ಗಗನ ಮುಖಿಯಾಗುತ್ತಿದೆ ಹಣ್ಣು ತರಕಾರಿ ಬೆಲೆ , ಕಿಚನ್ ಬಜೆಟ್ ಕೆಡಿಸುತ್ತಿದೆ ದುಬಾರಿ ತರಕಾರಿಗಳು!

ಬೇಸಿಗೆ ಕಾಲ ಆರಂಭವಾಗಿದ್ದು, ಈ ಹೊತ್ತಿನಲ್ಲಿ ತರಕಾರಿ ಬೆಲೆ ಅಡುಗೆ ಮನೆಯ ಬಜೆಟ್ ಅನ್ನೇ ಹಾಳು ಮಾಡಿದೆ. ತರಕಾರಿ ಹಣ್ಣುಗಳ ಬೆಲೆ ಗಗನ ಮುಟ್ಟಿದೆ. 

Written by - Ranjitha R K | Last Updated : Apr 4, 2022, 10:10 AM IST
  • ಹಣದುಬ್ಬರವು ಮನೆಯ ಬಜೆಟ್ ಅನ್ನು ಕೆಡಿಸುತ್ತಿದೆ
  • ಹಸಿರು ತರಕಾರಿಗಳ ದರದಲ್ಲಿ ಏರಿಕೆ
  • ಗಗನಕ್ಕೇರುತ್ತಿರುವ ತರಕಾರಿ ಬೆಲೆ
ಗಗನ ಮುಖಿಯಾಗುತ್ತಿದೆ ಹಣ್ಣು ತರಕಾರಿ ಬೆಲೆ , ಕಿಚನ್ ಬಜೆಟ್ ಕೆಡಿಸುತ್ತಿದೆ ದುಬಾರಿ ತರಕಾರಿಗಳು!   title=
Vegetable price hike (File photo)

ಬೆಂಗಳೂರು : ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಭಾರೀ ಏರಿಕೆಯಾದ ನಂತರ ಇದೀಗ ತರಕಾರಿಗಳ ಬೆಲೆಯಲ್ಲಿಯೂ ಏರಿಕೆ ಕಂಡು ಬಂದಿದೆ (Vegetable price hike). ಬೇಸಿಗೆ ಕಾಲ ಆರಂಭವಾಗಿದ್ದು, ಈ ಹೊತ್ತಿನಲ್ಲಿ ತರಕಾರಿ ಬೆಲೆ ಅಡುಗೆ ಮನೆಯ ಬಜೆಟ್ ಅನ್ನೇ ಹಾಳು ಮಾಡಿದೆ. ತರಕಾರಿ ಹಣ್ಣುಗಳ ಬೆಲೆ ಗಗನ ಮುಟ್ಟಿದೆ. ಇದೀಗ ತರಕಾರಿ ಬೆಲೆ ಏರಿಕೆಯಿಂದ ಜನಸಾಮಾನ್ಯರ ಸಂಕಷ್ಟ ಇನ್ನುಷ್ಟು ಹೆಚ್ಚಿದೆ.

ಅತ್ಯಂತ ದುಬಾರಿ ಹಸಿರು ತರಕಾರಿಗಳು :
ಇತ್ತೀಚಿನ ದಿನಗಳಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲಾ ಹಸಿರು ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ (Vegetable price hike). ಅಂಗಡಿಗಳಲ್ಲಿ ತರಕಾರಿಗಳು ಮೊದಲಿನಂತೆ ರಾಶಿ ರಾಶಿಯಾಗಿ ಕಾಣುತ್ತಿಲ್ಲ.  ಪಾಲಕ್ ಸೊಪ್ಪಿನ (Palak)ಬೆಲೆ ಕೆಜಿಗೆ 42 ರೂ.ಗಿಂತ ಹೆಚ್ಚಿದೆ. ಇದೇ ವೇಳೆ  ಸೋರೆಕಾಯಿ, ಬೆಂಡೆ ಕಾಯಿ ಬೆಲೆ ಕೂಡಾ ವಿಪರೀತ ಏರಿಕೆಯಾಗಿದೆ. ಮತ್ತೊಂದೆಡೆ,  ಬೇಸಿಗೆಯಲ್ಲಿನಿಂಬೆ ಪಾನಕ್ (Lemon juice)ಮಾಡಿ ಕುಡಿಯೋಣ ಎಂದರೆ ಅದರ ಬೆಲೆ ಕೂಡಾ ಹೆಚ್ಚಾಗಿದೆ.  

ಇದನ್ನೂ ಓದಿ : Dietary Guidelines: ಆಹಾರಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳಲ್ಲಿ ಬದಲಾವಣೆ

ದೇಶದ ಅನೇಕ ನಗರಗಳಲ್ಲಿ ಬೆಲೆಗಳು ಗಗನಕ್ಕೇರುತ್ತಿವೆ :
ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವು ರಾಜ್ಯಗಳ ಮಂಡಿಗಳಲ್ಲಿ ತರಕಾರಿಗಳ ಬೆಲೆ ಆಕಾಶ ಮುಟ್ಟುತ್ತಿದೆ. ಕೆಲವೆಡೆ ತರಕಾರಿಗಳು ಬರುತ್ತಿಲ್ಲ ಎಂದು ಕೂಡಾ ಹೇಳಲಾಗುತ್ತಿದೆ. ಆರೋಗ್ಯವಂತರಾಗಿರಲು ವೈದ್ಯರು ಕೂಡ ಹಸಿರು ತರಕಾರಿಗಳನ್ನೇ ಸೇವಿಸುವಂತೆ ಸೂಚಿಸುತ್ತಾರೆ. ಆದರೆ ಹೆಚ್ಚಿದ ಬೆಲೆಗಳು ಅಡುಗೆಮನೆಯ ಬಜೆಟ್ ಅನ್ನು ಹಾಳುಮಾಡಿದೆ. 

ಇದನ್ನೂ ಓದಿ :  ಸಿಹಿ ಸುದ್ದಿ! ಸರ್ಕಾರಿ ನೌಕರರಿಗೆ ಹೆಚ್ಚಿನ ವೇತನ ಶ್ರೇಣಿ; ಶೇ 15% ವರೆಗೆ ಸಂಬಳ ಹೆಚ್ಚಳ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News