Viral Video: ಒಮ್ಮೆ ಗೂಬೆಯಾದರೆ ಮತ್ತೊಮ್ಮೆ ಸಿಂಹ, ಇಂತಹ ದೃಶ್ಯ ನೀವು ನಿಮ್ಮ ಜೀವನದಲ್ಲಿ ನೋಡಿರಲಿಕ್ಕಿಲ್ಲ

Tatto Artist: ಇದು ನೋಡಲು ಎಷ್ಟೊಂದು ಅದ್ಭುತವಾಗಿದೆ ಎಂದರೆ, ಕಣ್ಮುಚ್ಚಿ ಕಣ್ ತೆರೆಯುವಲ್ಲಿ ತನ್ನ ರೂಪ ಬದಲಾಯಿಸುತ್ತಿದೆ. ಈ ವಿಡಿಯೋ ಹಂಚಿಕೆಯಾಗುತ್ತಲೇ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಈ ಕುರಿತು ಬರೆದುಕೊಂಡಿರುವ ಬಳಕೆದಾರರೊಬ್ಬರು, ಇದೊಂದು ಅದ್ಭುತ ಕಳೆಯ ಅದ್ಭುತ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.   

Written by - Nitin Tabib | Last Updated : Dec 9, 2022, 10:40 PM IST
  • ಈ ವೀಡಿಯೋ ಯಾವಾಗ ಚಿತ್ರಿಸಲಾಗಿದೆ ಮತ್ತು ಎಲ್ಲಿಂದ ಎಲ್ಲಿಂದ ಹೊರಹೊಮ್ಮಿದೆ ಎಂಬುದು ತಿಳಿದುಬಂದಿಲ್ಲ,
  • ಆದರೆ ನೋಡಲು ಇದು ತುಂಬಾ ಅತ್ಯದ್ಭುತವಾಗಿದೆ.
  • ಆನಂದ್ ಮಹಿಂದ್ರಾ ಅವರು ಇದನ್ನು ಹಂಚಿಕೊಳ್ಳುತ್ತಲೇ ಅದು ತಕ್ಷಣವೆ ವೈರಲ್ ಆಗಿದೆ.
Viral Video: ಒಮ್ಮೆ ಗೂಬೆಯಾದರೆ ಮತ್ತೊಮ್ಮೆ ಸಿಂಹ, ಇಂತಹ ದೃಶ್ಯ ನೀವು ನಿಮ್ಮ ಜೀವನದಲ್ಲಿ ನೋಡಿರಲಿಕ್ಕಿಲ್ಲ title=
Amazing Video

Artist Group Performance: ಕೆಲವೊಮ್ಮೆ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿದಾಗ, ಜನರು ಅದನ್ನು ನೋಡಿ ಮಂತ್ರಮುಗ್ಧರಾಗುವ ಹಲವಾರು ಸನ್ನಿವೇಶಗಳನ್ನು ನೀವು ನೋಡಿರಬಹುದು. ಇಂತಹುದೇ ಒಂದು ಕಲಾವಿದರು ಪ್ರಸ್ತುತ ಪಡಿಸಿರುವ ಕಳೆಯ ಅದ್ಭುತ ವಿಡಿಯೋವೊಂದನ್ನು ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ, ಕೆಲವರು ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಅವರ ಕಲೆ ಎಷ್ಟೊಂದು ಅದ್ಭುತವಾಗಿದೆ ಎಂದರೆ ಕಲೆಯನ್ನು ಪ್ರದರ್ಶಿಸುತ್ತಿರುವ ವ್ಯಕ್ತಿ ಮನುಷ್ಯನೋ ಅಥವಾ ಪ್ರಾಣಿಯೋ ಎಂಬುದನ್ನು ಗುರುತಿಸುವುದು ಕಷ್ಟಸಾಧ್ಯ.

