Horrible Car Crash Video: ವೇಗವಾಗಿ ಬಂದು, ರಸ್ತೆಯಿಂದ ಜಾರಿ, ಕಂದಕಕ್ಕೆ ಟಿಪ್ಪರ್ ಲಾಗಾ ಹೊಡೆದ ಕಾರ್... ವಿಡಿಯೋ ನೋಡಿ

Maruti Swift Crash Video: ಸಾಮಾಜಿಕ ಮಾಧ್ಯಮದಲ್ಲಿ ಅಪಘಾತದ ವಿಡಿಯೋವೊಂದು ಪ್ರಕಟಗೊಂಡಿದೆ. ಈ ವಿಡಿಯೋದಲ್ಲಿ ಒಂದು ಮಾರುತಿ ಸುಜುಕಿ ಕಾರು ರಸ್ತೆಯಿಂದ ಜಾರಿ, ಗಾಳಿಯಲ್ಲಿ ತೋರಿ ಕಂದಕದಲ್ಲಿ ಪಲ್ಟಿ ಹೊಡೆದಿರುವುದನ್ನು ನೀವು ನೋಡಬಹುದು. ಈ ಘಟನೆ ಚಿಂದವಾಡಾ-ನಾಗಪುರ್ ಹೈವೇ ಮೇಲೆ ಸಂಭವಿಸಿದೆ ಎನ್ನಲಾಗುತ್ತಿದೆ.   

Written by - Nitin Tabib | Last Updated : Aug 29, 2022, 06:21 PM IST
  • ಮಳೆಗಾಲದ ಸೀಜನ್ ನಲ್ಲಿ ಕಾರು ಡ್ರೈವ್ ಮಾಡುವುದು ಅತ್ಯಂತ ಕಷ್ಟದ ಕೆಲಸವಾಗಿರುತ್ತದೆ.
  • ಹೀಗಿರುವಾಗ ಈ ಋತುವಿನಲ್ಲಿ ಒಂದು ವೇಳೆ ನೀವು ವೇಗವಾಗಿ ವಾಹನ ಚಲಾಯಿಸಿದರೆ,
  • ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತೆ.
Horrible Car Crash Video: ವೇಗವಾಗಿ ಬಂದು, ರಸ್ತೆಯಿಂದ ಜಾರಿ, ಕಂದಕಕ್ಕೆ ಟಿಪ್ಪರ್ ಲಾಗಾ ಹೊಡೆದ ಕಾರ್... ವಿಡಿಯೋ ನೋಡಿ title=
Maruti Swift Crash Video

Maruti Swift Crash Video: ಮಳೆಗಾಲದ ಸೀಜನ್ ನಲ್ಲಿ ಕಾರು ಡ್ರೈವ್ ಮಾಡುವುದು ಅತ್ಯಂತ ಕಷ್ಟದ ಕೆಲಸವಾಗಿರುತ್ತದೆ. ಹೀಗಿರುವಾಗ ಈ ಋತುವಿನಲ್ಲಿ ಒಂದು ವೇಳೆ ನೀವು ವೇಗವಾಗಿ ವಾಹನ ಚಲಾಯಿಸಿದರೆ, ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತೆ. ಸಾಮಾಜಿಕ ಮಾಧ್ಯಮದಲ್ಲಿ ಇಂತಹುದೇ ಒಂದು ವಿಡಿಯೋ ಪ್ರಕಟಗೊಂಡಿದೆ. ವಿಡಿಯೋದಲ್ಲಿ ಮಾರುತಿ ಸುಜುಕಿ ಕಾರೊಂದು ರಸ್ತೆಯಿಂದ ಜಾರಿ ಕಂದಕದಲ್ಲಿ ಪಲ್ಟಿ ಹೊಡೆದಿರುವುದನ್ನು ನೀವು ನೋಡಬಹುದು. ಈ ಘಟನೆ ಚಿಂದವಾಡಾ-ನಾಗ್ಪುರ್ ಹೈವೆನಲ್ಲಿ ಸಂಭವಿಸಿದೆ ಎನ್ನಲಾಗುತ್ತಿದೆ. ಆದರೆ, ಅದೃಷ್ಟವಶಾತ್ ಕಾರಿನಲ್ಲಿದ್ದವರೆಲ್ಲರು ಸುರಕ್ಷಿತವಾಗಿದಾರೆ ಎನ್ನಲಾಗಿದೆ.

