ABP-CSDS Survey: ರಾಜಸ್ಥಾನದಲ್ಲಿ ಕಾಂಗ್ರೆಸ್ ಮ್ಯಾಜಿಕ್, ಎಂಪಿಯಲ್ಲಿ ಕಠಿಣ ಸ್ಪರ್ಧೆ

 ನವೆಂಬರ್ 8 ರಂದು ಸೆಂಟರ್ ಫಾರ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ಡಿಎಸ್) ಮತ್ತು ಎಬಿಪಿ ನ್ಯೂಸ್  ಬಿಡುಗಡೆ ಮಾಡಿದ ಚುನಾವಣೆ ಸಮೀಕ್ಷೆಯಲ್ಲಿ ಈ ಬಾರಿ ಬಿಜೆಪಿ ಛತ್ತೀಸ್ ಗಡ್ ದಲ್ಲಿ ನಾಲ್ಕನೇ ಬಾರಿ ಗೆಲ್ಲಲಿದೆ ಎಂದು ವರದಿ ತಿಳಿಸಿದೆ. ಇನ್ನು ರಾಜಸ್ಥಾನದಲ್ಲಿ ವಸುಂಧರಾ ರಾಜೇ ಸರ್ಕಾರವನ್ನು ಹಿನ್ನಡೆ ಅನುಭವಿಸಲಿದ್ದು ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವ ಕಠಿಣ ಸ್ಪರ್ಧೆ ನಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

Last Updated : Nov 9, 2018, 02:51 PM IST
ABP-CSDS Survey: ರಾಜಸ್ಥಾನದಲ್ಲಿ ಕಾಂಗ್ರೆಸ್ ಮ್ಯಾಜಿಕ್, ಎಂಪಿಯಲ್ಲಿ ಕಠಿಣ ಸ್ಪರ್ಧೆ title=

ನವದೆಹಲಿ: ನವೆಂಬರ್ 8 ರಂದು ಸೆಂಟರ್ ಫಾರ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ಡಿಎಸ್) ಮತ್ತು ಎಬಿಪಿ ನ್ಯೂಸ್  ಬಿಡುಗಡೆ ಮಾಡಿದ ಚುನಾವಣೆ ಸಮೀಕ್ಷೆಯಲ್ಲಿ ಈ ಬಾರಿ ಬಿಜೆಪಿ ಛತ್ತೀಸ್ ಗಡ್ ದಲ್ಲಿ ನಾಲ್ಕನೇ ಬಾರಿ ಗೆಲ್ಲಲಿದೆ ಎಂದು ವರದಿ ತಿಳಿಸಿದೆ. ಇನ್ನು ರಾಜಸ್ಥಾನದಲ್ಲಿ ವಸುಂಧರಾ ರಾಜೇ ಸರ್ಕಾರವನ್ನು ಹಿನ್ನಡೆ ಅನುಭವಿಸಲಿದ್ದು ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವ ಕಠಿಣ ಸ್ಪರ್ಧೆ ನಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಸಮೀಕ್ಷೆ ಪ್ರಕಾರ ಮಧ್ಯಪ್ರದೇಶದಲ್ಲಿ  ಬಿಜೆಪಿ-116, ಕಾಂಗ್ರೆಸ್-105, ಮತ್ತು ಇತರರು- 9 ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ತಿಳಿದುಬಂದಿದೆ.ಛತ್ತಿಸ್ ಗಡ್ ನಲ್ಲಿ ಬಿಜೆಪಿ-56,ಕಾಂಗ್ರೆಸ್ 25, ಇತರೆ -4 ಸ್ಥಾನಗಳನ್ನು ಗೆಲ್ಲಲಿದೆ. ಇನ್ನು ರಾಜಸ್ತಾನದಲ್ಲಿ ಬಿಜೆಪಿ-84,ಕಾಂಗ್ರೆಸ್-110 ಹಾಗೂ ಇತರೆ- ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಇನ್ನು ಮತಗಳಿಗೆ ಪ್ರಮಾಣವನ್ನು ಗಮನಿಸಿದಾಗ ರಾಜಸ್ತಾನದಲ್ಲಿ 
ಬಿಜೆಪಿ: 41%
ಕಾಂಗ್ರೆಸ್: 45%
ಇತರೆ: 14%

ಸಮೀಕ್ಷೆಯ ಪ್ರಕಾರ ಛತ್ತೀಸ್ ಗಡ್ ದ ಮತ ಹಂಚಿಕೆಯು ಕೆಳಕಂಡಂತಿದೆ:
ಬಿಜೆಪಿ: 43%
ಕಾಂಗ್ರೆಸ್: 36%
ಇತರೆ: 15%

ಸಮೀಕ್ಷೆಯ ಪ್ರಕಾರ ಮಧ್ಯಪ್ರದೇಶದಲ್ಲಿನ ಮತ ಹಂಚಿಕೆಯು ಕೆಳಕಂಡಂತಿದೆ:
ಬಿಜೆಪಿ: 41%
ಕಾಂಗ್ರೆಸ್: 40%
ಇತರೆ: 19%

Trending News