ರೇಣುಕಾ ಕೊಲೆ ಕೇಸ್‌ಗೆ ಪ್ರಬಲ ಸಾಕ್ಷ್ಯ: ದರ್ಶನ್‌ ಗ್ಯಾಂಗ್‌ ವಿರುದ್ಧ 21 ಮಹತ್ವದ ಎವಿಡೆನ್ಸ್‌!

 Actor Darshan Arrest: ರೇಣುಕಾಸ್ವಾಮಿ ಕೊಲೆ ಆರೋಪದಡಿಯಲ್ಲಿ ದರ್ಶನ್‌ ಹಾಗೂ ಡಿ ಗ್ಯಾಂಗ್‌ ಪೊಲೀಸ್‌ ಕಸ್ಟಡಿಯಲಿದ್ದಾರೆ.. ವಿಚಾರಣೆ ವೇಳೆ ಬಗೆದಷ್ಟು ಬಯಲಾಗ್ತಿರೋ ರಹಸ್ಯ ಕಂಡು ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತಿದೆ.. ಸದ್ಯ ಈ ಕೊಲೆ ಪ್ರಕರಣದಲ್ಲಿ ದರ್ಶನ್‌ ಮತ್ತು ಗ್ಯಾಂಗ್ ವಿರುದ್ಧ ಪೊಲೀಸ್‌ 21 ಸಾಕ್ಷ್ಯ ಪ್ರಬಲ ಸಾಕ್ಷ್ಯ ಕಲೆಹಾಕಿರುವ ಮಾಹಿತಿ ಲಭ್ಯವಾಗಿದೆ.. 

1 /21

ಸಾಕ್ಷ್ಯ 1 - ಕೊಲೆ ನಡೆದ ಸ್ಥಳದಲ್ಲಿ ದರ್ಶನ್‌ ಸೇರಿ 6 ಆರೋಪಿಗಳು ಇರೋದು ಪತ್ತೆಯಾಗಿದೆ.   

2 /21

ಸಾಕ್ಷ್ಯ 2 - ಕೊಲೆ ನಡೆದ ನಂತರ ಇಬ್ಬರು ಆರೋಪಿಗಳು ಕೃತ್ಯದ ಬಗ್ಗೆ ಚರ್ಚೆ ಮಾಡಿರುವ ಕಾಲ್ ಡೀಟೇಲ್ಸ್   

3 /21

ಸಾಕ್ಷ್ಯ 3 - ಕೊಲೆ ನಡೆದ ಬಳಿಕ ಕಾರ್ತಿಕ್, ಕೇಶವ್, ನಿಖಿಲ್ ನಾಯ್ಕ್ ತಾವೇ ಕೊಲೆ ಮಾಡಿದ್ದಾಗಿ ಸರೆಂಡರ್   

4 /21

ಸಾಕ್ಷ್ಯ 4 - ರೇಣುಕಾಸ್ವಾಮಿ ಮೃತದೇಹವನ್ನು ಬಿಸಾಡಲು ಡೀಲ್ ನಡೆಸಲಾಗಿದ್ದ ಮೂವತ್ತು ಲಕ್ಷ ಹಣ ಸೀಜ್  

5 /21

ಸಾಕ್ಷ್ಯ 5 - ಸರೆಂಡರ್ ಆದವರ ವಿಚಾರಣೆ ವೇಳೆ ಪ್ರದೋಶ್, ಪವನ್, ವಿನಯ್ ಹೆಸರು ಬಹಿರಂಗಗೊಂಡಿದೆ  

6 /21

ಸಾಕ್ಷ್ಯ 6 - ವಿನಯ್, ಪವನ್, ಪ್ರದೋಶ್ ವಿಚಾರಣೆ ವೇಳೆ ದರ್ಶನ್, ಪವಿತ್ರಾ ಗೌಡ ಹೆಸರು ಬಹಿರಂಗಗೊಂಡಿದೆ  

7 /21

ಸಾಕ್ಷ್ಯ 7 - ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡ್ತಿದ್ದ ಬಗ್ಗೆ ಪವನಗೆ ತಿಳಿಸಿದ್ದು,ಆತನ ಮೂಲಕ ದರ್ಶನ್‌ಗೆ ತಿಳಿಸಿದ್ದಾಗಿ ಪವಿತ್ರಾ ಹೇಳಿಕೆ ಕೊಟ್ಟಿದ್ದಾರಂತೆ.  