ನೀಲಿ ಬಣ್ಣದ ಮಾರುತಿ ಸ್ವಿಫ್ಟ್ ಕಾರೊಂದು ರಸ್ತೆಯ ಮೇಲಿಂದ ರಭಸವಾಗಿ ಬರುತ್ತಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಈ ಕಾರು ರಸ್ತೆಯ ಮೇಲೆ ಜಮಾವಣೆಗೊಂಡ ನೀರಿನ ಮೂಲಕ ಚಲಿಸಿದಾಗ ಅದು ನಿಯಂತ್ರಣ ತಪ್ಪಿದೆ. ಇನ್ನೇನು ಒಂದು ಕ್ಷಣದಲ್ಲಿ ಅದು ಚೇತರಿಸಿಕೊಂಡಿದೆ ಎನ್ನುವಷ್ಟರಲ್ಲಿ ಕಾರು ತನ್ನ ಎಡಬದಿಗೆ ಜಾರುತ್ತದೆ ಮತ್ತು ಚಾಲಕ ಕಾರಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ ಮತ್ತು ಕಾರು ರಸ್ತೆಯ ಬದಿಗೆ ಇರುವ ಆಳವಾದ ಮೈದಾನ ಪ್ರದೇಶಕ್ಕೆ ಹೋಗಿ ಬೀಳುತ್ತದೆ. 

ಇದನ್ನೂ ಓದಿ-8th Pay Commission: ಸರ್ಕಾರಿ ನೌಕರರಿಗೊಂದು ಬಿಗ್ ನ್ಯೂಸ್, ಜಾರಿಯಾಗಲಿದೆ 8ನೇ ವೇತನ ಆಯೋಗ!

ಮಧ್ಯ ಪ್ರದೇಶದ ಸಂಸದರಾಗಿರುವ ನಕುಲ್ ಕಮಲ್ನಾಥ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಅಪಘಾತದ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ. ವಿಡಿಯೋವನ್ನು ಹಂಚಿಕೊಂಡು ಬರೆದುಕೊಂಡಿರುವ ನಕುಲ್ ಕಮಲ್ನಾಥ್, ಭಾರಿ ಮಳೆಯ ಕಾರಣ ಚಿಂದವಾಡಾ-ನಾಗ್ಪುರ್ ಹೈವೆ ಮೇಲೆ ಕಾರೊಂದು ನಿಯಂತ್ರಣ ತಪ್ಪಿರುವ ಮಾಹಿತಿ ದೊರೆತಿದೆ ಎಂದು ಹೇಳಿದ್ದಾರೆ. ಆದರೆ, ವಾಹನದಲ್ಲಿ ಸವಾರರಾಗಿರುವ ಎಲ್ಲರೂ ಕೂಡ ಸುರಕ್ಷಿತವಾಗಿದ್ದಾರೆ ಎಂದು ಕೂಡ ಅವರು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ-ಪಿತ್ತ ನೆತ್ತಿಗೇರಿರುವ ಗೂಳಿಯ ಜೊತೆಗೆ ವ್ಯಕ್ತಿಯ ಚೆಲ್ಲಾಟ.. ಮುಂದೇನಾಯ್ತು ತಿಳಿಯಲು ವಿಡಿಯೋ ನೋಡಿ

ವಿಡಿಯೋ ಹಂಚಿಕೊಂಡು ಜನರಿಗೆ ಸಲಹೆ ನೀಡಿರುವ ಅವರು, "ಮಳೆಗಾಲದಲ್ಲಿ ವಾಹನವನ್ನು ನಿಧಾನಕ್ಕೆ ಚಲಾಯಿಸಿ ಹಾಗೋ ಅಧಿಕ ಮಳೆ ಇದ್ದ ಸಂದರ್ಭಗಳಲ್ಲಿ ವಾಹನವನ್ನು ಒಂದು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ, ಮಳೆ ನಿಲ್ಲುವ ನಿರೀಕ್ಷೆ ಮಾಡಿ" ಎಂದು ಹೇಳಿದ್ದಾರೆ. ಹೀಗಾಗಿ ನೀವೂ ಕೂಡ ಮಳೆ ಇರುವಾಗ ವಾಹನವನ್ನು ನಿಧಾನಕ್ಕೆ ಚಲಾಯಿಸಿ. ನಿಮ್ಮ ಕಾರಿನ ವಿಂಡ್ ಸ್ಕ್ರೀನ್ ಅನ್ನು ನಿರಂತರವಾಗಿ ವೈಪರ್ ನಿಂದ ಸ್ವಚ್ಛಗೊಳಿಸಿ. ವಿಂಡ್ ಸ್ಕ್ರೀನ್ ಮೇಲೆ ಮಂಜು ಶೇಖರಣೆಯಾಗಿದ್ದರೆ, ಡೀಫಾಗರ್ ಚಲಾಯಿಸಲು ಮರೆಯಬೇಡಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News