ಛತ್ತೀಸ್ ಗಡ್ ದ ರಾಜನಂದಗಾಂವ್ನ ಸೀತಗೋಟ ಕಾಡು ಪ್ರದೇಶದಲ್ಲಿ ಶನಿವಾರ ಜಿಲ್ಲಾ ಮೀಸಲು ಪಡೆಯೊಂದಿಗಿನ ಗುಂಡಿನ ಚಕಮಕಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ಏಳು ನಕ್ಸಲರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಸತತ ಕಠಿಣ ಪರಿಶ್ರಮ ಮತ್ತು ನಂಬಿಕೆಯೊಂದಿಗೆ ದಂಪತಿಗಳು ಛತ್ತೀಸ್ ಗಡ್ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯ ಅರ್ಹತಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.ಅನುಭವ್ ಸಿಂಗ್ ಮತ್ತು ಅವರ ಪತ್ನಿ ವಿಭಾ ಸಿಂಗ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರ್ಯಾಂಕ್ ಪಡೆದರು.
ಛತ್ತೀಸ್ ಗಡ್ ದ ಬಿಜಾಪುರ ಜಿಲ್ಲೆಯ ಕೇಶಕುತುಲ್ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಕನಿಷ್ಠ ಮೂವರು ಸೈನಿಕರು ಮೃತಪಟ್ಟಿದ್ದಾರೆ. ಮೃತಪಟ್ಟಿರುವ ಮೂವರು ಸೈನಿಕರಲ್ಲಿ ಕರ್ನಾಟಕದ ಯೋಧರೊಬ್ಬರು ಸಹಿತ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ನಕ್ಸಲರು ಮತ್ತೆ ಅಟ್ಟಹಾಸವನ್ನು ಮೆರೆದಿದ್ದು, ಈಗ ಛತ್ತೀಸ್ ಗಡ್ ದಲ್ಲಿ ಎನ್ ಕೌಂಟರ್ ದಾಳಿಯಲ್ಲಿ ನಾಲ್ವರು ಬಿಎಸ್ಎಫ್ ಸೈನಿಕರು ಹತ್ಯೆಯಾಗಿದ್ದಾರೆ,ಇಬ್ಬರು ಗಾಯಗೊಂಡಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮುಂಬರುವ ಛತ್ತೀಸ್ ಘಡ್ ಅಸೆಂಬ್ಲಿ ಚುನಾವಣೆಯಲ್ಲಿ ಪ್ರತಿ ನಾಗರಿಕನ ವೋಟ್ ಗಳನ್ನು ಮಹತ್ವ ಎನ್ನುವದನ್ನು ಚುನಾವಣಾ ಆಯೋಗ ಪರಿಗಣಿಸಿದೆ. ಈ ಹಿನ್ನಡೆಯಲ್ಲಿ ಅದು ಮತದಾರರ ಸಂಖ್ಯೆ ಒಂದೇ ಅಂಕಿಯಲ್ಲಿದ್ದರೂ ಸಹಿತ ಅವರಿಗೆ ಮತದಾನ ಮಾಡುವ ಅವಕಾಶವನ್ನು ಒದಗಿಸಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.