8 /21

ಸಾಕ್ಷ್ಯ 8 - ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನಿಂದ ರೇಣುಕಾಸ್ವಾಮಿ ಕಿಡ್ನ್ಯಾಪ್  

9 /21

ಸಾಕ್ಷ್ಯ 9 - ಪವನ್, ದರ್ಶನ್‌ ಹೇಳಿದಂತೆ ರೇಣುಕಾಸ್ವಾಮಿ ಕರೆತಂದಿರೋದಾಗಿ ರಾಘವೇಂದ್ರ ಸ್ಟೇಟ್‌ಮೆಂಟ್ ಕೊಟ್ಟಿದ್ದಾನಂತೆ  

10 /21

ಸಾಕ್ಷ್ಯ 10 - ಆರ್‌ಆರ್‌ ನಗರ ಶೆಡ್‌ನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ, ಕೂದಲು, ಬೆವರಿನ ಸ್ಯಾಂಪಲ್ಸ್ ಅನ್ನು ಪೊಲೀಸರು ಸಂಗ್ರಹಿಸಿದ್ದಾರೆ  

11 /21

ಸಾಕ್ಷ್ಯ 11 - ಆರೋಪಿಗಳ ಫಿಂಗರ್ ಪ್ರಿಂಟ್, ಫುಟ್‌ ಪ್ರಿಂಟ್‌, ಬ್ಲಡ್ ಸ್ಯಾಂಪಲ್‌ಗಳನ್ನು ಪೊಲೀಸರು ಸಂಗ್ರಹ ಮಾಡಿದ್ದಾರೆ  

12 /21

ಸಾಕ್ಷ್ಯ 12 - ರೇಣುಕಾಸ್ವಾಮಿ ಹಾಗೂ ಆರೋಪಿಗಳ ಸ್ಯಾಂಪಲ್ಸ್ ಮ್ಯಾಚ್ ಮಾಡುವ ಸಾಧ್ಯತೆ  

13 /21

ಸಾಕ್ಷ್ಯ 13 - ಕೊಲೆ ನಡೆದ ಬಳಿಕ ಆರೋಪಿಗಳಿಂದ ದರ್ಶನ್‌ಗೆ ಪದೇ ಪದೇ ಕಾಲ್ ಹೋಗಿದ್ದು  

14 /21

ಸಾಕ್ಷ್ಯ 14 - ಮೊಬೈಲ್ ಸಿಡಿಆರ್ ಟವರ್ ಡಂಪ್ ಮೂಲಕ ಆರೋಪಿಗಳು ಒಂದೇ ಕಡೆ ಇದ್ದಿದ್ದು ಪತ್ತೆಯಾಗಿದೆ  

15 /21

ಸಾಕ್ಷ್ಯ 15 - ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಬಳಸಿದ ಕಟ್ಟಿಗೆ ಶೆಡ್‌ನಲ್ಲಿ ಪತ್ತೆ  

16 /21

ಸಾಕ್ಷ್ಯ 16 - ಹತ್ಯೆಗೂ ಮುನ್ನ ರೇಣುಕಾಸ್ವಾಮಿ ಕಟ್ಟಿಹಾಕಲು ಬಳಸಿರುವ ಹಗ್ಗ ಸಿಕ್ಕಿರೋ ಮಾಹಿತಿ  

17 /21

ಸಾಕ್ಷ್ಯ 17 - ರೇಣುಕಾಸ್ವಾಮಿ ಮೇಲೆ ಹಲ್ಲೆಗೆ ಬಳಸಿರುವ ಕಬ್ಬಿಣದ ವಸ್ತುಗಳು ಶೆಡ್‌ನಲ್ಲೇ ಪತ್ತೆ ಮಾಹಿತಿ  

18 /21

ಸಾಕ್ಷ್ಯ 18 - ಆರೋಪಿಗಳು ಶೆಡ್‌ಗೆ ಹೋಗುವ,ಹಲ್ಲೆ‌ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ  

19 /21

ಸಾಕ್ಷ್ಯ 19 - ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕರೆದುಕೊಂಡು ಬಂದ ಕಾರು  

20 /21

ಸಾಕ್ಷ್ಯ 20 - ರೇಣುಕಾಸ್ವಾಮಿ ಶವವನ್ನ ಸಾಗಾಟ ಮಾಡಲು ಬಳಸಿದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ  

21 /21

ಸಾಕ್ಷ್ಯ 21 - ಕೊಲೆ ನಡೆದ ಸ್ಥಳದಲ್ಲಿ ಆರೋಪಿಗಳು ಬಳಸಿರುವ ನೀರಿನ ಬಾಟಲ್, ಮದ್ಯದ ಬಾಟಲಿಗಳು ಪತ್ತೆ