮನೆ ಕಟ್ಟಿಕೊಳ್ಳುವ ಸಂಭ್ರಮದಲ್ಲಿ ಮುಳುಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

WhatsApp ಮೂಲಕ ಹಣ ಸಂಪಾದಿಸಬಹುದೇ? ಇಲ್ಲಿದೆ ಮಾಹಿತಿ

ಸಂಸತ್ ಭವನ ಎನ್ನುವುದು ಪ್ರಜಾಪ್ರಭುತ್ವ ರಕ್ಷಿಸುವ, ಸಂವಿಧಾನವನ್ನು ಗೌರವಿಸುವ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಯನ್ನು ಒದಗಿಸುವ ಪವಿತ್ರ ಸ್ಥಳ. ಆದರೆ ಪ್ರಧಾನಿ ಮೋದಿ ಪ್ರಸ್ತುತ ಸಂಸತ್ತಿನ ಬದಲು ಭವ್ಯ ಬಂಗಲೆ ಕಟ್ಟಲು ಹೊರಟಿದ್ದಾರೆ ಎಂದು ಸುರ್ಜೆವಾಲಾ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

Guidelines For Two Wheeler: ಈಗ ಬೈಕ್‌ನಲ್ಲಿ ಹಿಂದೆ ಕೂರುವವರಿಗೂ ಈ ನಿಯಮ ಅನ್ವಯ

ಪ್ರಧಾನಿ ಮೋದಿ ಕಟ್ಟಲು ಹೊರಟಿರುವುದು ಈ ಆದರ್ಶಗಳನ್ನು ಮಣ್ಣುಪಾಲು ಮಾಡಲಿರುವ ಭವ್ಯ ಅರಮನೆಯೇ ಹೊರತು ಸಂಸತ್ ಭವನವನ್ನಲ್ಲ ಎಂದು ಸುರ್ಜೆವಾಲಾ ಅಭಿಪ್ರಾಯಪಟ್ಟಿದ್ದಾರೆ.

Sukanya Samriddhi Scheme: 5 ಪ್ರಮುಖ ಬದಲಾವಣೆಗಳನ್ನು ತಪ್ಪದೇ ತಿಳಿಯಿರಿ

ತಮ್ಮ ಹಕ್ಕಿಗಾಗಿ ದೇಶದ ರೈತ ಬಾಂಧವರು ಕಳೆದ 16 ದಿನಗಳಿಂದ ನ್ಯಾಯಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅವರ ಸಂಕಷ್ಟಗಳನ್ನು ಕೇಳದ ಕೇಂದ್ರ ಸರ್ಕಾರ, ನೂತನ ಸಂಸತ್ ಭವನದ ಹೆಸರಲ್ಲಿ ದುಂದುವೆಚ್ಛ ಮಾಡಲು ಹೊರಟಿದೆ ಎಂದು ಸುರ್ಜೆವಾಲಾ ಹರಿಹಾಯ್ದಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಬಗ್ಗೆ Pakistan ಮಾಧ್ಯಮಗಳ ಮಹತ್ವದ ಹೇಳಿಕೆ

ಕಾಂಗ್ರೆಸ್ ಮೊದಲಿನಿಂದಲೂ ನೂತನ ಸಂಸತ್ ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಈಗ ಇರುವ ಸಂಸತ್ ಭವನ ಬಿಟ್ಟು ಬೇರೊಂದು ಭವನ ನಿರ್ಮಾಣ ಮಾಡಿ ದುಂದುವೆಚ್ಚ ಏಕೆ ಮಾಡಬೇಕು ಎಂದು ಪ್ರಶ್ನಿಸುತ್ತಿದೆ.

Wi-Fi Revolution: ಈ ಪ್ರದೇಶಗಳಲ್ಲೂ ಸಿಗಲಿದೆ ಫ್ರೀ WiFi Network

Trending News