ದರ್ಶನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ : ಯುವ ನಿರ್ಮಾಪಕ ಆರೋಪ

Actor Darshan : ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ನಟ ದರ್ಶನ್ ಜೈಲು ಸೇರಿದ್ದು, ದರ್ಶನ್ ಅವರಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಷಯಗಳು ಹೊರಬರುತ್ತಲೇ ಇವೆ. 

Written by - Zee Kannada News Desk | Last Updated : Jun 14, 2024, 09:06 PM IST
  • ದರ್ಶನ್ ಅವರಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಷಯಗಳು ಹೊರಬರುತ್ತಲೇ ಇವೆ.
  • ನಟ ದರ್ಶನ್ ಒಬ್ಬ ನಿರ್ಮಾಪಕರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದರು ಎನ್ನುವ ಕುರಿತು ಮಾಹಿತಿ ತಿಳಿದು ಬರುತ್ತಿದೆ.
  • ದರ್ಶನ್ ಅವರ ಮೇಲೆ 15 ಕೇಸ್ ಗಳು ದಾಖಲಾಗಿದ್ದು ಪತ್ತೆಯಾಗಿದೆ.
ದರ್ಶನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ : ಯುವ ನಿರ್ಮಾಪಕ ಆರೋಪ title=

Darshan called and threatened to kill : ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ನಟ ದರ್ಶನ್ ಜೈಲು ಸೇರಿದ್ದು, ದರ್ಶನ್ ಅವರಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಷಯಗಳು ಹೊರಬರುತ್ತಲೇ ಇವೆ. 

ರೇಣುಕಾ ಸ್ವಾಮಿ ಕೊಲೆ ಆರೋಪದ ಹಿನ್ನೆಲೆ ಜೈಲು ಸೇರಿರುವ ನಟ ದರ್ಶನ್, ಇದರ ಬೆನ್ನಲ್ಲೇ ಹೊಸ ಹೊಸ ವಿಷಯಗಳು ದರ್ಶನ್ ಅವರಿಗೆ ಸಂಬಂಧಿಸಿದಂತೆ ಹೊರ ಬರುತ್ತಿವೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೂ ಮುನ್ನ ದರ್ಶನ್ ಅವರ ಮೇಲೆ 15 ಕೇಸ್ ಗಳು ದಾಖಲಾಗಿದ್ದು ಪತ್ತೆಯಾಗಿದೆ. 

ಇತ್ತೀಚಿಗಷ್ಟೇ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ವಿರುದ್ಧ ಸ್ವತಃ ಅವರ ಸೋದರ ಮಾವ ಟಿಎಲ್ ಶ್ರೀನಿವಾಸ್ ಮಾತನಾಡಿ ಇದಕ್ಕೂ ಮುಂಚೆ ದರ್ಶನ್ ಆಸ್ತಿ ವಿಚಾರಕ್ಕೋಸ್ಕರ ಜಗಳ ಮಾಡಿ ತಮ್ಮನ್ನು ಮನೆಯಿಂದ ಹೊರ ಹಾಕಿದ್ದರೂ ಎಂದು ತಿಳಿಸಿದ್ದರು. 

ಇದನ್ನು ಓದಿ : Kiara Advani : ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 10 ವರ್ಷ ! ಸಂಭ್ರಮದಲ್ಲಿ ಕಿಯಾರಾ ಫೋಟೋಸ್ ವೈರಲ್.. 

ಇದೀಗ ದರ್ಶನ್ ಅವರ ಮೇಲೆ ಇನ್ನೊಂದು ಆರೋಪ ಕೇಳಿ ಬರುತ್ತಿದ್ದು, ನಟ ದರ್ಶನ್ ಒಬ್ಬ ನಿರ್ಮಾಪಕರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದರು ಎನ್ನುವ ಕುರಿತು ಮಾಹಿತಿ ತಿಳಿದು ಬರುತ್ತಿದೆ. 

ಇದನ್ನು ಓದಿ :ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?

ಸ್ಪಷ್ಟವಾಗಿ ಹೇಳುವುದಾದರೆ ಶ್ರೀ ಕೃಷ್ಣ ಪರಮಾತ್ಮ ಎಂಬ ಸಿನಿಮಾ ನಿರ್ಮಾಪಕ ಭರತ್ ಎಂಬುವರು ದರ್ಶನ್ ವಿರುದ್ಧ ಈ ಆರೋಪವನ್ನು ಮಾಡಿದ್ದಾರೆ. ನಟ ದರ್ಶನ್ ಕೆಲವು ವರ್ಷಗಳ ಹಿಂದೆ ಕರೆ ಮಾಡಿ ತಮಗೆ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಆಪ್ತರೊಬ್ಬರು ನಾಯಕರಾಗಿ ನಟಿಸುತ್ತಿದ್ದರು ಇಂಥ ಸಂದರ್ಭದಲ್ಲಿ ಹಣಕಾಸಿನ ಸಮಸ್ಯೆಯಿಂದ ಸಿನಿಮಾ ಸ್ಥಗಿತಗೊಂಡಿತ್ತು. ಈ ವೇಳೆ ನಟ ದರ್ಶನ್ ನನಗೆ ಕರೆ ಮಾಡಿ ಬೆದರಿಕೆ ಹಾಕಿ, ಅದರ ಮೇಲೆ ಹಲ್ಲೆ ಮಾಡುವ ಪ್ರಯತ್ನವು ಆಗಿದೆ ಆ ಸಮಯದಲ್ಲಿ ನಾನು ಪಾರಾಗಿ ಬಂದಿದ್ದೇನೆ ಮತ್ತು ಈ ಕುರಿತಂತೆ ನಾನು ದೂರು ಕೂಡ ದಾಖಲಿಸಿರುವುದಾಗಿ ನಿರ್ಮಾಪಕ ಭರತ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News