ಛತ್ತೀಸ್ ಗಡ್: ಪೋಲಿಸ್ ಕಾರ್ಯಚರಣೆಯಲ್ಲಿ ಇಬ್ಬರು ನಕ್ಸಲರ ಬಲಿ

     

Last Updated : Jan 27, 2018, 12:40 PM IST
ಛತ್ತೀಸ್ ಗಡ್: ಪೋಲಿಸ್ ಕಾರ್ಯಚರಣೆಯಲ್ಲಿ ಇಬ್ಬರು ನಕ್ಸಲರ ಬಲಿ  title=

ಛತ್ತೀಸ್ ಗಡ್:  ಛತ್ತೀಸ್ ಗಡ್ ಸುಕ್ಮಾ ಜಿಲ್ಲೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳೆ ಸಹಿತ ಇಬ್ಬರು ನಕ್ಸಲರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.   

ಸುಕ್ಮಾ ಜಿಲ್ಲೆಯ ಬುಕಾಮೆತಾ-ಚಿಂತಲ್ನಾರ್ ಪ್ರದೇಶದ ಬಳಿ ಭದ್ರತಾ ಪಡೆಗಳ ಜೊತೆಗಿನ ಎನ್ಕೌಂಟರ್ನಲ್ಲಿ ನಕ್ಸಲರನ್ನು ಪೋಲಿಸ ಅಧಿಕಾರಿಗಳು ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರ್ಯಾಚರಣೆಯು 201 ಕೋಬ್ರಾ ದಳದ ನೇತೃತ್ವದೊಂದಿಗೆ ಹುಡುಕಾಟ ಮತ್ತು ನಾಶದ ಕಾರ್ಯಾಚರಣೆ(SADO)ಯ ಮೂಲಕ ನಕ್ಸಲರನ್ನು ಹತ್ಯೆ ಮಾಡಲಾಗಿದೆ. 

ನಕ್ಸಲ್ ಹತ್ಯಾ ಕಾರ್ಯಾಚರಣೆಯ ನಂತರ ಭದ್ರತಾ ಪಡೆಗಳು ನಕ್ಸಲರ ಬಳಿಯಿದ್ದ ಎರಡು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ ಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.  

Trending News