ಎನ್​ಡಿಎ ನಾಯಕರಿಗೆ ಔತಣಕೂಟ ಏರ್ಪಡಿಸಿದ ಅಮಿತ್ ಶಾ

ಮತ ಎಣಿಕೆಗೂ ಮೊದಲು ಎನ್​ಡಿಎ ನಾಯಕರಿಗೆ ಔತಣಕೂಟ ಏರ್ಪಡಿಸಿದ ಅಮಿತ್ ಶಾ.

Last Updated : May 20, 2019, 01:44 PM IST
ಎನ್​ಡಿಎ ನಾಯಕರಿಗೆ ಔತಣಕೂಟ ಏರ್ಪಡಿಸಿದ ಅಮಿತ್ ಶಾ title=

ನವದೆಹಲಿ: ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು  2019 ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಬಹುಮತ ಸಾಧಿಸಲಿದ್ದು, ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿವೆ. ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ರಚನೆಗೆ ಅಗತ್ಯವಿರುವ 272 ಸ್ಥಾನಗಳಿಗಿಂತಲೂ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆಗಳಲ್ಲಿ ಹೇಳಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳವಾರ(ಮೇ 21) ಎನ್​ಡಿಎ ನಾಯಕರಿಗೆ ಔತಣಕೂಟ ಏರ್ಪಡಿಸಿದ್ದಾರೆ.  ಮಂತ್ರಿಗಳ ಯೂನಿಯನ್ ಕೌನ್ಸಿಲ್ ಸಹ ಮಂಗಳವಾರ ಸಭೆ ಸೇರುವ ಸಾಧ್ಯತೆಯಿದೆ.

ಮೇ 23 ರಂದು ಲೋಕಸಭಾ ಚುನಾವಣಾ ಫಲಿತಾಂಶ ಹೊರಬರಲಿದೆ. ಭಾನುವಾರ ಹಲವು ವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್​ಡಿಎ  300 ಸ್ಥಾನಗಳನ್ನು ದಾಟಲಿದೆ ಎಂದು ಊಹಿಸಿವೆ. ನ್ಯೂಸ್24-ಚಾನಕ್ಯ 350 ಸ್ಥಾನಗಳನ್ನು, ಎಎಜೆಟಕ್ / ಇಂಡಿಯಾ ಟುಡೆ-ಆಕ್ಸಿಸ್ 339 ರಿಂದ 365, ನ್ಯೂಸ್ 18-ಐಪಿಎಸ್ಓಎಸ್ 336, ಟೈಮ್ಸ್ ನೌ-ವಿಎಂಆರ್ 306, ರಿಪಬ್ಲಿಕ್-ಜಾನ್ ಕಿ ಬಾತ್ 315 ಮತ್ತು ಇಂಡಿಯಾ ಟಿವಿ-ಸಿಎನ್ಎಕ್ಸ್ ಎನ್ಡಿಎ 300 ಸೀಟುಗಳನ್ನು ಗೆಲ್ಲುತ್ತವೆ ಎಂದು ಹೇಳಿದೆ. ಯುಪಿಎ 100 ರಿಂದ 130 ರ ನಡುವೆ ಸೀಮಿತವಾಗಬಹುದೆಂದು ಈ ಎಕ್ಸಿಟ್ ಪೋಲ್ ಸಮೀಕ್ಷೆಗಳು ಊಹಿಸಿವೆ.

ನ್ಯೂಸ್ಎಕ್ಸ್ / ಇಂಡಿಯಾ ನ್ಯೂಸ್ ಪೋಲ್ ಸ್ಟ್ರಾಟಾ ಮೈತ್ರಿಗೆ 242 ಸ್ಥಾನಗಳು ಲಭಿಸಲಿದ್ದು,  ಯುಪಿಎ ಗರಿಷ್ಠ 165 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು ತಿಳಿಸಿದೆ.

ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ 82 ರಿಂದ 165 ಸ್ಥಾನಗಳನ್ನು ಪಡೆಯುತ್ತಿದೆ ಎಂದು ಎಕ್ಸಿಟ್ ಪೋಲ್ಗಳು ಊಹಿಸಿವೆ. ಯುಪಿಎಗಿಂತಲೂ "ಇತರ" ಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಆರು ನಿರ್ಗಮನ ಸಮೀಕ್ಷೆಗಳು ಊಹಿಸಿವೆ.

Trending News