ಒಂದಾದ ಬಳಿಕ ಒಂದು ಪ್ರಾಣಿ ಆಕಾರ ಪಡೆದುಕೊಳ್ಳುತ್ತದೆ!
ಈ ವಿಡಿಯೋವನ್ನು ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ ಇದು ಅದ್ಭುತವಾಗಿದೆ ಎಂಬ ಶೀರ್ಷಿಕೆಯನ್ನು ಅದಕ್ಕೆ ನೀಡಿದ್ದಾರೆ. ಟ್ಯಾಲೆಂಟ್ ಹಂಟ್ ಶೋನಲ್ಲಿ ಕೆಲವರು ತೋರಿದ ಅದ್ಭುತ ಪ್ರದರ್ಶನವನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು. ಮೊದಮೊದಲು ಗೂಬೆ ಕಂಡರೂ ಮುಂದೆ ಏನಾಗುತ್ತದೆ ಎಂಬುದು ಜನರಲ್ಲಿ ಅಚ್ಚರಿ ಮೂಡಿಸುತ್ತದೆ. ಗೂಬೆಯ ರೂಪ ಪಡೆದುಕೊಂಡ ವ್ಯಕ್ತಿಯು ಒಂದಾದ ಮೇಲೊಂದರಂತೆ ಇತರ ಅನೇಕ ಪ್ರಾಣಿಗಳ ರೂಪ ತಳೆಯುತ್ತಾನೆ.

ಇದನ್ನೂ ಓದಿ-Viral Video: ಕೋಳಿ ಕದಿಯುವ ಈ ತಾತನ ಸ್ಪೀಡ್ ನೋಡಿ ನೀವೂ ಕೂಡ ದಂಗಾಗುವಿರಿ

ವರ್ಣಚಿತ್ರಗಳ ಮನಸೂರೆಗೊಳಿಸುವ ನೋಟ
ವಾಸ್ತವದಲ್ಲಿ ಈ ಪ್ರದರ್ಶನದ ವೇಳೆ ಗುಂಪೊಂದರ ಸದಸ್ಯರು ತಮ್ಮ ದೇಹದ ಮೇಲೆ  ವರ್ಣಚಿತ್ರಗಳನ್ನು ಬರೆದುಕೊಂಡಿದ್ದಾರೆ, ಅದು ಅದ್ಭುತ ನೋಟವನ್ನು ನೀಡುತ್ತಿದೆ. ಇದರಲ್ಲಿ ಒಬ್ಬ ವ್ಯಕ್ತಿ ಮೊದಲು ಸಿಂಹವಾಗಿ ಕಾಣಿಸಿಕೊಳ್ಳುತ್ತಾನೆ, ನಂತರ ಇತರ ಸದಸ್ಯ ಮತ್ತೊಂದು ಪ್ರಾಣಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಕೊನೆಯಲ್ಲಿ ತಂಡದ ಎಲ್ಲಾ ಸದಸ್ಯರು ಸೇರಿ ಹುಲಿಯ ರೂಪ ಪಡೆದು ಗರ್ಜಿಸುವ ದೃಶ್ಯವಂತೂ ಮೈನವಿರೇಳಿಸುವಂತಿದೆ.

ಇದನ್ನೂ ಓದಿ-Trending Video: ಮೊದಲು ಜೋಕಾಲಿ ಆಡುವ ಈ ಪುಟಾಣಿಯ ವಿಡಿಯೋ ನೋಡಿ, ನಂತರ ದಮ್ಮಿದ್ರೆ ನಗು ತಡೆದು ತೋರಿಸಿ

ಈ ವೀಡಿಯೋ ಯಾವಾಗ ಚಿತ್ರಿಸಲಾಗಿದೆ  ಮತ್ತು ಎಲ್ಲಿಂದ ಎಲ್ಲಿಂದ ಹೊರಹೊಮ್ಮಿದೆ ಎಂಬುದು ತಿಳಿದುಬಂದಿಲ್ಲ, ಆದರೆ ನೋಡಲು ಇದು ತುಂಬಾ ಅತ್ಯದ್ಭುತವಾಗಿದೆ. ಆನಂದ್ ಮಹಿಂದ್ರಾ ಅವರು ಇದನ್ನು ಹಂಚಿಕೊಳ್ಳುತ್ತಲೇ ಅದು ತಕ್ಷಣವೆ ವೈರಲ್ ಆಗಿದೆ. ಇದು ಉತ್ತಮ ಕಲಾಕೃತಿಯ ಒಂದು ಅದ್ಭುತ ಉದಾಹರಣೆ ಎಂದು ಬಳಕೆದಾರರೊಬ್ಬರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ಪ್ರದರ್ಶನವು ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News